Yelandur: ಜಾತಿ ನಿಂದನೆ: ಪ್ರಕರಣ ದಾಖಲು
Team Udayavani, Oct 1, 2024, 8:24 PM IST
ಯಳಂದೂರು: ಪ್ರೇಮಿಗಳು ಮಾತನಾಡುತ್ತಿರುವುದನ್ನು ಪ್ರಶ್ನೆ ಮಾಡಿದ ಹುಡುಗಿಯ ದೊಡ್ಡಪ್ಪನಿಗೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲೂಕಿನ ಮದ್ದೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 948 ರಸ್ತೆಯಲ್ಲಿ ಸೆ.30ರ ಸೋಮವಾರ ಸಂಜೆ ತಾಲೂಕಿನ ವಡಗೆರೆ ಗ್ರಾಮದ ಒಕ್ಕಲಿಗ ಬಡಾವಣೆಯ ನಿವಾಸಿ ಅಪ್ಪು(24) ಹಾಗೂ ತಾಲೂಕಿನ ಮದ್ದೂರು ಗ್ರಾಮದ ಚಿಕ್ಕಬಸಯ್ಯ ಎಂಬವರ ಮಗಳಾದ ಭಾರತಿ (22) ಎಂಬವರು ಮಾತನಾಡುತ್ತಿದ್ದರು.
ಈ ವೇಳೆ ಹುಡುಗಿಯ ದೊಡ್ಡಪ್ಪ ಸಿದ್ದರಾಜು(60) ಎಂಬವರು ಜಮೀನಿನ ಕಡೆ ಹೋಗುವ ಮಾರ್ಗದಲ್ಲಿ ಗಮನಿಸಿ ಈ ರೀತಿ ಮಾತನಾಡುವುದು ಸರಿಯಿಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಅಪ್ಪು ಪ್ರಚೋದನಾಕಾರಿಯಾಗಿ ಹಾಗೂ ಜಾತಿ ಬಗ್ಗೆ ಮಾತನಾಡಿ ತನ್ನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಸಿದ್ದರಾಜು ದೂರಿದ್ದಾರೆ.
ಈ ಬಗ್ಗೆ ಯಳಂದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಎರಡು ಬೈಕ್-ಕಾರು ನಡುವೆ ಅಪಘಾತ-ಮೂವರ ಸಾವು
Gundlupete: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಗಂಡು ಚಿರತೆ
Gundlupete: ಪಕ್ಕದ ಮನೆಯವರ ಮಾನಸಿಕ ಕಿರುಕುಳದಿಂದ ಮನನೊಂದು ಯುವತಿ ಆತ್ಮಹ*ತ್ಯೆ!
Gundlupete: ಬಂಡೀಪುರ ರಸ್ತೆಯಲ್ಲಿ ವಾಹನ ಸವಾರರ ಮೇಲೆ ಕಾಡಾನೆ ದಾಳಿ!
Gundlupete: ಮನೆ ಕಟ್ಟಲು ಸಾಲ ಮಾಡಿದ್ದ ಪತಿ… ಚಿಂತೆಯಿಂದ ಆತ್ಮಹತ್ಯೆಗೆ ಶರಣಾದ ಪತ್ನಿ