ಸಾಹಿತ್ಯಕ್ಕೂ ಬೇಕಿದೆ ಆಧುನಿಕ ರೂಪ
ದಂಪತಿಗಿರಲಿ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಶಕ್ತಿ •ಸಾಹಿತ್ಯ ಅವಲೋಕಿಸಿ
Team Udayavani, Aug 25, 2019, 3:03 PM IST
ಚನ್ನಗಿರಿ: ಸಂತೆಬೆನ್ನೂರಿನಲ್ಲಿ ಏರ್ಪಡಿಸಿದ್ದ 'ಮಾಸದ ಮಾತು' ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಚನ್ನಗಿರಿ: ಆಧುನಿಕ ಭರಾಟೆಯಲ್ಲಿ ಎಲ್ಲವೂ ಕೂಡ ಮಾಡರ್ನ್ ಆದಂತೆ ಸಾಹಿತ್ಯ ಕ್ಷೇತ್ರವು ಆಧುನಿಕ ರೂಪ ಪಡೆದುಕೊಳ್ಳಬೇಕಿದೆ ಎಂದು ಸಾಹಿತಿ ಪೈಜ್ನಟ್ರಜ್ ಅಭಿಪ್ರಾಯಪಟ್ಟರು.
ತಾಲೂಕಿನ ಸಂತೆಬೆನ್ನೂರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾರತಾಂಬೆ ಫೋಟೋಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದಲ್ಲಿ ದೇಶದಲ್ಲಿನ ಅವಿಸ್ಮರಣೀಯ ಘಟನೆಗಳು, ಸಂದೇಶಗಳು, ನಾಡು, ನುಡಿ, ಐತಿಹಾಸಿಕತೆ, ಧಾರ್ಮಿಕತೆ, ಪರಂಪರೆ, ಇತಿಹಾಸ ಸೇರಿದಂತೆ ಹಲವಾರು ಅಂಶಗಳನ್ನು ತಿಳಿದುಕೊಳ್ಳುವ ಶಕ್ತಿ ಸಾಹಿತ್ಯಕ್ಕಿದೆ. ಆದರೆ ಇಂದು ಸಾಹಿತ್ಯವನ್ನು ಎಷ್ಟು ಜನ ಅಭ್ಯಸುತ್ತಿದ್ದಾರೆ ಎಂದರೆ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ ಎಂದರು.
ಸಾಹಿತ್ಯವನ್ನು ಅವಲೋಕಿಸುವ ಶಕ್ತಿ ಕುಂದುತ್ತಿದೆ. ಸಾಹಿತ್ಯಕ್ಕೆ ಜೀವ ನೀಡಬೇಕಾದ ಯುವ ಸಮೂಹವು ಬೇರೆ ದಿಕ್ಕಿನಡೆ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯವನ್ನು ಪ್ರತಿಯೊಬ್ಬರಿಗೂ ಪ್ರೇರಣೆ ಆಗುವ ನಿಟ್ಟಿನಲ್ಲಿ ಹಾಗೂ ಯುವಕರನ್ನು ಸಾಹಿತ್ಯ ದಿಕ್ಕಿನಡೆಗೆ ತರಲು ಸಾಹಿತ್ಯಾತ್ಮಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಿದೆ ಎಂದರು. ರಾಮಾಯಣ, ಮಹಾಭಾರತ, ಭಗವದ್‌ಗೀತೆ, ನಂತರದಲ್ಲಿ ನಾವುಗಳು ರಾಷ್ಟ್ರೀಯ ನಾಲ್ಕನೇ ಗ್ರಂಥವನ್ನು ದಾಂಪತ್ಯ ಎನ್ನಬಹುದು. ದಂಪತಿ ಒಟ್ಟುಗೂಡಿ ನಡೆಸುವ ಸಾರಥ್ಯವೇ ದಾಂಪತ್ಯ. ಧರ್ಮೆಚಾ ಅಂದರೆ ಧರ್ಮಬಿಟ್ಟು ಹೋಗುವುದಿಲ್ಲ, ಆರ್ಥೆಚಾ ಎಂದರೆ ಸಂಪತ್ತಿಗೆ ಆಸೆ ಪಡುವುದಿಲ್ಲ, ಕಾಮೆಚಾ ಎಂದರೆ ಅನ್ಯರಲ್ಲಿ ಕಾಮಕ್ಕೆ ಆಸಕ್ತರಾಗುವುದಿಲ್ಲ. ನಾತೆಚಾರಮಿ ಎಂದರೆ ಸುಖ-ದುಃಖದಲ್ಲ್ಲಿ ಸದಾಕಾಲ ಇರುವೆ ಎನ್ನುವ ನಾಲ್ಕು ಅಂಶಗಳಿಂದ ಹಸೆಮಣೆ ಏರಿ ಮದುವೆ ಬಂಧನವಾಗುತ್ತೇವೆ. ಆದರೆ ಪ್ರಸ್ತುತ ದಾಂಪತ್ಯ ಎಂಬುದು ಪತಿ-ಪತ್ನಿ ನಡುವೆಯಲ್ಲಿ ಕೆಲ ಬಂಧನಗಳೊಂದಿಗೆ ಜೀವನ ಸಾಗಿಸುವ ಪ್ರವೃತ್ತಿಯಾಗಿದೆ. ಇದೊಂದು ದುರಂತದ ಸಂಗತಿ ಎಂದರು.
ದಾಂಪತ್ಯದಲ್ಲಿ ಪ್ರೀತಿಸುವ ಮನೋಭಾವ ಇದ್ದರೆ ಮಾತ್ರ ಜೀವನ ಯಶಸ್ವಿ ಆಗಲಿದೆ. ಕಷ್ಟು ಸುಖಗಳಲ್ಲಿ ಭಾಗಿಯಾಗುವ ಶಕ್ತಿ ಅವರಿಬ್ಬರಿಗೂ ಇರಬೇಕು. ಆಗ ಮಾತ್ರ ನೈತಿಕ ದಾಂಪತ್ಯ ಜೀವನಕ್ಕೆ ಪರಿಪೂರ್ಣ ಆಗಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ, ಎಂ. ಸಿದ್ದಪ್ಪ, ಶಿಕ್ಷಕಿ ಮಮತ ವೀರಯ್ಯ, ವಕೀಲೆ ಸಿ.ಪಿ. ಅನಿತಾ ಚಂದ್ರಶೇಖರ್, ಹೊನ್ನಪ್ಪ ಗೌಡರ್, ಸಮಾಜ ಸೇವಕ ಸಿದ್ದಿಕ್ ಅಹ್ಮದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.