ಬೀಡಿ ಉದ್ಯಮಕ್ಕೆ ಮಾರಕವಾದ ಜಿಎಸ್ಟಿ
ದೊಡ್ಡ ಬೀಡಿ ಕಂಪನಿಗಳು ಹೆಚ್ಚು ಬೀಡಿ ಉತ್ಪಾದಿಸಿದರೂ ಮಾರಾಟ ಕುಸಿತ ಕಾರ್ಮಿಕರಿಗೂ ಸಿಗುತ್ತಿಲ್ಲ ಕೆಲಸ
Team Udayavani, Sep 5, 2019, 3:54 PM IST
ಚನ್ನರಾಯಪಟ್ಟಣದಲ್ಲಿ ಗೃಹಿಣಿಯರು ಮನೆಯಲ್ಲಿ ಕುಳಿತು ಬೀಡಿ ತಯಾರಿಕೆ ಮಾಡುತ್ತಿರುವುದು.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಚನ್ನರಾಯಪಟ್ಟಣ: ಜಿಎಸ್‌ಟಿ ದರ ಇಳಿಯದೇ ದೊಡ್ಡ ಬೀಡಿ ಕಂಪನಿಗಳಿಗೆ ಮಾರಾಟದಲ್ಲಿ ಸಮಸ್ಯೆ ಯಾದರೆ ಕಾರ್ಮಿಕರಿಗೂ ಸೂಕ್ತ ಕೆಲಸ ದೊರೆ ಯುತ್ತಿಲ್ಲ, ಇದರಿಂದ ಬೀಡಿ ಉದ್ಯಮ ಅವಸಾನದ ಅಂಚಿಗೆ ಸರಿಯುತ್ತಿದ್ದು, ಬೀಡಿ ತಯಾರು ಮಾಡುವ ಕಾರ್ಮಿಕರು ಬೀದಿ ಪಾಲಾಗುವಂತಾಗಿದೆ.
ಬೀಡಿ ಉದ್ಯಮಕ್ಕೆ ಜಿಎಸ್‌ಟಿ ಮಾರಕ: ಕೇಂದ್ರ ಸರ್ಕಾರ ಬೀಡಿ ಉದ್ಯಮದ ಮೇಲೆ ಶೇ.28 ರಷ್ಟು ಜಿಎಸ್‌ಟಿ ದರ ವಿಧಿಸಿದ ಬಳಿಕವಂತೂ ಬೀಡಿ ಉದ್ಯಮ ನೆಲಕಚ್ಚಿದೆ. ಎರಡು ಮೂರು ಬಾರಿ ಎಲ್ಲಾ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ತಂದರೂ ಕೂಡ ಬೀಡಿ ಉದ್ಯಮದ ಜಿಎಸ್‌ಟಿ ಮೇಲೆ ಯಾವುದೇ ರೀತಿ ಬದಲಾವಣೆ ಮಾಡಿಲ್ಲ. ಹೀಗಾಗಿ ದೊಡ್ಡ ಬೀಡಿ ಕಂಪನಿಗಳು ಹೆಚ್ಚು ಬೀಡಿಯನ್ನು ಉತ್ಪಾದನೆ ಮಾಡಿದರೂ ಮಾರಾಟ ಮಾಡುವಲ್ಲಿ ಸಂಪೂರ್ಣ ವಿಫಲವಾಗುತ್ತಿವೆ.
ಕೆಲಸವೇ ಇಲ್ಲ: ಬೀಡಿ ತಯಾರು ಮಾಡುವ ಕಾರ್ಮಿಕರು ತಮ್ಮ ಮನೆಯಲ್ಲಿ ಕುಳಿತು ನಿತ್ಯವೂ ತಮ್ಮ ಕೈಲಾದಷ್ಟು ಬೀಡಿಗಳನ್ನು ತಯಾರು ಮಾಡಿ ತಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಕಂಪನಿಗೆ ಬೀಡಿ ನೀಡುತ್ತಿದ್ದರು. ಆದರೆ ಬೀಡಿ ವ್ಯಾಪಾರ ಮಾಡುವಲ್ಲಿ ದೊಡ್ಡ ಕಂಪನಿಗಳು ವಿಫಲ ವಾಗಿರುವುದರಿಂದ ಬೀಡಿ ತಯಾರು ಮಾಡುವ ಕಾರ್ಮಿಕರಿಗೆ ವಾರದಲ್ಲಿ ಒಂದೆರಡು ದಿವಸ ಮಾತ್ರ ಕೆಲಸ ದೊರೆಯುತ್ತಿದ್ದು, ಉಳಿದ ದಿವಸಗಳಲ್ಲಿ ಉದ್ಯೋಗವಿಲ್ಲದೇ ಕಾಲ ಕಳೆಯುವಂತಾಗಿದೆ.
ಕುಟುಂಬದ ಆದಾಯದ ಮೂಲ: ಮುಸ್ಲಿಂ ಸಮುದಾಯದ ಮಹಿಳೆಯುರೇ ಹೆಚ್ಚು ಮಂದಿ ಬೀಡಿ ತಯಾರು ಮಾಡುವ ಕಸುಬು ಕಲಿತಿದ್ದಾರೆ. ಇವರು ಹಲವು ಬೀಡಿ ಕಂಪನಿಗಳಿಗೆ ತಾವು ತಯಾರು ಮಾಡಿದ ಬೀಡಿಯನ್ನು ನೀಡಿ ಹಣ ಸಂಪಾದನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಬೀಡಿ ತಯಾರಿಕೆಯ ದೊಡ್ಡ ಕಂಪನಿಗಳು ನೇರವಾಗಿ ಜಿಎಸ್‌ಟಿ ಪಾವತಿ ಮಾಡಿ ಕೆಲಸ ಮಾಡಿದರೆ, ಖಾಸಗಿ ಕಂಪನಿಗಳು ಜಿಎಸ್‌ಟಿ ವ್ಯಾಪ್ತಿಗೆ ಬರದ ರೀತಿಯಲ್ಲಿ ವ್ಯವಹಾರ ಮಾಡುವುದರಿಂದ ಬೀಡಿಯ ದರದ ಮುಂದೆ ದೊಡ್ಡ ಕಂಪನಿಗಳು ಸೋಲುತ್ತಿವೆ.
ಈ ಕಾರಣದಿಂದ ಬೀಡಿ ಉದ್ಯಮದಲ್ಲೂ ಈಗ ಸಂಚಲನ ಉಂಟಾಗಿದೆ. ಕಾರ್ಮಿಕರಿಗೂ ಇದರಿಂದ ಸಮಸ್ಯೆ ಕಾಡುತ್ತಿದೆ ಎನ್ನುತ್ತಾರೆ ಬೀಡಿ ತಯಾರಿಕೆ ಮಾಡುವ ತಸ್ರಿನಾ ಬಾನು.
ಜಿಲ್ಲೆಯಲ್ಲಿ ಬೀಡಿ ತಯಾರು ಮಾಡುವ ಕಂಪನಿ ಗಳು ಇಲ್ಲ, ಬೀಡಿ ತಯಾರು ಮಾಡುವುದಕ್ಕೆ ಬೇಕಾಗುವ ಕಚ್ಚಾವಸ್ತುಗಳನ್ನು ಹಲವು ಕಂಪನಿಗಳು ಮನೆಗೆ ನೀಡಿ ಬೀಡಿ ತಯಾರು ಮಾಡಿಸುತ್ತಾರೆ. ಇದರಿಂದ ತಾಲೂಕಿನಲ್ಲಿ ನೂರಾರು ಕುಂಟುಂಬಗಳು ತಮ್ಮ ಬದುಕು ಕಟ್ಟಿಕೊಂಡಿವೆ. ಆದರೆ ಜಿಎಸ್‌ಟಿ ಬಂದ ಮೇಲ ಬೀಡಿ ಉದ್ಯಮ ಸಂಪೂರ್ಣ ಹಾಳಾಗಿಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.