ಶಿಥಿಲ ಕಟ್ಟಡದಲ್ಲಿದೆ ಚಿಕ್ಕ ಜಾಜೂರು ಗ್ರಂಥಾಲಯ
Team Udayavani, Nov 1, 2019, 7:40 PM IST
ಚಿಕ್ಕಜಾಜೂರು: ಮೂಲ ಸೌಲಭ್ಯ ಹಾಗೂ ಸೂಕ್ತ ಕಟ್ಟಡ ಕೊರತೆ ಮಧ್ಯೆಯೇ ಇಲ್ಲಿನ ಗ್ರಂಥಾಲಯ ಕಳೆದ 30 ವರ್ಷಗಳಿಂದ ಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿದೆ.
1988ರಲ್ಲಿ ಆರಂಭಗೊಂಡ ಸಾರ್ವಜನಿಕ ಗ್ರಂಥಾಲಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಆರಂಭದಲ್ಲಿ ಗ್ರಾಮದ ಸಹಕಾರ ಸಂಘದ ಮಳಿಗೆಯಲ್ಲಿ ಗ್ರಂಥಾಲಯ ಆರಂಭಿಸಲಾಯಿತು.
ಎರಡು ವರ್ಷಗಳ ನಂತರ 1990ರಲ್ಲಿ ಹಳೇ ಗ್ರಾಪಂ ಕಚೇರಿ ಹಿಂಭಾಗ ಒಂದು ಸಣ್ಣ ಕೊಠಡಿಗೆ ಸ್ಥಳಾಂತರಿಸಲಾಯಿತು. 6 ವರ್ಷಗಳ ನಂತರ 1996-97ರಲ್ಲಿ ಸರ್ಕಲ್ ಶಾಲೆ ಪಕ್ಕದ ಒಂದು ಶಿಥಿಲ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಲಾಯಿತು.
2004-05ರಲ್ಲಿ ಗ್ರಾಪಂ ಸದಸ್ಯರೊಬ್ಬರು ಗ್ರಾಪಂ ಆವರಣದಲ್ಲಿ ನಿರ್ಮಿಸಿದ್ದ 20*15 ಅಳತೆಯ ಒಂದು ಚಿಕ್ಕ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಗೊಂಡಿತು. ಅಂದಿನಿಂದ ಅದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಕಟ್ಟಡ ನಿರ್ಮಿಸಿ ಹಲವಾರು ವರ್ಷಗಳಾಗಿವೆ. ಒಮ್ಮೆ ಅಷ್ಟೇ ಸುಣ್ಣ ಬಣ್ಣ ಬಳಿಯಲಾಗಿದೆ.ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ.
ವಾಚನಾಸಕ್ತರ ಸಂಖ್ಯೆ ಇಳಿಮುಖ: ಗ್ರಂಥಾಲಯಕ್ಕೆ ಸೂಕ್ತ ಕಟ್ಟಡ ಇಲ್ಲದಿರುವುದರಿಂದ ಜ್ಞಾನ ದೇಗುಲದ ಪುಸ್ತಕಗಳು ಧೂಳು ಹಿಡಿಯುತ್ತಿವೆ. ಕೇಂದ್ರ ಸರ್ಕಾದಿಂದ ಗಾಂ ಧಿ ಗ್ರಾಮ ಪ್ರಶಸ್ತಿ ಪಡೆದು “ಎ’ ಗ್ರೇಡ್ ಪಂಚಾಯತ್ ಎಂಬ ಹೆಗ್ಗಳಿಕೆ ಹೊಂದಿರುವ ಚಿಕ್ಕಜಾಜೂರು ಸುಮಾರು 5-6 ಸಾವಿರ ಜನಸಂಖ್ಯೆ ಇರುವ ಗ್ರಾಮ. ಸರ್ಕಾರಿ, ಖಾಸಗಿ, ಶಾಲಾ-ಕಾಲೇಜುಗಳಿವೆ. ಆದರೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ವಾಚನಾಲಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.
ಆರಂಭದಲ್ಲಿ ಸಾಕಷ್ಟು ಪುಸ್ತಕ, ಪತ್ರಿಕೆಗಳು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ ಕಡಿಮೆಯಾಗಿದೆ.
ಪುಸ್ತಕ, ಪತ್ರಿಕೆಗಳ ಖರೀದಿಗೆ ಕೇವಲ 400 ರೂ. ಬರುತ್ತಿದೆ. ಗ್ರಂಥಾಲಯದೊಳಗೆ 8 ರಿಂದ 9 ಜನರು ಮಾತ್ರ ಓದಲು ಅವಕಾಶವಿದೆ. 15 ಕುರ್ಚಿಗಳಿದ್ದರೂ 6 ಕುರ್ಚಿಗಳು ಬಳಕೆಗೆ ಯೋಗ್ಯವಾಗಿಲ್ಲ. ಪುಸ್ತಕ ಜೋಡಿಸಲು 4 ಕಬ್ಬಿಣದ ಕಪಾಟುಗಳು, ಒಂದು ಟೇಬಲ್ ಹೊರತು ಪಡಿಸಿ ಬೇರಾವ ಸೌಲಭ್ಯವೂ ಇಲ್ಲ.
ಅಸಮರ್ಪಕ ನಿರ್ವಹಣೆಯಿಂದ ಪುಸ್ತಕಗಳು ಧೂಳು ಹಿಡಿಯುತ್ತಿವೆ. ಗ್ರಂಥಾಲಯ ಸುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಛಾವಣಿಗೆ ಅಳವಡಿಸಿರುವ ಸಿಮೆಂಟ್ ಶೀಟ್‌ಗಳು ಸಂಪೂರ್ಣ ಹಾಳಾಗಿವೆ.
ಸಂಜೆಯಾದರೆ ಸೊಳ್ಳೆ, ಕ್ರಿಮಿ ಕೀಟಗಳ ಹಾವಳಿ ಶುರುವಾಗುತ್ತದೆ. ಗ್ರಂಥಾಲಯದ ಸಮೀಪದಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಓದುಗರಿಗೆ ಕಿರಿಕಿರಿಯಾಗುತ್ತಿದೆ.
ಇ-ಗ್ರಂಥಾಲಯವನ್ನಾಗಿ ಮಾರ್ಪಡಿಸಿ: ಸುಮಾರು 8 ರಿಂದ 10 ಸಾವಿರದಷ್ಟಿದ್ದ ಪುಸ್ತಕಗಳ ಸಂಖ್ಯೆ ಈಗ 4300ಕ್ಕೆ ಇಳಿದಿದೆ. ವರ್ಷಕ್ಕೆ 100 ರಿಂದ 150 ಪುಸ್ತಕಗಳಷ್ಟೇ ಹೊಸದಾಗಿ ಸೇರ್ಪಡೆಯಾಗುತ್ತವೆ.
600-700 ಸದಸ್ಯರಿದ್ದ ಗ್ರಂಥಾಲಯದಲ್ಲಿ ಈಗ ಕೇವಲ 185 ಸದಸ್ಯರಿದ್ದಾರೆ. ಯುವ ಓದುಗರನ್ನು ಡಿಜಿಟಲ್ ಗ್ರಂಥಾಲಯ ಸೆಳೆಯುತ್ತಿರುವ ಕಾಲವಿದು. ಅಂಥದ್ದರಲ್ಲಿ ಸೌಕರ್ಯ ಕೊರತೆ ಇರುವ ಗ್ರಂಥಾಲಯಕ್ಕೆ ಯಾರೂ ಬರಲ್ಲ. ಹಾಗಾಗಿ ವಾಚನಾಸಕ್ತರ ಗಮನ ಸೆಳೆಯಲು ಡಿಜಿಟಲ್ ಹಾಗೂ ಇ-ಗ್ರಂಥಾಲಯ ಸೌಲಭ್ಯ ಕಲ್ಪಿಸಬೇಕು. ಸುಸಜ್ಜಿತ ಕಟ್ಟಡ ನಿರ್ಮಿಸಿ ಪುಸ್ತಕ ಪ್ರಿಯರನ್ನು ಗ್ರಂಥಾಲಯಗಳ ಕಡೆ ಬರುವಂತೆ ಆಕರ್ಷಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.