ಕೋವಿಡ್ ನಡುವೆಯೂ ರೈತ, ಸ್ತ್ರೀ ಶಕ್ತಿ ಪರ ಡಿಸಿಸಿ ಬ್ಯಾಂಕ್
Team Udayavani, Nov 7, 2020, 3:35 PM IST
ಸಾಂದರ್ಭಿಕ ಚಿತ್ರ
ಚಿಂತಾಮಣಿ: ಕೋವಿಡ್ 19 ಸಮಯದಲ್ಲೂ ರೈತರು ಮತ್ತು ಸ್ತ್ರೀಶಕ್ತಿ ಮಹಿಳಾ ಸಂಘಗಳಿಗೆ ಹೆಚ್ಚಿನ ಸಾಲ ನೀಡಿ ಎಲ್ಲರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಬ್ಯಾಂಕ್ ಡಿಸಿಸಿ ಬ್ಯಾಂಕ್ ಎಂದು ಕೋಲಾರ-ಚಿಕ್ಕಬಳ್ಳಾಪುರ ಸಹಕಾ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರ ಹೊರ ವಲಯದ ಕಟಮಾಚನಹಳ್ಳಿ ಕ್ರಾಸ್ ನಲ್ಲಿರುವ ಆರ್.ಕೆ.ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿ ಕೊಂಡಿದ್ದಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ 2019-2020ನೇ ಸಾಲಿನ58ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಠೇವಣಿಗೆ ಹಿಂಜರಿಕೆ: ಸಾರ್ವಜನಿಕರು ತಮ್ಮ ಬಳಿಇರುವ ಹಣವನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ಡಿಪಾಜಿಟ್ ಮಾಡುತ್ತಾರೆ. ಆದರೆ ನಮ್ಮ ಬ್ಯಾಂಕ್ ನಲ್ಲಿ ಹಣ ಡಿಪಾಜಿಟ್ ಮಾಡಲು ಹಿಂಜರಿ ಯುತ್ತಾರೆ. ದೇಶದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಸಾಲ ಪಡೆಯುತ್ತಿರುವುದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ. ಬ್ಯಾಂಕ್‌ನ ಸಂಕಷ್ಟದ ವೇಳೆಹೋರಾಟ ಮಾಡಿದ್ದು ನಾವು ಎಂದರು.
ಸಭೆಯಲ್ಲಿ ನೆರೆದ್ದಿದ ಸಭಿಕರ ಪ್ರಶ್ನೆಗೆ ಉತ್ತರಿಸುತ್ತಾ, ನಬಾರ್ಡ್ ಮತ್ತು ಆರ್‌ಬಿಐ ಗಿಂತ ದೊಡ್ಡವರು ನಾವಲ್ಲ.ಅವರು ನೀಡಿರುವ ನಿಯಮ ಪಾಲಿಸುತ್ತಿದ್ದೇವೆ. ಸ್ತ್ರೀಶಕ್ತಿ ಸಂಘಗಳಿಗೆ1ರಿಂದ3 ಲಕ್ಷ ವರೆಗಿನ ಸಾಲ 5-10 ರವರೆಗೆ ನೀಡಬೇಕೆಂಬ ಆಸೆ ಇದೆ. ಆದರೆ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಕೇವಲ 15 ರೂ.ಸಾಲ ನೀಡುವ ಶಕ್ತಿ ಇಲ್ಲದ ಎಂಪಿಸಿಎಸ್‌ನಲ್ಲಿ ಇಂದು 15 ಕೋಟಿ ವರೆಗೂ ಸಾಲ ನೀಡಿದ್ದೇವೆ. ಅವಳಿ ಜಿಲ್ಲೆಯಲ್ಲಿರುವ ರೈತರು ಪ್ರಾಮಾಣಿಕರಾಗಿದ್ದು, ಶೇ.100ಕ್ಕೆ 95 ರಂತೆ ಹಣ ವಾಪಸ್ ಕಟ್ಟಲು ಸಾಲಿನಲ್ಲಿ ನಿಂತಿದ್ದಾರೆಂದರು.
ವ್ಯವಹರಿಸಿ: ದೇಶದಲ್ಲೇ ಮೈಕ್ರೋ ಎಟಿಎಂಕಾರ್ಡ್ ಮೂಲಕ ಖಾತೆದಾರರಿಗೆ ಹಣ ಸಿಗುವಂತೆ ಮಾಡಿರುವುದು ಡಿಸಿಸಿ ಬ್ಯಾಂಕ್. ಎಂಪಿಸಿಎಸ್ ಸೇರಿದಂತೆ ಎರಡು ಅವಳಿ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಆಡಳಿತ ಮಂಡಳಿ ನಮ್ಮ ಬ್ಯಾಂಕ್‌ನಲ್ಲಿ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡಬೇಕೆಂದರು.
ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಅಪೆಕ್ಸ್ ಬ್ಯಾಂಕ್ ನಾಮಿನಿ ಜಿಲ್ಲೆಯ ನಿರ್ದೇಶಕಿ ರೂಪಕಲಾ ಶಶಿಧರ್, ಬ್ಯಾಂಕ್‌ನ ಎಂ.ಡಿ ಎಂ.ರವಿ, ಎ.ಜಿ.ಎಂ.ಶಿವಕುಮಾರ್, ಜಿಲ್ಲೆಯ ನಿರ್ದೇಶಕ ರಾದ ನೀಲಕಂಠೆಗೌಡ, ಸೋಮಶೇಖರ್, ಅನಿಲ್ ಕುಮಾರ್, ಚಿಂತಾಮಣಿ ನಾಗಿರೆಡ್ಡಿ, ಹನು ಮಂತರೆಡ್ಡಿ, ವೆಂಕಟರೆಡ್ಡಿ, ಅಶ್ವತ್ಥಪ್ಪ, ವೆಂಕಟಪ್ಪ, ಸೊನ್ನೇಗೌಡ, ದಯಾನಂದ್, ಗೋವಿಂದರಾಜು, ಆರ್.ನಾರಾಯಣರೆಡ್ಡಿ, ಮೋಹನ್ ರೆಡ್ಡಿ, ವೆಂಕಟ ಶಿವಾರೆಡ್ಡಿ, ವೇದ, ಪಾಡುರಂಗ, ಎಂ.ರವಿ, ಕೆ.ಎಂ. ಎಫ್ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣಬಾಬು, ಹನುಮೇಗೌಡ, ಬೈರಾರೆಡ್ಡಿ, ಅವಳಿ ಜಿಲ್ಲೆಯ ಎಲ್ಲ ಎಂಪಿಸಿಎಸ್ ಮತ್ತು ವಿಎಸ್‌ಎಸ್‌ಎನ್ ಅಧ್ಯಕ್ಷರು, ನಿರ್ದೇಶಕರು,ಕಾರ್ಯದರ್ಶಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.