14 ಮಾದರಿ ಅಂಗನವಾಡಿ ಕೇಂದ್ರ
ಬಾಗೇಪಲ್ಲಿ ತಾಲೂಕಿನ ಚಿಣ್ಣರನ್ನುಆಕರ್ಷಿಸಲು ಕಲಾಕೃತಿ ಬರವಣಿಗ
Team Udayavani, Oct 17, 2020, 4:10 PM IST
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಅಂಗನ ವಾಡಿ ಕೇಂದ್ರಗಳು ವರ್ಣರಂಜಿತ ಬಣ್ಣದ ಗೋಡೆಗಳು, ಕೊಠಡಿಗಳ ನಾಲ್ಕು ಗೋಡೆಗಳಮೇಲೆ ವಿವಿಧ ಆಕರ್ಷಕಕಲಾಕೃತಿ ಬರವಣಿಗೆ ಹಾಗೂ ಅಂಕಿಗಳಿಂದ ಅಲಂಕೃತಗೊಂಡು ಚಿಣ್ಣರನ್ನುಕೈಬೀಸಿ ಕರೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ವೈಭವಪೂರಿತ ಲಿಕೆ ನೀಡುವ ಭಾವನೆಗಳು ಹೆಚ್ಚಾಗಿದ್ದು, ಖಾಸಗಿ ಆಂಗ ಮಾಧ್ಯಮದಚಿಲ್ಡ್ರನ್ಸ್ ಪ್ಲೇ ಹೋಂ, ಕಿಡ್ಸ್ ಶಾಲೆಗಳಿಗೆ ಮೊರೆಹೋಗುತ್ತಿದ್ದಾರೆ. ಖಾಸಗಿ ಕಿಡ್ಸ್ ಸೆಂಟರ್‌ಗಳಿಗೆ ಸೆಡ್ಡು ಹೊಡೆಯುವನಿಟ್ಟಿನಲ್ಲಿ ತಾಲೂಕಿನ 14 ಅಂಗ ನವಾಡಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಸಿಂಗಾರಗೊಳಿಸಿದ್ದಾರೆ.
381 ಮಂಜೂರು: ತಾಲೂಕಿನಾದ್ಯಂತ 381 ಅಂಗನವಾಡಿಕೇಂದ್ರಗಳುಮಂಜೂರಾಗಿದ್ದು, 178 ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಉಳಿದಂತೆ 14 ಕೇಂದ್ರಗಳು ಗ್ರಾಪಂ ಕಟ್ಟಡಗಳಲ್ಲಿ, 10 ಸಮುದಾಯ ಭವನಗಳಲ್ಲಿ, 51 ಸರ್ಕಾರಿ ಶಾಲೆಯ ಕಟ್ಟಡಗಳಲ್ಲಿ, ನಗರ ಪ್ರದೇಶದಲ್ಲಿ 25 ಕೇಂದ್ರಗಳಿದ್ದು ನಿವೇಶನ ರಹಿತ ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ 25 ಕೇಂದ್ರಗಳನ್ನು ಬಾಡಿಗೆ ಕಟ್ಟಡದಲ್ಲಿ, 52 ಕೇಂದ್ರಗಳನ್ನು ನಿವೇಶ ರಹಿತ ಕಟ್ಟಡಗಳಲ್ಲಿ ನಿರ್ವಹಿಸುತ್ತಿವೆ. ಮತ್ತೆ ಕೆಲ ಅಂಗನವಾಡಿ ಕೇಂದ್ರಗಳು ಎಲ್ಲಿ ಸರ್ಕಾರಿ ಇಲಾಖೆಯ ಕೊಠಡಿಗಳಿದ್ದರೆ ಅಲ್ಲಿ ನಿರ್ವಹಿಸಲಾಗುತ್ತದೆ.
ಮಾದರಿ ಅಂಗನವಾಡಿ ಕೇಂದ್ರಗಳ ವೈಶಿಷ್ಟ್ಯ: ಮಳೆ ನೀರು ಕೊಯ್ಲು, ಬಾಲ ಗ್ರಂಥಾಲಯ, ಗೋಡೆ ಗಡಿಯಾರ, ಸಮರ್ಪಕ ವಿದ್ಯುತ್,ಕೈ ತೋಟ, ಸಮವಸ್ತ್ರ, ಒಳಾಂಗಣ, ಹೊರಾಂಗಣ, ನೆಲ ಕಲಾಕೃತಿಗಳು, ಆಕರ್ಷಿತ ಬಣ್ಣದ ಶೌಚಾಲಯ, ವಿವಿಧ ಬಗೆಯ ಆಟದ ಸಾಮಗ್ರಿಗಳು ಇರುತ್ತವೆ.
ಕೇಂದ್ರಗಳ ವಿವರ: ತಾಲೂಕಿನ ಹೊಸಕೋಟೆ, ಆದಿಗಾನಹಳ್ಳಿ,ಮಿಟ್ಟವಾಂಡಪಲ್ಲಿ,ಕಮ್ಮರವಾರ ಪಲ್ಲಿ, ದೇವರಗುಡಿಪಲ್ಲಿ, ಗೂಳೂರು, ದುಗ್ಗಿನಾ ಯಕನಹಳ್ಳಿ, ಗುವ್ವಲವಾರಪಲ್ಲಿ, ಮಾರಗಾನುಕುಂಟೆ, ಶ್ರೀನಿವಾಸಪುರ, ಕಾನಗಮಾಕಲಪಲ್ಲಿ, ಬಿಳ್ಳೂರು,ಕಾರಕೂರು, ಮಿಟ್ಟೇಮರಿ ಗ್ರಾಮ.
16,461 ಮಕ್ಕಳು ಅಂಗನವಾಡಿಗಳಲ್ಲಿ ವ್ಯಾಸಂಗ : ತಾಲೂಕಿನಾದ್ಯಂತ16,461 ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿದ್ದು,6 ತಿಂಗಳಿನಿಂದ 1 ವರ್ಷದೊಳಗೆ1,846 ಮಕ್ಕಳು,1 ರಿಂದ 2 ವರ್ಷದೊಳಗೆ2,934 ಮಕ್ಕಳು,2 ವರ್ಷದಿಂದ3 ವರ್ಷದೊಳಗೆ3,043 ಮಕ್ಕಳು,3 ವರ್ಷದಿಂದ5 ವರ್ಷ ದೊಳಗೆ3,927 ಮಕ್ಕಳು,5 ವರ್ಷದಿಂದ6 ವರ್ಷದೊಳಗಿನವರು1,267 ಮಕ್ಕಳಿದ್ದಾರೆ.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೋಜನೆಯ ಹಲವು ಸೌಲಭ್ಯಗಳನ್ನು ಬಳಸಿಕೊಂಡು ಶ್ರೀನಿವಾಸಪುರ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ನಿರ್ಮಿಸಲಾಗಿದೆ. – ರಾಮಕೃಷ್ಣ, ಪಿಡಿಒ ಪರಗೋಡು ಗ್ರಾಪಂ
ಸರ್ಕಾರದಿಂದ ಮಳೆಕೊಯ್ಲು, ಇಂಗು ಗುಂಡಿ,ಕೈ ತೋಟಕ್ಕೆನರೇಗಾಯೋಜನೆಯಡಿಯಲ್ಲಿಮಾತ್ರ ಅನುದಾನ ನೀಡುತ್ತದೆ. ಉಳಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಸ್ಥಳೀಯ ಜನಪ್ರತಿನಿಧಿಗಳ,ಗ್ರಾಮಸ್ಥರ, ದಾನಿಗಳ ಹಾಗೂ ಗ್ರಾಮ ಪಂಚಾಯತಿ ಸಹಕಾರ ಪಡೆದುಕೊಂಡು ತಾಲೂಕಿನ 14ಕೇಂದ್ರಗಳನ್ನು ಮಾದರಿ ಅಂಗನ ವಾಡಿ ಕೇಂದ್ರಗಳನ್ನಾಗಿ ಮಾಡಲಾಗಿದೆ. – ಎನ್.ಪಿ.ರಾಜೇಂದ್ರ ಪ್ರಸಾದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಾಗೇಪಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.