ಸವಾರರ ವಿರುದ್ಧ 1,448 ಕೇಸ್, 10.87 ಲಕ್ಷ ರೂ. ದಂಡ
Team Udayavani, Sep 10, 2019, 3:00 AM IST
ಚಿಕ್ಕಬಳ್ಳಾಪುರ: ದೇಶಾದ್ಯಂತ ಕೇಂದ್ರ ಸರ್ಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆ-2018, ವಾಹನ ಸವಾರರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಿಲ್ಲಾದ್ಯಂತೆ ಕಾಯ್ದೆ ಅನುಷ್ಠಾನಗೊಳಿಸಿದ 4ನೇ ದಿನದ ವೇಳೆಗೆ ರಸ್ತೆ ಸಂಚಾರಿ ನಿಯಮಗಳ ಉಲ್ಲಂಘನೆಯಡಿ ಬರೋಬರಿ 1,448 ಪ್ರಕರಣ ದಾಖಲಿಸಿ 10.87 ಲಕ್ಷ ರೂ, ಭಾರೀ ಮೊತ್ತದ ದಂಡ ವಸೂಲಿ ಮಾಡಲಾಗಿದೆ.
ಸೆ.ರಿಂದ 8ರವರೆಗೆ: ರಸ್ತೆ ಸಂಚಾರಿ ನಿಯಮ ಉಲ್ಲಂ ಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ಬಳಿಕ ಜಿಲ್ಲೆಯಲ್ಲಿ ಸೆ.5 ರಿಂದ ಸೆ.8ರ ಸಂಜೆ ವೇಳೆಗೆ ಜಿಲ್ಲೆಯಲ್ಲಿ ಕಾಯ್ದೆ ಉಲ್ಲಂಘನೆಯಡಿ ಒಟ್ಟು 1,448 ಕೇಸ್ ದಾಖಲಿಸಿ ಲಕ್ಷ ಲಕ್ಷ ದಂಡ ವಸೂಲಿ ಮಾಡಿರುವುದು ವಾಹನ ಸವಾರರಲ್ಲಿ ಸಂಚಲನ ತಂದಿದೆ.
ಸವಾರರಿಗೆ ಎಚ್ಚರಿಕೆ ಸೂಚನೆ: ಪೊಲೀಸ್ ಇಲಾಖೆ, ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಕಾರ್ಯಾಚರಣೆಗೆ ಇಳಿದು ರಸ್ತೆ ನಿಯಮ ಉಲ್ಲಂ ಸಿ ಸಂಚರಿಸುವ ವಾಹನ ಸವಾರರು, ರಸ್ತೆ ಸುರಕ್ಷತಾ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ಪ್ರಯೋಗ ಮಾಡಿ ಎಚ್ಚರಿಕೆ ನೀಡುತ್ತಿದ್ದಾರೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ರಸ್ತೆ ನಿಯಮ ಪಾಲಿಸದೇ ಅತಿವೇಗ ಹಾಗೂ ದಾಖಲೆ ಇಲ್ಲದ ವಾಹನ ಸವಾರರಿಗೆ ಸಾವಿರಗಟ್ಟಲೇ ದಂಡ ವಿಧಿಸುತ್ತಿದ್ದಾರೆ.
ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾದ್ಯಂತ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಿರುವ ಮೋಟಾರು ವಾಹನ ಕಾಯ್ದೆ ಅನ್ವಯ ಕಳೆದ ಸೆ.5 ರಿಂದ 8 ರ ತನಕ ರಸ್ತೆ ಸಂಚಾರಿ ನಿಯಮ ಉಲ್ಲಂ ಸಿದ್ದಕ್ಕೆ ಒಟ್ಟು 1,448 ಪ್ರಕರಣ ದಾಖಲಿಸಿ ಒಟ್ಟು 10.87,500 ರೂ, ದಂಡ ವಸೂಲಿ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೆಲ್ಮೆಟ್ ಧರಿಸದೇ ಇರುವುದಕ್ಕೆ ದಂಡ ಹಾಕಲಾಗಿದೆ. ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಕಾಯ್ದೆಯಡಿ ಸೂಚಿಸಿರುವ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದ್ದಾರೆ.
ರಸ್ತೆ ಸುರಕ್ಷತಾ ನಿಯಮ ಪಾಲಿಸದಿದ್ದಕ್ಕೆ ದಂಡ ಹಾಕುವುದು ಸರಿ. ಆದರೆ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಹೊಸ ಮೋಟಾರು ವಾಹನ ಕಾಯ್ದೆಯಡಿ ವಿಧಿಸುತ್ತಿರುವ ದಂಡ ಹಗಲು ದರೋಡೆ ಅಗಿದೆ. ಸಾಮಾನ್ಯ ಜನರಿಗೆ ಇದರಿಂದ ಸಾಕಷ್ಟು ಹೊರೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ದಂಡ ಪರಿಷ್ಕರಿಸಬೇಕು. ಇಲ್ಲದಿದ್ದರೆ ಸಾಮಾನ್ಯ ಜನತೆ ಬೀದಿಗಿಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
-ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘದ ಮುಖಂಡ
ನಿಯಮ ಉಲ್ಲಂಘನೆ ಕೇಸು ದಂಡ(ಸಾವಿರ)
ಅತಿವೇಗ ಚಾಲನೆ 3 4000
ಹೆಚ್ಚು ಪ್ರಯಾಣಿಕರ ಸಂಚಾರ 93 36,700
ಕರ್ಕಶ ಶಬ್ಧ 1 100
ಚಾಲನಾ ಪರವಾನಗಿ ಇಲ್ಲದ್ದು 7 39000
ಸಿಗ್ನಲ್ ಜಂಪ್ 1 2000
ವಾಹನ ನೋಂದಣಿ ಸಂಖ್ಯೆ ಇಲ್ಲದ್ದು 2 1,000
ಸಮವಸ್ತ್ರ ಇಲ್ಲದೇ ಚಾಲನೆ 343 1,71,500
ವಿಮೆ ದಾಖಲೆ ಇಲ್ಲದ್ದು 3 6,000
ತ್ರಿಬಲ್ ರೈಡಿಂಗ್ 3 3,000
ಮೊಬೈಲ್ ಬಳಕೆ 10 23,000
ಸೀಟ್‌ಬೆಲ್ಟ್ ಇಲ್ಲದ್ದು 81 80.500
ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ 437 4,36000
ಇತರೆ 461 2,80,700
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.