ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15,476 ವಿದ್ಯಾರ್ಥಿಗಳು ಸಜ್ಜು
Team Udayavani, Dec 19, 2019, 3:00 AM IST
ಚಿಕ್ಕಬಳ್ಳಾಪುರ: ಬರುವ ವರ್ಷ ಮಾರ್ಚ್ 27 ರಿಂದ ಆರಂಭಗೊಂಡು ಏಪ್ರಿಲ್ 9ಕ್ಕೆ ಕೊನೆಗೊಳ್ಳಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಈ ಬಾರಿ ಬರೋಬ್ಬರಿ 15,476 ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿ ಆಂತಿಮಗೊಳಿಸಿದ ಬೆನ್ನಲೇ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಿದ್ಧಪಡಿಸಿದೆ.
ಜಿಲ್ಲೆಯಲ್ಲಿ ಒಟ್ಟು 7,949 ಬಾಲಕರು ಹಾಗೂ 7,527 ಬಾಲಕಿಯರು ಸೇರಿ ಒಟ್ಟು 15,476 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಆ ಪೈಕಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 6,969 ಇದ್ದರೆ, ವಸತಿ ಶಾಲೆಗಳಲ್ಲಿ ಒಟ್ಟು 585 ಹಾಗೂ ಅನುದಾನನಿತ ಶಾಲೆಗಳಲ್ಲಿ 2,916 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 5006 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಬಾಗೇಪಲ್ಲಿ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಈ ವರ್ಷ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೀಕ್ಷೆಯಲ್ಲಿ ಸರ್ಕಾರಿ 1,334 ಮಕ್ಕಳು, ವಸತಿ ಶಾಲೆಯ 92, ಅನುದಾನಿತ ಶಾಲೆಗಳ 161 ಹಾಗೂ ಅನುದಾನ ರಹಿತ ಶಾಲೆಗಳ ಒಟ್ಟು 738 ವಿದ್ಯಾರ್ಥಿಗಳು ಸೇರಿ ಒಟ್ಟು 1,176 ಬಾಲಕರು ಹಾಗೂ 1149 ಬಾಲಕಿಯರು ಸೇರಿ ಒಟ್ಟು 2,325 ವಿದ್ಯಾರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಬರೆಯಲಿದ್ದಾರೆ.
ಚಿಕ್ಕಬಳ್ಳಾಪುರ: ತಾಲೂಕಿನಲ್ಲಿ ಒಟ್ಟು ಈ ವರ್ಷ 15 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಆ ಪೈಕಿ ಸರ್ಕಾರಿ ಶಾಲಾ ಮಕ್ಕಳು ಒಟ್ಟು 939, ವಸತಿ ಶಾಲೆಯ 115 ಮಕ್ಕಳು, ಅನುದಾನಿತ 317 ಹಾಗೂ ಅನುದಾನ ರಹಿತ ಶಾಲೆಗಳ ಒಟ್ಟು 1061 ವಿದ್ಯಾರ್ಥಿಗಳು ಸೇರಿ 1,449 ಬಾಲಕರು ಹಾಗೂ 1356 ಬಾಲಕಿಯರು ಸೇರಿ ಒಟ್ಟು 2805 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಚಿಂತಾಮಣಿ: ತಾಲೂಕಿನಲ್ಲಿ ಒಟ್ಟು ಈ ವರ್ಷ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು ಆ ಪೈಕಿ ಸರ್ಕಾರಿ ಶಾಲೆಗಳ ಒಟ್ಟು 1,289, ವಸತಿ ಶಾಲೆಗಳಿಂದ ಒಟ್ಟು 137, ಅನುದಾನಿತ ಶಾಲೆಗಳ 516 ಹಾಗೂ ಅನುದಾನ ರಹಿತ ಶಾಲೆಗಳ 1,730 ಸೇರಿ 1,969 ಬಾಲಕರು, 1,703 ಬಾಲಕಿಯರು ಸೇರಿ ಒಟ್ಟು 3,672 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಗೌರಿಬಿದನೂರು: ತಾಲೂಕಿನಲ್ಲಿ ಈ ವರ್ಷ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಸರ್ಕಾರಿ ಶಾಲೆ ಮಕ್ಕಳು ಒಟ್ಟು 1,892, ವಸತಿ ಶಾಲೆಗಳ 94, ಅನುದಾನಿತ ಶಾಲೆಗಳ 943 ಹಾಗೂ ಅನುದಾನ ರಹಿತ ಶಾಲೆಗಳ 561 ವಿದ್ಯಾರ್ಥಿಗಳು ಸೇರಿ 1,732 ಬಾಲಕರು ಹಾಗೂ 1,758 ಬಾಲಕಿಯರು ಸೇರಿ ಒಟ್ಟು 3,490 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಗುಡಿಬಂಡೆ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಒಟ್ಟು 654 ವಿದ್ಯಾರ್ಥಿಗಳು, ವಸತಿ ಶಾಲೆಗಳ 50 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ ಒಟ್ಟು 60 ವಿದ್ಯಾರ್ಥಿಗಳು ಸೇರಿ ಒಟ್ಟು 376 ಬಾಲಕರು ಹಾಗೂ 388 ಬಾಲಕಿಯರು ಸೇರಿ ಒಟ್ಟು 764 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಶಿಡ್ಲಘಟ್ಟ ತಾಲೂಕಿನಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಆ ಪೈಕಿ ಈ ವರ್ಷ ಸರ್ಕಾರಿ ಶಾಲೆಗಳ ಒಟ್ಟು 861 ವಿದ್ಯಾರ್ಥಿಗಳು, ವಸತಿ ಶಾಲೆಗಳ 97 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 546 ವಿದ್ಯಾರ್ಥಿಗಳು, ಅನುದಾನ ರಹಿತ ಶಾಲೆಗಳ ಒಟ್ಟು 916 ವಿದ್ಯಾರ್ಥಿಗಳು ಸೇರಿ 1,247 ಬಾಲಕರು ಹಾಗೂ 1,173 ಬಾಲಕಿಯರು ಸೇರಿ ಒಟ್ಟು 2,420 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.
65 ಕೇಂದ್ರಗಳಲ್ಲಿ ಪರೀಕ್ಷೆ: 2019-20ನೇ ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 65 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 111 ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು 6,969 ವಿದ್ಯಾರ್ಥಿಗಳು, 13 ವಸತಿ ಶಾಲೆಗಳ ಒಟ್ಟು 585, 45 ಅನುದಾನಿತ ಶಾಲೆಗಳ ಒಟ್ಟು 2,916 ವಿದ್ಯಾರ್ಥಿಗಳು ಹಾಗೂ 118 ಅನುದಾನ ರಹಿತ ಶಾಲೆಗಳ ಒಟ್ಟು 5006 ವಿದ್ಯಾರ್ಥಿಗಳು ಸೇರಿ 7,949 ಬಾಲಕರು, 7,527 ಬಾಲಕಿಯರು ಸೇರಿ ಒಟ್ಟು 15,476 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ತಾಲೂಕು ವಿದ್ಯಾರ್ಥಿಗಳ ಸಂಖ್ಯೆ ಕೇಂದ್ರಗಳ ಸಂಖ್ಯೆ
ಬಾಗೇಪಲ್ಲಿ 2,325 8
ಚಿಕ್ಕಬಳ್ಳಾಪುರ 2805 15
ಚಿಂತಾಮಣಿ 3,672 14
ಗೌರಿಬಿದನೂರು 3,490 14
ಗುಡಿಬಂಡೆ 764 4
ಶಿಡ್ಲಘಟ್ಟ 2,420 10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.