18,322 ಕಾರ್ಮಿಕರಿಗೆ ತಲುಪಿಲ್ಲ 2,000
ಜಿಲ್ಲೆಯಲ್ಲಿ ಇದುವರೆಗೂ ಸಿಕ್ಕಿದ್ದು 9,606 ಕಾರ್ಮಿಕರಿಗೆ; ಇಂದು ಕಾರ್ಮಿಕರ ದಿನಾಚರಣೆ
Team Udayavani, May 1, 2020, 12:08 PM IST
ಚಿಕ್ಕಬಳ್ಳಾಪುರ: ಕೋವಿಡ್ ಸಂಕಷ್ಟದಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್‌ಡೌನ್ ಘೋಷಿಸಿವೆ. ಇದರ ಪರಿಣಾಮ ಒಪ್ಪೊತ್ತಿನ ಊಟಕ್ಕೆ ದುಡಿದು ತಿನ್ನುತ್ತಿದ್ದ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಬದುಕು ತತ್ತರವಾಗಿದೆ. ಆದರೆ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕ ಆಯುಕ್ತಾಲಯ ನೀಡುತ್ತಿರುವ 2,000 ರೂ. ಠೇವಣಿ ಜಿಲ್ಲೆಯ 18,322 ಮಂದಿ ಕಾರ್ಮಿಕರಿಗೆ ಇನ್ನೂ ತಲುಪಿಲ್ಲ.
ರಾಜ್ಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 2,000 ರೂ. ಠೇವಣಿ ಜಮಾ ಮಾಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ಜಿಲ್ಲೆಯಲ್ಲಿ 27,928 ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದರು. ಆದರೆ ಇದುವರೆಗೂ ಠೇವಣಿ ಹಣ ತಲುಪಿರುವುದು 9,606 ಮಂದಿಗೆ ಮಾತ್ರ. ಇನ್ನೂ 18,322 ಕಾರ್ಮಿಕರಿಗೆ ಹಣ ತಲುಪದೇ ಬದುಕು ನಡೆಸುವುದು ದುಸ್ತರವಾಗಿದೆ. ಉಳಿದ ನೋಂದಾಯಿತ ಕಾರ್ಮಿಕರಿಗೆ 2,000 ಠೇವಣಿ ಬ್ಯಾಂಕ್‌ಗೆ ಜಮೆ ಆಗುತ್ತಾ? ಅಥವಾ ಇಲ್ಲವಾ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣದ ಕಾರ್ಮಿಕರು ಒಟ್ಟು 27,928 ಮಂದಿ ನೋಂದಾಯಿಸಿಕೊಂಡಿದ್ದು, ಆ ಪೈಕಿ 9,606 ಮಂದಿಗೆ ಇಲಾಖೆ 2000 ರೂ. ಠೇವಣಿ ಜಮೆ ಆಗಿದೆ. ಉಳಿದ ಕಾರ್ಮಿಕರಿಗೂ ಹಣ ವರ್ಗಾವಣೆಗೊಳ್ಳಲಿದೆ. ಆರ್. ವರಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.