ಸೋಂಕಿತರ ಸಂಪರ್ಕಕ್ಕೆ 200 ಜನ?

ಸೋಂಕಿತ ಅಜ್ಜ, ಮೊಮ್ಮಗನಿಗೆ ಚಿನ್ನದ ವ್ಯಾಪಾರದ ಹಿನ್ನೆಲೆ; ಜಿಲ್ಲೆಯಲ್ಲಿ 23ನೇ ಪ್ರಕರಣ ದಾಖಲು

Team Udayavani, May 11, 2020, 4:50 PM IST

ಸೋಂಕಿತರ ಸಂಪರ್ಕಕ್ಕೆ 200 ಜನ?

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ವೈರಸ್‌ ಸಂಕಷ್ಟ ಜಿಲ್ಲೆಯ ಪಾಲಿಗೆ ಈಗ ಹಾವು ಏಣಿ ಆಟದಂತೆ ಆಗಿದ್ದು, ಹಲವು ದಿನಗಳಿಂದ ಸೋಂಕಿತರು ಪತ್ತೆಯಾ ಗದೇ ನೆಮ್ಮದಿಯಾಗಿದ್ದ ಜಿಲ್ಲೆಗೆ ಈಗ ಚಿಂತಾ ಮಣಿ ನಗರದಲ್ಲಿ ಕಾಣಿಸಿಕೊಂಡಿರುವ ಹೊಸ ಎರಡು ಪ್ರಕರಣಗಳು ಕೋವಿಡ್  ಆರ್ಭಟದ ಮುನ್ಸೂಚನೆ ನೀಡಿವೆ.

ಸಂಪರ್ಕಿತರು 200ಕ್ಕೆ ಹೆಚ್ಚುವ ಸಾಧ್ಯತೆ ?: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾ ಮಣಿಯಲ್ಲಿ ಚಿನ್ನದ ವ್ಯಾಪಾರಿ ಹಾಗೂ ಆತನ ಮೊಮ್ಮ ಗನದಲ್ಲಿ ಕಳೆದ ಶನಿವಾರ ಕಾಣಿಸಿಕೊಂಡಿರುವ ಸೋಂಕು ಚಿಂತಾಮಣಿ ನಗರದ ಜನತೆಯಲ್ಲಿ ಆತಂಕ ಮನೆ ಮಾಡಿದ್ದು, ಅವರ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಹರಸಾಹಸ ಮಾಡುತ್ತಿದ್ದು ಸಂಪರ್ಕಿತರು ಸದ್ಯಕ್ಕೆ 64 ಮಂದಿ ಇದ್ದರೂ ಅದರ ಸಂಖ್ಯೆ 200ಕ್ಕೆ ಏರುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೌರಿಬಿದನೂರಲ್ಲಿ ಕೋವಿಡ್  ಸೋಂಕು ಕಾಣಿಸಿಕೊಂಡರೂ ಸೋಂಕಿತರು ಶರವೇಗದಲ್ಲಿ ಗುಣಮುಖರಾದರು. ಇನ್ನೇನು ಮಹಾಮಾರಿ ಜಿಲ್ಲೆಯಿಂದ ತೊಲಗಿದೆ ಎನ್ನುವಷ್ಟರಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ 75 ವರ್ಷದ ವೃದ್ಧನ್ನನ್ನು ಬಲಿ ಪಡೆಯಿತು. ಅವ ರಿಂದ ಸುಮಾರು 9 ಮಂದಿಗೆ ಸೋಂಕು ಕಾಣಿಸಿ ಕೊಂಡಿತ್ತು. ಚಿಕ್ಕಬಳ್ಳಾಪುರದ ಲ್ಲಿಯು 6 ಸೋಕಿತರು ಚೇತರಿಸಿಕೊಂಡು ಮನೆಗೆ ಮರಳಿ ದ್ದಾರೆ. ಇದೀಗ ಜಿಲ್ಲೆಯ ಚಿಂತಾಮಣಿ ನಗರದಲ್ಲಿ 71 ವರ್ಷದ ವೃದ್ಧನ ಹಾಗೂ ಆತನ ಮೊಮ್ಮಗನಲ್ಲಿ ಕೋವಿಡ್  ಪಾಸಿಟಿವ್‌ ಬಂದಿರುವುದು ಚಿಂತಾಮಣಿ ಜನರನ್ನು ಚಿಂತೆಗೀಡು ಮಾಡಿದೆ.

ಸಂಪರ್ಕಿತರು ಹೆಚ್ಚಾಗುವ ಆತಂಕ: ಚಿಂತಾಮಣಿ ನಗರದಲ್ಲಿ ಕೋವಿಡ್ ಪತ್ತೆಯಾಗಿರುವುದು ಆರೋಗ್ಯ ಇಲಾಖೆಯನ್ನು ಸಂಕಷ್ಟಕ್ಕೀಡು ಮಾಡಿದೆ. ಅಜ್ಜ ಹಾಗೂ ಆತನ ಮೊಮ್ಮಗನದಲ್ಲಿ
ಸೋಂಕು ಕಾಣಿಸಿರುವುದರಿಂದ ಯಾರಿಂದ ಯಾರಿಗೆ ಸೋಂಕು ಬಂದಿದೆ, ಸೋಂಕು ಹರಡಿರುವ ಮೂಲ ಯಾವುದು ಎಂಬುದರ ಬಗ್ಗೆ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಜೊತೆಗೆ ಸೋಂಕಿ ತರು ಚಿನ್ನದ ವ್ಯಾಪಾರಿ ಯಾಗಿದ್ದು, ಸಾಕಷ್ಟು ಮಂದಿ ಆತನ ಸಂಪರ್ಕಕ್ಕೆ ಬಂದಿರಬಹು ದೆಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ಇದುವರೆಗೂ 64
ಮಂದಿಯನ್ನು ಪತ್ತೆ ಮಾಡಿ ಕ್ವಾರಂ ಟೈನ್‌ಗೆ ಒಳ ಪಡಿಸಲಾಗಿದ್ದು, ಇನ್ನೂ ಪತ್ತೆ ಕಾರ್ಯ ಮುಂದು ವರೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌರ ಭಾನುವಾರ ‘ಉದಯವಾಣಿ’ ಗೆ ತಿಳಿಸಿದರು.

ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಎರಡು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವರ ಸಂಪರ್ಕದಲ್ಲಿದ್ದ 64 ಮಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಮುಂದುವರಿದಿದೆ. ಇಬ್ಬರನ್ನು ಚಿಕ್ಕಬಳ್ಳಾಪುರ ನಗರದ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
● ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SSLC-PUC-Mark

Correction: ಎಸೆಸೆಲ್ಸಿ, ಪಿಯು ಅಂಕಪಟ್ಟಿ ತಿದ್ದುಪಡಿ ಇನ್ನು ದುಬಾರಿ!

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Chikkaballapur: ಜೀವಭಯದಲ್ಲೇ ಕೂಲಿ ಕಾರ್ಮಿಕರ ಸಂಚಾರ!

Chikkaballapur: ಜೀವಭಯದಲ್ಲೇ ಕೂಲಿ ಕಾರ್ಮಿಕರ ಸಂಚಾರ!

Chikkaballapur: ಡೇರಿಗಳಲ್ಲಿ ಹಾಲಿಗೆ ನೀರು; ವಿಡಿಯೋ ವೈರಲ್‌

Chikkaballapur: ಡೇರಿಗಳಲ್ಲಿ ಹಾಲಿಗೆ ನೀರು; ವಿಡಿಯೋ ವೈರಲ್‌

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.