ಚೇಳೂರು ತಾಲೂಕಿಗೆ 205 ಗ್ರಾಮ ಸೇರ್ಪಡೆ
Team Udayavani, Apr 2, 2022, 1:18 PM IST
ಚೇಳೂರು: ಹಲವು ದಿನಗಳ ಕನಸು ನನಸಾಗಿದ್ದು, ಚೇಳೂರು ತಾಲೂಕಿನ ಬೇಡಿಕೆ ಈಡೇರಿದೆ. ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿ, ಚೇಳೂರು ತಾಲೂಕು ಎಂದು ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಿದೆ.
ನೂತನ ತಾಲೂಕಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಚೇಳೂರು ನೂತನ ತಾಲೂಕಾಗಿ 2019 ಫೆ.8ರಂದು ಮೈತ್ರಿ ಸರ್ಕಾರ ಘೋಷಿಸಿತ್ತು. 2021 ಜ.8ರಂದು ಚಿಕ್ಕಬಳ್ಳಾಪುರ ಜಿಪಂನಲ್ಲಿ ತಾಲೂಕು ಎಂದು ಅಂತಿಮ ಅನುಮೋದನೆಯ ಪ್ರಸ್ತಾವನೆ ಘೋಷಣೆ ಮಾಡಿ, ವಿಧಾನಸೌಧಕ್ಕೆ ಹೋಯಿತು. 2021 ಡಿ.23ರಂದು ಆಕ್ಷೇಪಣೆಗಳಿಂದ ಮುಕ್ತಾಯವಾಗಿ, 2022 ಮಾ.23ರಂದು ಚೇಳೂರು ತಾಲೂಕು ಎಂದು ಗೆಜೆಟ್‌ನಲ್ಲಿ ಅನುಮೋದನೆ ಪಡೆಯಿತು.
ಚೇಳೂರಿಗೆ 12 ಗ್ರಾಪಂ: ಚೇಳೂರು ನೂತನ ತಾಲೂಕಿಗೆ ಚೇಳೂರು, ಪುಲಗಲ್ಲು, ಚಾಕವೇಲು, ರಾಶ್ಚೇರುವು, ಎಂ.ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ. ಬಾಗೇಪಲ್ಲಿ ತಾಲೂಕಿನ ನಾರೇಮದ್ದೆಪಲ್ಲಿ, ಸೋಮನಾಥಪುರ, ಪೋಲನಾಯಕನಹಳ್ಳಿ. ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು, ಏನಿಗದಲೆ, ಬುರುಡಗುಂಟೆ ಗ್ರಾಪಂ ಸೇರಿದಂತೆ 12 ಗ್ರಾಪಂಗಳು, 17 ಕಂದಾಯ ವೃತ್ತಗಳು. 205 ಗ್ರಾಮಗಳ ಪೈಕಿ 14 ಬೇಚರಾಕ್ ಗ್ರಾಮಗಳು, 81 ಮಜರಾ ಗ್ರಾಮಗಳು, 110 ಅಸಲಿ ಗ್ರಾಮಗಳು ಸೇರ್ಪಡೆಯಾಗಿದೆ.
ಚೇಳೂರು ಕಂದಾಯ ವೃತ್ತ: ಚೇಳೂರು, ಪೆಮ್ಮಯ್ಯಗಾ ರಪಲ್ಲಿ, ಷೇರ್‌ಖಾನ್‌ಕೋಟೆ, ಪಾತೂರು, ಗೆರಿಗಿರೆಡ್ಡಿಪಾಳ್ಯ, ಬೈರಪ್ಪನಪಲ್ಲಿ, ನಿಮ್ಮಕಾಯಲಪಲ್ಲಿ, ದರವಾರಪಲ್ಲಿ, ಹೊಸಹುಡ್ಯ, ಜಿಂಕಪಲ್ಲಿ(ಬೇ). ವೆಂಕಟಾಪುರ ಕಂದಾಯ ವೃತ್ತ: ವೆಂಕಟಾಪುರ, ಬಜ್ಜಾಪುರ, ಇದ್ದಿಲವಾರಪಲ್ಲಿ, ಕೊಂಡಿಕೊಂಡೆ(ಬೇ), ಕೊತ್ತಕೋಟವಾಂಡ್ಲಪಲ್ಲಿ, ಮೂಗಿರೆಡ್ಡಿಪಲ್ಲಿ, ರಾಜುವಾಂಡ್ಲಪಲ್ಲಿ, ಎಂ.ನಲ್ಲಗುಟ್ಲಪಲ್ಲಿ. ಜಲಿಪಿಗಾರಪಲ್ಲಿ ಕಂದಾಯ ವೃತ್ತ: ಜಲಿಪಿಗಾರಪಲ್ಲಿ, ಬತ್ತಲವಾರಪಲ್ಲಿ, ಪಶುಪುಲವಾರಪಲ್ಲಿ, ಬೀರಂಗಿವಾಂಡ್ಲಪಲ್ಲಿ, ಪೆದ್ದೂರು, ಗುಂಡ್ಲಪಲ್ಲಿ, ದೊಡ್ಡಿಪಲ್ಲಿ, ಮುದ್ದಲಪಲ್ಲಿ, ಎಗವನೆಟ್ಟಕುಂಟಪಲ್ಲಿ, ಗೊಲ್ಲಪಲ್ಲಿ, ಮಂಡ್ಯಂಪಲ್ಲಿ, ಗೌನೋರುಪಲ್ಲಿ. ಊದವಾರಪಲ್ಲಿ ಕಂದಾಯ ವೃತ್ತ; ಊದವಾರಪಲ್ಲಿ, ಸಜ್ಜಲವಾರಪಲ್ಲಿ, ಬೆಲ್ಲಾಲಂಪಲ್ಲಿ, ಡಬ್ಬರ ವಾರಪಲಿ, ಬುಟ್ಟಯ್ಯಗಾರಿಪಲ್ಲಿ.
ಚಾಕವೇಲು ಕಂದಾಯ ವೃತ್ತ; ಚಾಕವೇಲು, ರಾಜ್ಹೋಳ್ಳ ಪಲ್ಲಿ, ಮದ್ದಿರೆಡ್ಡಿಪಲ್ಲಿ, ವೆಂಕಟರೆಡ್ಡಿಪಲ್ಲಿ, ಕೋತ್ತೂರು, ಎಗವಪ್ಯಾಯಲಪಲ್ಲಿ, ದಿಗವಪ್ಯಾ ಯಲ ಪಲ್ಲಿ, ವಡ್ಡಿವಾಂಡ್ಲಪಲ್ಲಿ, ಮರವಪಲ್ಲಿ, ಕೊಟ್ಟಂಪಲ್ಲಿ, ಕುರುಬವಾಂಡ್ಲಪಲ್ಲಿ, ಮಂಜುನಾಥಪುರ, ರೆಡ್ಡಿಗಾನಪಲ್ಲಿ, ಕೊಂಡಂವಾರಪಲ್ಲಿ, ದಾಸಿರಿವಾಂಡ್ಲಪಲ್ಲಿ, ಬುದ್ದಲವಾರಪಲ್ಲಿ ಗ್ರಾಮಗಳು ಸೇರಿವೆ. ಪಾಳ್ಯಕೆರೆ ಕಂದಾಯ ವೃತ್ತ: ಪಾಳ್ಯಕೆರೆ, ರಾಮೋಜಿ ಪಲ್ಲಿ, ಜಿಂಕಪಲ್ಲಿ, ಪೆದ್ದಪಲ್ಲಿ(ಬೇ), ಕೊತ್ತೂರುಪಲ್ಲಿ, ಮಾಚನಪಲ್ಲಿ, ಪೆದ್ದರಾಜಪಲ್ಲಿ, ಚೀಗಟೀಗಲಗುಟ್ಟ.
ಪುಲಗಲ್ ಕಂದಾಯ ವೃತ್ತ: ಪುಲಗಲ್, ಶ್ರೀನಿವಾಸ ಪುರ, ಶೀತಿರೆಡ್ಡಿಪಲ್ಲಿ, ಮ್ಯಾಕಲಪಲ್ಲಿ, ಗಾಂದೀಪುರ, ನಲ್ಲಸಾನಂಪಲ್ಲಿ, ಗೊಲ್ಲಪಲ್ಲಿ, ರಾಮ್ಯಾಕಲಪಲ್ಲಿ.
ರಾಶ್ಚೇರುವು ಕಂದಾಯ ವೃತ್ತ: ರಾಶ್ಚೇರುವು, ನಾರಾ ಯಣ ಪಲ್ಲಿ, ಮುಸ್ಲಿಗಾನಪಲ್ಲಿ, ಕೊಂಡೋರು ಪಲ್ಲಿ, ಸೋಮ ಕಲಪಲ್ಲಿ, ದುಗ್ಗಿನಾಕನಪಲ್ಲಿ, ದಿಗವಗೊಲ್ಲ ಪಲ್ಲಿ.
ಆರ್.ನಲ್ಲಗುಟ್ಲಪಲ್ಲಿ ಕಂದಾಯ ವೃತ್ತ: ಕದಿರನ್ನಗಾರಿಕೋಟೆ, ದೋರಣಾಲಪಲ್ಲಿ, ಗಡ್ಡಂಪಲ್ಲಿ, ತುರುಕೇಶಿಪಲ್ಲಿ, ವಂಟಿರವಾಂಡ್ಲಪಲ್ಲಿ, ಕಲ್ಲರೋಳ್ಳಪಲ್ಲಿ, ಕೊತ್ತಪಲ್ಲಿ, ಆರ್.ನಲ್ಲಗುಟ್ಲಪಲ್ಲಿ, ಅರಿಗೇವಾರಗುಟ್ಟ, ಮಾಮಿಡಮಾಕಲಪಲ್ಲಿ, ದೇವರಮ್ಯಾಕಲಪಲ್ಲಿ, ಪ್ಯಾಯಲವಾರಪಲ್ಲಿ, ರಾಮಾನುಪಡಿ.
ಸೊಮನಾಥಪುರ ಕಂದಾಯ ವೃತ್ತ: ಸೋಮನಾ ಥಪುರ, ಬೂದಿಲಪಲ್ಲಿ, ಸೀಮನ್ನಗಾರಪಲ್ಲಿ, ರಾಚವಾರಪಲ್ಲಿ, ಗುಡಂವಾರಪಲ್ಲಿ, ಮಂಗಲ ಮಡು ಗುವಾರಪಲ್ಲಿ, ಬೂದಿಲಪಲ್ಲಿ, ಕುರುಪಲ್ಲಿ, ಚಿನ ಗಾ ನಪಲ್ಲಿ, ಮರ್ರಿಮಾಕಲಪಲ್ಲಿ, ದೇವಾಳವಾ ರಪಲ್ಲಿ, ದೊಡ್ಡಿಪಲ್ಲಿ, ನಕ್ಕಲಪಲ್ಲಿ, ಸೀಗಲಪಲ್ಲಿ, ಸಿಂಗಪ್ಪಗಾ ರಿಪಲ್ಲಿ.
ನಾರೇಮದ್ದೆಪಲ್ಲಿ ಕಂದಾಯ ವೃತ್ತ: ನಾರೇಮದ್ದೇಪಲ್ಲಿ, ಕಮಟಂಪಲ್ಲಿ, ಗೊಲ್ಲವಾರಪಲ್ಲಿ, ಗುಮ್ಮೊಳ್ಳಪಲ್ಲಿ, ಜಂಗಾಲಪಲ್ಲಿ, ಇಂದುಕುರೋಳ್ಳಪಲ್ಲಿ, ಕುರುಬರಹಳ್ಳಿ, ದುಗ್ಗಿನಾಯಕನಹಳ್ಳಿ, ಬೆಸ್ತಲಪಲ್ಲಿ, ಜಂಗಾಲಪಲ್ಲಿ, ದೊಡ್ಡಿವಾರಪಲ್ಲಿ, ರೇಚನಾಯ ಕನ ಪಲ್ಲಿ, ಶಿವಪುರ, ಕಲ್ಲೂರೋನಿಕುಂಟೆ, ಕೊಳ್ಳವಾರಪಲ್ಲಿ, ಕೊಂಡಿರೆಡ್ಡಿಪಲ್ಲಿ.
ಕುರುಬರಹಳ್ಳಿ ಕಂದಾಯ ವೃತ್ತ: ಯರ್ರಗುಡಿ, ಗ್ಯಾದೀವಾಂಡ್ಲಪಲ್ಲಿ, ಬೆಸ್ತಲಪಲ್ಲಿ, ದೊಡ್ಡಿವಾರಪಲ್ಲಿ, ಎಂ.ಎಂ.ಪಲ್ಲಿ (ಲಕ್ಕಸಂದ್ರ), ಚಿನ್ನಗಾನಪಲ್ಲಿ, ಬತ್ತಿನಪಲ್ಲಿ (ಬೇ), ಗೋಪನ್ನಗಾರಿಪಲ್ಲಿ (ಬೇ).
ಪೋಲನಾಯಕನಹಳ್ಳಿ ಕಂದಾಯ ವೃತ್ತ: ಪೋಲನಾಯ ಕನಹಳ್ಳಿ, ಪೂಲುಕುಂಟ್ಲಪಲ್ಲಿ, ದಿಗವಮಾರಪ್ಪ ಗಾರಪಲ್ಲಿ, ಎಗವಮಾರಪ್ಪಗಾರಪಲ್ಲಿ, ದುಗ್ಗಿನಾಯಕನಹಳ್ಳಿ, ಕಾಳ್ಳಪರಾಳ್ಳಪಲ್ಲಿ, ಯರ್ರಗುಟ್ಟಪಲ್ಲಿ, ಪೆದ್ದನಗುರು, ಗುಮ್ಮಾಳ್ಳಪಲ್ಲಿ, ಕುಂಟ್ಲಪಲ್ಲಿ, ಬತ್ತಲಪಲ್ಲಿ, ಬೊಮ್ಮಸಂದ್ರ, ಬೂಡಿದಿಗಡ್ಡಪಲ್ಲಿ.
ಆಚಗಾನಹಳ್ಳಿ ಕಂದಾಯ ವೃತ್ತ: ನರಸಾಪುರ, ಮೊಟಕಪಲ್ಲಿ, ಹೊಸಹುಡ್ಯ, ಬಳೇಹೊಸಹಳ್ಳಿ.
ಚಿಲಕಲನೇರ್ಪು ಕಂದಾಯ ವೃತ್ತ: ಚಿಲಕಲನೇರ್ಪು, ಮಿಂಚಳ್ಳಪಲ್ಲಿ, ಎಗವದ್ವಾರಪಲ್ಲಿ, ದಿಗವದ್ವಾರಪಲ್ಲಿ, ಹೊಸಹುಡ್ಯ, ಎಂ.ಹೊಸಹುಡ್ಯ, ಬೀದಲಪಲ್ಲಿ, ಕುಕ್ಕಲದಿನ್ನೆ.
ಟಿ.ಗೊಲ್ಲಹಳ್ಳಿ ಕಂದಾಯ ವೃತ್ತ: ಟಿ.ಗೊಲ್ಲಹಳ್ಳಿ, ಧರ್ಮವಾರಹಳ್ಳಿ, ಗಡಿಗವಾರಹಳ್ಳಿ, ಸಾಲಮಾಲಹಳ್ಳಿ, ಕೃಷ್ಣಾಪುರ, ತುಳುವನೂರು, ತಿರುಮಲಪುರ, ದೇಶಂವಾರಪಲ್ಲಿ, ಟಿ.ದೇವಪಲ್ಲಿ.
ಏನಿಗದಲೆ ಕಂದಾಯ ವೃತ್ತ: ಏನಿಗದಲೆ, ಗೆಂಗಿರೆಡ್ಡಿಪಲ್ಲಿ, ಚೊಕ್ಕನಹಳ್ಳಿ, ಕೆಂಚೇಪಲ್ಲಿ, ಗುಂಡ್ಲಹಳ್ಳಿ, ಬೋಮ್ಮೆಪಲ್ಲಿ, ಚಿನ್ನಪಲ್ಲಿ, ಬಾಲಿರೆಡ್ಡಿಹಳ್ಳಿ, ವಂಗಮಾಲ, ನಲ್ಲಗುಟ್ಲಪಲ್ಲಿ, ಮೋಟಮಾಕಲಪಲ್ಲಿ, ವರದೇನಹಳ್ಳಿ, ಕಾಚನಹಳ್ಳಿ, ನಕ್ಕಲವಾರಹಳ್ಳಿ, ಚಿಂತಮಾಕಲಪಲ್ಲಿ, ಗೊರ‌್ಲದೊಡ್ಡಿಪಲ್ಲಿ.
ಬುರುಡಗುಂಟೆ ಕಂದಾಯ ವೃತ್ತ: ಬುರುಡಗುಂಟೆ, ಮಹದೇವಪುರ, ಬತ್ತಲಾಪುರ, ಯಗವಬಸಾಪುರ, ಕೋನೇಪಲ್ಲಿ, ಕಾಕರ‌್ಲಚಿಂತ, ಉಲಿಬೆಲೆ, ಎಗವಬಸವಪುರ, ಕೃಷ್ಣಾಪುರ, ಅನ್ನಪಲ್ಲಿ, ಮರವಪಲ್ಲಿ, ಚಿಕ್ಕ ಕುರುಬರಹಳ್ಳಿ ಗ್ರಾಮಗಳು ಚೇಳೂರು ತಾಲೂಕಿಗೆ ಸೇರಿದೆ.
ಹೋರಾಟಕ್ಕೆ ಜಯ: ಚೇಳೂರು ತಾಲೂಕು ಹೋರಾಟ ಸಮಿತಿಯ ಪುಲಗಲ್ ಪಿ.ರಾಧಾಕೃಷ್ಣ, ಚೇಳೂರು ಪೇಪರ್ ಜೆ.ವಿ.ಚಲಪತಿ, ಬಿ.ಎ.ಜಗನಾಥಶೆಟ್ಟಿ, ಟಿ.ಎನ್.ಸೀನಪ್ಪ, ಬೈರಪ್ಪನಪಲ್ಲಿ ಗುನ್ನಾ ಪಾಪರೆಡ್ಡಿ, ಪಿ.ಎನ್.ಆಂಜನೇಯರೆಡ್ಡಿ, ಪಾಳ್ಯಕೆರೆ ವೈ.ಶಂಕರ್, ಕೊತ್ತೂರುಪಲ್ಲಿ ಕೆ.ವಿ.ಶ್ರೀನಿವಾಸರೆಡ್ಡಿ, ರೈತ ಸಂಘದ ಜಿ.ಜಿ.ಹಳ್ಳಿ ಬಿ.ನಾರಾಯಣಸ್ವಾಮಿ, ಮದ್ದಿರೆಡ್ಡಿಪಲ್ಲಿ ಕೆ.ಆರ್.ಸುಧಾಕರ್‌ರೆಡ್ಡಿ, ಗೊಲ್ಲಪಲ್ಲಿ ಜಿ.ಎನ್. ಲಕ್ಷ್ಮೀಪತಿನಾಯ್ಕರ್, ಜಿಂಕಪಲ್ಲಿ ಜೆ.ಪಿ. ಚಂದ್ರಶೇಖರರೆಡ್ಡಿ, ಮರವಪಲ್ಲಿ ಜಿ.ವಿ. ಕೃಷ್ಣಾರೆಡ್ಡಿ, ಹೊಸಹುಡ್ಯ ಕೆ.ಎನ್.ಮಧುಸೂಧನ ರೆಡ್ಡಿ, ವಿ. ಶಿವಾರೆಡ್ಡಿ, ಚೀಗಟೀಗಲಗುಟ್ಟ ಸಿ.ಎನ್.ರೆಡ್ಡಪ್ಪ, ರಾಜೋಳ್ಳಪಲ್ಲಿ ಆರ್.ಎ.ವಿನೋದ್‌ರೆಡ್ಡಿ, ಇದ್ದಿಲವಾರಪಲ್ಲಿ ವಿ.ರವೀಂದ್ರರೆಡ್ಡಿ, ಚೇಳೂರು ಪಿ.ವಿ. ಲೋಕೇಶ್, ಸಿ.ಎಸ್.ವೆಂಕಟೇಶ್ ಸೇರಿದಂತೆ ಇತರೆ ಮುಖಂಡರ ಅವಿರತ ಪ್ರಯತ್ನ, ಜನಪ್ರತಿನಿಧಿಗಳ ಸಹಕಾರದಿಂದ ಹೋರಾಟಕ್ಕೆ ಫಲ ಸಿಕ್ಕಿದೆ.
ಚೇಳೂರು ತಾಲೂಕಿಗಾಗಿ 1998ರಿಂದ ಹೋರಾಟ : ಕನ್ನಡಪರ ಸಂಘಟನೆ ಮುಖಂಡ ಚೇಳೂರಿನ ಪೇಪರ್ ಜೆ.ವಿ.ಚಲಪತಿ 1998ರಿಂದ ಚೇಳೂರಿಗೆ ಬಂದ ಶಾಸಕರು, ಸಚಿವರು, ಅಧಿಕಾರಿಗಳಿಗೆ ತಾಲೂಕು ಘೋಷಣೆಗಾಗಿ ಮನವಿ ಸಲ್ಲಿಸುತ್ತಾ, ಹಳ್ಳಿಯಿಂದ ರಾಜಧಾನಿ ತನಕ ಸಹಿ ಸಂಗ್ರಹ ಮಾಡಿಸಿದ್ದರು. ನಂತರ 2017 ಡಿ.28ರಿಂದ 2019 ಫೆ.8ರ ಚೇಳೂರು ತಾಲೂಕು ಹೋರಾಟ ಸಮಿತಿ ಸ್ಥಾಪನೆಯಾಗಿ ಇದರ ಆಶ್ರಯದಲ್ಲಿ 12 ಗ್ರಾಪಂ ಜನರು ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ನಿರಂತರ ಹೋರಾಟವನ್ನು ಪುಲಗಲ್ ಪಿ.ರಾಧಾಕೃಷ್ಣ ನೇತೃತ್ವದಲ್ಲಿ ನಡೆಸಿದರು.
-ಲೋಕೇಶ್.ಪಿ.ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.