ಮೌಂಟ್‌ ತುಳಿಯನ್‌ ಶಿಖರ ಏರಿದ ಜಿಲ್ಲೆಯ ಸಾಹಸಿಗರು

22 ಗಂಟೆ ಒಳಗೆ ಶಿಖರ ಏರಿ ಇಳಿದು ಸಾಹಸ ರಾಷ್ಟ್ರಧ್ವಜ, ನಾಡಧ್ವಜ ಹಾರಿಸಿ ಗಮನ ಸೆಳೆದ ಸಾಧಕರು

Team Udayavani, Sep 21, 2021, 3:20 PM IST

ಮೌಂಟ್‌ ತುಳಿಯನ್‌ ಶಿಖರ ಏರಿದ ಜಿಲ್ಲೆಯ ಸಾಹಸಿಗರು

ಚಿಕ್ಕಬಳ್ಳಾಪುರ: ಮೈಕೊರೆಯುವ ಚಳಿಯ ಅಬ್ಬರದ ನಡೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಸಾಹಸ ಚಾರಣಿಗರು ಕೇವಲ 22 ಗಂಟೆಯೊಳಗೆ ಜಮ್ಮು ಮತ್ತು ಕಾಶ್ಮೀರದ ಮೌಂಟ್‌ ತುಳಿಯನ್‌ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಕರ್ನಾಟಕ ಸರ್ಕಾರ ವತಿಯಿಂದ ರಾಜ್ಯದ ಸಾಹಸಿಗರನ್ನು ಮೌಂಟ್‌ ತುಳಿಯನ್‌ ಶಿಖರ ಏರಲು ಆಯ್ಕೆ ಮಾಡಿಕೊಂಡಿತ್ತು. ಶಿಖರದ ತುತ್ತ ತುದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಸಿಗರು ಮೊದಲು ಪ್ರವೇಶಿಸಿದರಲ್ಲದೆ, ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಹಾರಿಸಿ ಗಮನಸೆಳೆದಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಮೇಶ್‌, ಮಂಚೇನಹಳ್ಳಿಯ ಶಂಕರ್‌ನಾಗ್‌, ಶಿಡ್ಲಘಟ್ಟ ತಾಲೂಕಿನ ಸುನೀಲ್‌ನಾಯಕ್‌ ಸೇರಿದಂತೆ 22 ಜನರನ್ನು ಹೊಂದಿದ ತಂಡ ಜಮ್ಮು ಮತ್ತು ಕಾಶ್ಮಿರದ 16,500 ಅಡಿ ಅತಿ ಎತ್ತರದ ಮೌಂಟ್‌ ತುಳಿಯನ್‌ ಶಿಖರವನ್ನು ಕೇವಲ 22 ಗಂಟೆ ಒಳಗೆ ಏರಿ ಇಳಿದು ಸಾಹಸ ಮೆರೆದಿದ್ದಾರೆ, ಜಿಲ್ಲೆಯ ಮೂರು ಸಾಹಿಸಿಗರ ಸಾಧನೆಯನ್ನು ಮೆಚ್ಚಿ ರೇಷ್ಮೆ ನಾಡಿನ ಜನರು ಅಭಿನಂದಿಸಿದ್ದಾರೆ.

ಇದನ್ನೂ ಓದಿ:ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

22 ಗಂಟೆ ಒಳಗೆ ಸಂಪೂರ್ಣ ಯಶಸ್ವಿ:
ಆ.26ರಂದು ವಿಮಾನ ಪ್ರಯಾಣ ಮಾಡಿ ಜಮ್ಮುವಿನ ಪಹಾಲ್ಗಮ್‌ನ ನಗರದ ಜವಾರ್‌ ಇನ್ಸ್ಟಿಟ್ಯೂಟ್‌ ಆಫ್‌ ಮೌಂಟೈನೇರಿಂಗ್‌ ಆ್ಯಂಡ್‌ ವಿನrರ್‌ ಸ್ಪೋರ್ಟ್ಸ್ ಸಂಸ್ಥೆ ಸಹಕಾರದಿಂದ ಆ.31ರಂದು ಮೌಂಟ್‌ ತುಳಿಯನ್‌ ಶಿಖರವನ್ನು ಸತತವಾಗಿ 22 ಗಂಟೆ ಒಳಗೆ ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ.

ಸಾಕಷ್ಟು ಅಪಾಯ: 22 ಸಾಹಸಿಗರಲ್ಲಿ ಕೇವಲ 13 ಮಂದಿ ಮಾತ್ರ ಗುರಿ ತಲುಪಿದ್ದಾರೆ. ಅದರಲ್ಲಿ ಮೊಟ್ಟ ಮೊದಲಿಗೆ ಶಿಖರದ ತುದಿ ಸೇರಿಕೊಳ್ಳುವಲ್ಲಿ ಜಿಲ್ಲೆಯ ರಮೇಶ್‌ ಯಶಸ್ವಿ ಆಗಿದ್ದಾರೆ. ಶಿಖರವನ್ನು ಹತ್ತುವ ವೇಳೆ ಸಾಕಷ್ಟು ಅಪಾಯಗಳಿಂದ ತಪ್ಪಿಸಿಕೊಂಡ ಕೆಲವು ಘಟನೆಗಳನ್ನು ಸಾಹಸಿ ಸುನೀಲ್‌ ನಾಯಕ್‌ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಪಾಯದಿಂದ ಪಾರು: ಶಿಖರವನ್ನು ಏರುವ ವೇಳೆ ತಿನ್ನಲು ಆಹಾರದ ಸಮಸ್ಯೆ, ಉಸಿರಾಡಲು ಗಾಳಿಯ ಸಮಸ್ಯೆ ತಂಡದ ಕೆಲವರಿಗೆ ಉಂಟಾಗಿ ಸಾಕಷ್ಟು ತೊಂದರೆ ಆಗಿತ್ತು. ಅದೇ ರೀತಿ ದೊಡ್ಡ ಕಲ್ಲು ಬಂಡೆಗಳು ಶಿಖರದಿಂದ ಉರುಳಿ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದೇವೆ ಎಂದು ತಿಳಿಸಿದರು. ಸದ್ಯ ಮೌಂಟ್‌ ತುಳಿಯನ್‌ ಶಿಖರವನ್ನು ಏರಿದ ನಂತರ ತುದಿಯಲ್ಲಿ ನಾಡಧ್ವಜ ಹಾಗೂ ರಾಷ್ಟ್ರಧ್ವಜ ದೊಂದಿಗೆ ಪೋಸ್‌ ನೀಡಿರುವ ದೃಶ್ಯ ಹಾಗೂ ಶಿಖರವನ್ನು ಏರುತ್ತಿರುವ ಸಾಹಸ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ, ಅಪೂರ್ವ ಸಾಧನೆ ಮಾಡಿದ ಸುನೀಲ್‌ ನಾಯಕ್‌, ರಮೇಶ್‌, ಶಂಕರ್‌ನಾಗ್‌ ಅವರನ್ನು ಜಿಲ್ಲೆಯ ಜನತೆ ಅಭಿನಂದಿಸಿದ್ದಾರೆ.

 

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Chikkaballapur: ಬ್ಯಾಂಕ್‌ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್‌ ವಂಚಕನ ಬಂಧನ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Gudibande: ಹೆಸರಿಗಷ್ಟೇ ಬಸ್‌ ನಿಲ್ದಾಣ; ಬಸ್‌ಗಳೇ ಬರಲ್ಲ

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.