40 ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವು
Team Udayavani, Mar 13, 2021, 1:24 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸೇರಿದಜಾಗಗಳನ್ನು ಸಂರಕ್ಷಣೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದ ವಲಯ ಅರಣ್ಯಾಧಿಕಾರಿ ಶ್ರೀ ಲಕ್ಷ್ಮೀ ಮತ್ತೂಮ್ಮೆ ಸುದ್ದಿಯಲ್ಲಿದ್ದಾರೆ.
ಜಿಲ್ಲೆಯ ಡಿಸಿಎಫ್ ಅರ್ಸಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಚಂದ್ರ ಶೇಖರ್ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ ಮತ್ತು ಸಿಬ್ಬಂದಿ ಕಾರ್ಯಾಚರಣೆನಡೆಸಿ ಚಿಕ್ಕಬಳ್ಳಾಪುರ ವಲಯದ, ನಂದಿ ಶಾಖೆಯ, ನರಸಿಂಹ ದೇವರಬೆಟ್ಟ ಬ್ಲಾಕ್ 2ವ್ಯಾಪ್ತಿಯ ಕೊರ್ಲಹಳ್ಳಿ ಸ.ನಂ 11,ಮಧುರೆನಹಳ್ಳಿ ಸ.ನಂ 37 ರ ಒಟ್ಟು 40 ಎಕರೆಅನಧಿಕೃತ ಒತ್ತುವರಿ ಅರಣ್ಯ ಪ್ರದೇಶ ತೆರವುಗೊಳಿಸಿ ಇಲಾಖೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ವರ್ಷಗಳಿಂದ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆನ್ನಲಾಗಿದ್ದು, ಕಾರ್ಯಾ ಚರಣೆ ನಡೆಸಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡಿದ್ದಾರೆ. ಶ್ರೀ ಲಕ್ಷ್ಮೀ ಅವರ ಕಾರ್ಯಕ್ಕೆ ಡಿವೈಆರ್‌ಎಫ್‌ಒ ವಿಜಯಕುಮಾರ್,ತನ್ವೀರ್ ಅಹಮದ್, ಪ್ರತಿಮಾ, ಅರಣ್ಯ ರಕ್ಷಕಮಲ್ಲಿಕಾರ್ಜುನ್, ಅವಿನಾಶ್, ರಾಜು,ಶ್ರೀಕಲಾ, ಅರಣ್ಯ ವೀಕ್ಷಕ ವೆಂಕಟೇಶ,ಹನುಮಂತಪ್ಪ, ವೆಂಕಟೇಶಪ್ಪ ಸಾಥ್ ನೀಡಿದ್ದಾರೆ. ಬಳಿಕ ಜೆಸಿಬಿ ಮೂಲಕ ಟ್ರಂಚಿಂಗ್ ಮಾಡಿ ಜಮೀನನ್ನು ಅಧಿಕಾರಿಗಳುವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಳೆದ 20 ದಿನಗಳ ಹಿಂದೆಯೂ ಕಾರ್ಯಚರಣೆ ನಡೆಸಿಮಂಡಿಕಲ್ ಹೋಬಳಿಯ ಗುಡಿಸಲಹಳ್ಳಿಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 20 ಎಕರೆ ಅರಣ್ಯ ಜಮೀನು ವಶಪಡಿಸಿಕೊಂಡಿದ್ದಾರೆ ಈ ಕಾರ್ಯಚರಣೆಗೆ ಡಿ.ಆರ್.ಎಫ್.ಓ ನರಸಿಂಹಮೂರ್ತಿ, ಗಾರ್ಡ್ ಝಬೀ ಉಲ್ಲಾ, ಸಲೀಂ ಮಲ್ಲಿಕ್‌ಸಾಥ್ ನೀಡಿದ್ದಾರೆ ಒಟ್ಟಾರೇ ಚಿಕ್ಕಬಳ್ಳಾಪುರತಾಲೂಕಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ 60ಎಕರೆ ಜಮೀನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.