Government school: ಜಿಲ್ಲೆಯ 571 ಸರ್ಕಾರಿ ಶಾಲೆ ಆಸ್ತಿಗೆ ಖಾತೆ ಇಲ್ಲ!
Team Udayavani, Dec 21, 2023, 3:09 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ಆಸ್ತಿಗಳ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆರಂಭಿಸಿರುವ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ ರಾಜ್ಯಾದ್ಯಂತ ಆಮೆ ವೇಗದಲ್ಲಿ ಸಾಗಿದ್ದು ಜಿಲ್ಲಾದ್ಯಂತ ಇನ್ನೂ ಬರೋಬ್ಬರಿ 571 ಶಾಲೆ ಆಸ್ತಿಯೇ ನೋಂದಣಿ ಆಗಿಲ್ಲ.
ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಮಂಜೂರಾ ಗಿರುವ ಜಾಗ, ಜಾಮೀನು ಹಾಗೂ ಅನೇಕ ದಾನಿಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿ ರುವ ತಮ್ಮ ನಿವೇಶನ, ಜಾಗ, ಜಮೀನನ್ನು ಆಯಾ ಶಾಲೆ ಹೆಸರಿಗೆ ಖಾತೆ ಮಾಡಿಕೊಂಡು ಶಿಕ್ಷಣ ಸಂಸ್ಥೆ ಗಳ ಆಸ್ತಿ ಸಂರಕ್ಷಣಾ ಅಭಿಯಾನ ಹಲವು ವರ್ಷಗಳಿಂದ ಕೈಗೊಂಡಿದ್ದರೂ ಸಂಪೂರ್ಣ ಯಶಸ್ಸು ಸಾಧಿಸುವಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಆಸ್ತಿಗಳಿಗೆ ತಕಾರರು, ಒತ್ತುವರಿ ಕಾಟ: ಸರ್ಕಾರಿ ಶಾಲೆಗಳಿಗೆ ದಾನಿಗಳು, ಶಿಕ್ಷಣ ಪ್ರೇಮಿಗಳು ನೀಡಿರುವ ಬೆಲೆ ಬಾಳುವ ಜಾಗವನ್ನು ಸಕಾಲದಲ್ಲಿ ಶಾಲೆಗಳ ಹೆಸರಿಗೆ ಖಾತೆ ಆಗದ ಪರಿಣಾಮ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ, ಪಾಸ್ತಿ ಈಗ ಅಕ್ರಮವಾಗಿ ಒತ್ತುವರಿಗೆ ಒಳಗಾಗಿ ಇತರರ ಪಾಲಾಗುವಂತೆ ಆಗುತ್ತಿದೆ. ವಿಶೇಷ ವಾಗಿ ದಾನಿಗಳು ಕೊಟ್ಟ ನಿವೇಶನ, ಜಾಗದ ಮೇಲೆ ಸಂಬಂಧಿಕರು ನ್ಯಾಯಾಲಯದ ಮೊರೆ ಹೋಗಿರುವ ಪರಿಣಾಮ ಶಾಲೆಗಳ ಆಸ್ತಿ, ಪಾಸ್ತಿ ಕಳೆದುಕೊಳ್ಳುವಂತ ಪರಿಸ್ಥಿತಿ ಹಲವು ಶಾಲೆಗಳದ್ದಾಗಿದೆ. ಇದೇ ಕಾರಣಕ್ಕೆ ರಾಜ್ಯಾದ್ಯಂತ ಶಿಕ್ಷಣ ಇಲಾಖೆ ಆಂದೋಲನದ ರೀತಿಯಲ್ಲಿ ಸರ್ಕಾರಿ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣೆಗೆ ಅಭಿಯಾನ ನಡೆಸಿದರೂ ಜಿಲ್ಲೆಯಲ್ಲಿ ಇನ್ನೂ 532 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 39 ಸರ್ಕಾರಿ ಪ್ರೌಢ ಶಾಲೆಗಳ ಆಸ್ತಿ ನೋಂದಣಿ ಆಗದೇ ನನೆಗುದಿಗೆ ಬಿದ್ದಿವೆ.
ನೋಡಲ್ ಅಧಿಕಾರಿಗಳ ನೇಮಕ: ಸರ್ಕಾರಿ ಶಾಲೆಗಳಿಗೆ ಸರ್ಕಾರ, ದಾನಿಗಳು, ಶಿಕ್ಷಣ ಪ್ರೇಮಿಗಳು ನೀಡಿರುವ ಜಾಗ, ನಿವೇಶನ ಮತ್ತಿತರ ಸಿರಾಸ್ತಿಗಳನ್ನು ಶಾಲೆಗಳ ಹೆಸರಿಗೆ ಖಾತೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ದೈಹಿಕ ಶಿಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ನೇಮಿಸಿದೆ. ಮುಂಬರುವ ಫೆಬ್ರವರಿ ಒಳಗೆ ಬಾಕಿ ನೋಂದಣಿ ಶಾಲೆಗಳ ಆಸ್ತಿಗಳನ್ನು ಖಾತೆ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ 1,434 ಪ್ರಾಥಮಿಕ, 111 ಪ್ರೌಢಶಾಲೆ:
111 ಸರ್ಕಾರಿ ಪ್ರೌಢ ಶಾಲೆಗಳಿದ್ದು ಆ ಪೈಕಿ ಕಳೆದ ವರ್ಷ 35 ಶಾಲೆಗೆ ಆಸ್ತಿ ನೋಂದಣಿ ಆಗಿದೆ. ಪ್ರಸ್ತುತ ವರ್ಷ 1 ಶಾಲೆಯ ಆಸ್ತಿ ನೋಂದಣಿ ಆಗಿದೆ. ಇಲ್ಲಿವರೆಗೂ ಒಟ್ಟು 72 ಶಾಲೆಗೆ ಆಸ್ತಿ ನೋಂದಣಿ ಆಗಿದ್ದು ಇನ್ನೂ 39 ಶಾಲೆ ಬಾಕಿದೆ. ಆ ಪೈಕಿ 2 ಕಡೆ ದಾನಿಗಳು ಜಾಗ ಕೊಟ್ಟಿದ್ದು 1 ಕಡೆ ಖಾಸಗಿ ಸ್ವತ್ತಿನಲ್ಲಿ ಶಾಲೆ ಇದೆ. 33 ಕಡೆ ಸರ್ಕಾರಿ ಜಾಗದಲ್ಲಿಯೇ ಶಾಲೆ ಇದೆ. ಇತರೇ 3 ಕಡೆ ಇದೆ. ಅದೇ ರೀತಿ ಜಿಲ್ಲಾದ್ಯಂತ 1,434 ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಆ ಪೈಕಿ ಕಳೆದ ವರ್ಷ 236 ಶಾಲೆಗೆ ನೋಂದಣಿ ಆಗಿದ್ದರೆ ಈ ವರ್ಷ 81 ಶಾಲೆಗಳಿಗೆ ನೋಂದಣಿ ಆಗಿದೆ. ಒಟ್ಟು ಇಲ್ಲಿವರೆಗೂ 902 ಶಾಲೆಗೆ ನೋಂದಣಿ ಆಗಿದ್ದು ಇನ್ನೂ 532 ಶಾಲೆ ಆಸ್ತಿ ನೋಂದಣಿ ಬಾಕಿ ಇದೆ. 1,434 ಶಾಲೆ ಪೈಕಿ 111 ಶಾಲೆಗೆ ದಾನಿಗಳು ಜಾಗ ಕೊಟ್ಟಿದ್ದಾರೆ. 38 ಶಾಲೆ ಖಾಸಗಿ ಸ್ವತ್ತು ಇವೆ. 366 ಕಡೆ ಸರ್ಕಾರಿ ಜಾಗದಲ್ಲಿವೆ. 17 ಇತರೆ ಕಡೆ ಇದೆ ಎಂದು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಉದಯವಾಣಿಗೆ ಉಪ ನಿರ್ದೇಶಕರು ಹೇಳಿದ್ದೇನು?:
“ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಪಿ.ಬೈಲಾಂಜನಪ್ಪ, ಆಸ್ತಿ ನೋಂದಣಿ ಆಗದ 571 ಶಾಲೆ ಪಟ್ಟಿಯನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಳುಹಿಸಿದ್ದು ಆಂದೋಲನದ ಮಾದರಿಯಲ್ಲಿ ಶಾಲೆಗಳ ಆಸ್ತಿಗಳ ನೋಂದಣಿ ಆಗಬೇ ಕೆಂದು ಈಗಾಗಲೇ ಸೂಚಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್ಟೇಟ್ ಅಧಿಕಾರಿಗಳಾ ಗಿದ್ದು ಆಯಾ ತಾಲೂಕು ದೈಹಿಕ ಶಿಕ್ಷಣ ಸಂಯೋಜಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಗ್ರಾಪಂ ಹಾಗೂ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಶಾಲೆಗಳಿಗೆ ಸೇರಿದ ಆಸ್ತಿಗಳಿಗೆ ಖಾತೆ ಮಾಡಿಸಿ ಸರ್ಕಾರಿ ಶಾಲೆಗಳ ಹಾಗೂ ಸರ್ಕಾರದ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣೆಗೆ ಸೂಚಿಸಲಾಗಿದೆ ಎಂದರು.
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.