765 ವಿದ್ಯಾರ್ಥಿಗಳು ಗೈರು
Team Udayavani, Jun 28, 2020, 6:49 AM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಗಣಿತ ವಿಷಯಕ್ಕೆ ಶನಿವಾರ ನಡೆದ ಪರೀಕ್ಷೆಗೆ ಒಟ್ಟು ನೋಂದಾಯಿತ 17,375 ವಿದ್ಯಾರ್ಥಿಗಳ ಪೈಕಿ 16,610 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದು, ಉಳಿದ 765 ವಿದ್ಯಾರ್ಥಿಗಳು ಪರೀಕ್ಷೆ ಯಿಂದ ದೂರ ಉಳಿದಿದ್ದರು. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಗೈರಾಗಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೊಸದಾಗಿ ನೋಂದಾಯಿತಗೊಂಡಿದ್ದ 8,167 ಬಾಲಕರು, 7,711 ಬಾಲಕಿಯರು ಸೇರಿ ಒಟ್ಟು 15, 878 ಪೈಕಿ 7.806 ಬಾಲಕರು ಹಾಗೂ 7,462 ಬಾಲಕಿಯರು ಸೇರಿ ಒಟ್ಟು 15,268 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉಳಿದ 610 ವಿದ್ಯಾರ್ಥಿಗಳು ಗೈರಾದರೆ, ಪುನರಾವರ್ತಿತ 1,015 ರಲ್ಲಿ 929 ವಿದ್ಯಾರ್ಥಿಗಳು ಪರೀಕ್ಷೆ ಬರೆದು 86 ಮಂದಿ ಗೈರಾಗಿದ್ದರು.
ಒಟ್ಟು ನೋಂದಾಯಿತ 294 ಖಾಸಗಿ ಹೊಸ ವಿದ್ಯಾರ್ಥಿಗಳ ಪೈಕಿ 254 ಮಂದಿ ಪರೀಕ್ಷೆ ಬರೆದು ಉಳಿದ 40 ವಿದ್ಯಾರ್ಥಿಗಳು ಗೈರಾದರೆ, ಖಾಸಗಿ ಪುನರಾವರ್ತಿತ ಒಟ್ಟು 188 ವಿದ್ಯಾರ್ಥಿಗಳ ಪೈಕಿ 159 ಮಂದಿ ಪರೀಕ್ಷೆ ಬರೆದು ಉಳಿದ 29 ಮಂದಿ ಗೈರಾಗಿದ್ದರು. ಈ ಸಂಬಂಧ ಡಿಡಿಪಿಐ ಎಸ್.ಜಿ.ನಾಗೇಶ್ ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಎಂದಿನಂತೆ ಕೋವಿಡ್-19 ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.