ವಿವಿಧ ಡಿಪೋಗಳ 8 ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ
Team Udayavani, Feb 6, 2022, 12:54 PM IST
ಗುಡಿಬಂಡೆ: ಕೊರೊನಾ ಕರಿನೆರಳಿನಲ್ಲಿ ಯಾವುದೇ ಆದಾಯದ ಮೂಲ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಾಲೂಕಿನ ಜನರಿಗೆ ಕೆಎಸ್‌ಆರ್ ಟಿಸಿ ಅಧಿಕಾರಿಗಳು ಯಾವುದೇ ಮೂನ್ಸೂಚನೆ ನೀಡದೆ, ಜಿಲ್ಲೆಯ ಎಲ್ಲಾ ಸಾರಿಗೆ ಡಿಪೋಗಳಿಂದ ಎಂಟು ಬಸ್ ನಿಲುಗಡೆ ಮಾಡಿರುವುದು ಈಗ ಸಾರ್ವಜನಿಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಜನತೆ ಕೃಷಿ ಹೊರತುಪಡಿಸಿ ಬೇರಾವುದೇ ಆದಾಯದ ಮೂಲ ಇಲ್ಲದೆ ಇರುವ ಸಮಯದಲ್ಲಿ ಕೊರೊನಾ ಆವಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನತೆಗೆ, ಅತಿವೃಷ್ಟಿಯಿಂದ ಬೆಳೆನಷ್ಟವಾಗಿ ಗಾಯದ ಮೇಲೆ ಬರೆ ಎಳೆದಂತಾಗಿ, ಕೇವಲ ಸರ್ಕಾರಿ ಸಾರಿಗೆಯನ್ನೇ ನಂಬಿಕೊಂಡಿದ್ದಪರಿಸ್ಥಿತಿಯಲ್ಲಿ ಏಕಾಏಕಿಯಾಗಿ ಚಿಕ್ಕಬಳ್ಳಾಪುರವಿಭಾಗ ವ್ಯಾಪ್ತಿಯಲ್ಲಿನ ಬಾಗೇಪಲ್ಲಿ, ಚಿಕ್ಕಬಳ್ಳಾಪುರ,ಗೌರಿಬಿದನೂರು ಬಸ್ ಡಿಪೋಗಳಿಂದ ಎಂಟು ಬಸ್‌ಗಳು ನಿಲ್ಲಿಸಿದ್ದಾರೆ. ಇದರಿಂದಾಗಿ ದಿನ ನಿತ್ಯಓಡಾಡುವ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ.
ಬೇಜವಾಬ್ದಾರಿ ಹೇಳಿಕೆ: ಬಸ್‌ಗಳು ಏಕಾಏಕಿ ನಿಲ್ಲಿಸಿರುವುದನ್ನು ಸಾರ್ವಜನಿಕರು ಬಸ್ ಡಿಪೋವ್ಯವಸ್ಥಾಪಕರಿಗೆ ಪ್ರಶ್ನಿಸಿದರೆ ನಿಮ್ಮ ತಾಲೂಕಿಗೆಬರುವ ಬಸ್‌ಗಳೇ ಇನ್ನು ನಿಲ್ಲಿಸುವಂತೆ ಮೇಲಧಿಕಾರಿಗಳು ಹೇಳುತ್ತಿದ್ದಾರೆ ಎಂದು ಬೇಜಾವಾಬ್ದಾರಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಪ್ರಯಾಣಿಕರಿದ್ರೂ ಪ್ರಯೋಜನವಿಲ್ಲ: ಹಲವು ವರ್ಷಗಳಿಂದ ಗುಡಿಬಂಡೆ ತಾಲೂಕಿನಲ್ಲಿ ಸಾರಿಗೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳನ್ನು ಮತ್ತು ಜಿಲ್ಲಾ ಮಟ್ಟದಅಧಿಕಾರಿಗಳಿಗೆ ಕೋರುತ್ತಾ ಬಂದರೂಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮವಹಿಸುತ್ತಿಲ್ಲ, ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ಸಾರಿಗೆಯನ್ನು ಹೆಚ್ಚು ಮಾಡುವುದು ಬಿಟ್ಟು, ಹಾಲಿ ಇರುವ ಬಸ್ ಗಳನ್ನೇ ನಿಲ್ಲಿಸುತ್ತಿರುವುದು ದುರದೃಷ್ಟಕರ ಸಂಗತಿ.
ಕೊರೊನಾ ಹೆಸರಿನಲ್ಲಿ 8 ಬಸ್ ನಿಲುಗುಡೆ: ಚಿಕ್ಕಬಳ್ಳಾಪುರ ವಿಭಾಗೀಯ ಕಚೇರಿ ವ್ಯಾಪ್ತಿಯ ಬಾಗೇಪಲ್ಲಿ ಡಿಪೋ ವತಿಯಿಂದ ಮಾರ್ಗ ಸಂಖ್ಯೆ 34, 27, 51, 52, ಗೌರಿಬಿದನೂರು ಡಿಪೋದಿಂದ ಮಾರ್ಗ ಸಂಖ್ಯೆ 14, 12, 40, ಚಿಕ್ಕಬಳ್ಳಾಪುರ ಡಿಪೋದಿಂದ ಮಾರ್ಗ ಸಂಖ್ಯೆ 16 ಬಸ್ ಏಕಾಏಕಿ ಕೊರೊನಾ ಹೆಸರನ್ನು ಇಟ್ಟುಕೊಂಡು ಸಾರಿಗೆ ನಿಯಂತ್ರಣಾಧಿಕಾರಿಗಳು ಗುಡಿಬಂಡೆ ಮಾರ್ಗ ಕಿತ್ತು ಬೇರೆಡೆಗೆ ಹಾಕಿದ್ದಾರೆ.
ಖಾಸಗಿ ವಾಹನಗಳೇ ಗತಿ: ತಾಲೂಕಿನಲ್ಲಿ ಈಗ ಹಾಲಿ ಇರುವ ಸಾರಿಗೆ ಬಸ್‌ಗಳನ್ನು ಏಕಾಏಕಿನಿಲ್ಲಿಸುತ್ತಿರುವುದರಿಂದ ಖಾಸಗಿ ಮಿನಿ ಬಸ್‌ಗಳು, ಆಟೋಗಳೇ ಗತಿಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಸಿಬ್ಬಂದಿಗಂತೂ ವಾರ್ಷಿಕ ಹಾಗೂ ಮಾಸಿಕ ಬಸ್ ಮಾಡಿಸಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ, ಖಾಸಗಿ ವಾಹನಗಳಲ್ಲಿ ದುಬಾರಿ ಶುಲ್ಕ ತೆತ್ತಿ ಸಂಚರಿಸಬೇಕಾಗಿದೆ.
ಫಾರಂ 4 ಕೊಟ್ಟರೆ ಬಸ್ ಕಳುಹಿಸುತ್ತೇವೆ:
ಬಾಗೇಪಲ್ಲಿ ಡಿಪೋ ವ್ಯವಸ್ಥಾಪಕರು ಹೇಳುವ ಪ್ರಕಾರ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಮಗೆ ಫಾರಂ 4 ಕೊಟ್ಟರೆ ಮಾತ್ರ ನಾವು ಬಸ್ ಕಳುಹಿಸಲುಸಾಧ್ಯ. ಇಲ್ಲದೆ ಇದ್ದ ಪಕ್ಷದಲ್ಲಿ ನಾವು ಬಸ್ ಕಳುಹಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಗುಡಿಬಂಡೆ ಮಾರ್ಗದ ಯಾವುದೇ ಬಸ್‌ಗಳನ್ನು ನಾವು ನಿಲ್ಲಿಸಿಲ್ಲ, ಎಲ್ಲಾ ಮಾರ್ಗಗಳಲ್ಲೂ ಬಸ್ ಗಳು ಸಂಚರಿಸುತ್ತಿವೆ. –ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ
–ಎನ್.ನವೀನ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.