ನದಿಗಳ ಪುನಶ್ಚೇತನಕ್ಕೆ ಪ್ರತ್ಯೇಕ ಸಂಸ್ಥೆ ಅಗತ್ಯ 


Team Udayavani, Jan 3, 2022, 12:59 PM IST

ನದಿಗಳ ಪುನಶ್ಚೇತನಕ್ಕೆ ಪ್ರತ್ಯೇಕ ಸಂಸ್ಥೆ ಅಗತ್ಯ 

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಬೆಟ್ಟಗಳ ಶ್ರೇಣಿಯಲ್ಲಿಉಗಮವಾಗುವ ಆರು ನದಿ ನಿರ್ವಹಿಸಲು ಸರ್ಕಾರಒಂದು ಸಂಸ್ಥೆ ರಚಿಸದಿದ್ದರೆ, ನೀರಿನ ಸುತ್ತಕೇಂದ್ರೀಕೃತವಾಗಿರುವ ನಮ್ಮ ಸಂಸ್ಕೃತಿಯು ಕ್ರಮೇಣ ಅವನತಿ ಹೊಂದುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್‌¤ ರಾಜ್‌ನ ಸಂಪನ್ಮೂಲ ವ್ಯಕ್ತಿ ಪಾರ್ಥಜಿ ತಿಳಿಸಿದರು.

ನಗರದ ಪಾಪಾಗ್ನಿ ಮಠದಲ್ಲಿ ಜಿಪಂ, ಫೌಂಡೇಷನ್‌ ಫಾರ್‌ ಎಕಲಾಜಿಕಲ್‌ ಸೆಕ್ಯೂರಿಟಿ ಆಯೋಜಿಸಿದ್ದಪಾಪಾಗ್ನಿ ನದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಪಾಪಾಗ್ನಿಯು ಪಾಪ ಮತ್ತು ಅಗ್ನಿ ಪದಗಳಸಂಯುಕ್ತವಾಗಿದೆ. ದಂತಕಥೆಯ ಪ್ರಕಾರ, ಈಪ್ರದೇಶದಲ್ಲಿ ವಾಸಿಸುವ ಚೆಂಚಸ್‌ ಎಂಬ ಮುಗ್ಧಬುಡಕಟ್ಟು ಮುಖ್ಯಸ್ಥನನ್ನು ಒಮ್ಮೆ ಕೊಂದ ರಾಜನುತನ್ನ ಪಾಪಕ್ಕೆ ಶಿಕ್ಷೆ ಆಗಿ ಕುಷ್ಠರೋಗ ಪೀಡಿತನಾಗಿದ್ದನು.ಅವನು ಪಾಪಾಗ್ನಿ ನದಿಯಲ್ಲಿ ಸ್ನಾನ ಮಾಡಿದನಂತರವೇ ಅವನು ಬಾಧೆಯಿಂದಗುಣಮುಖನಾದನೆಂದು ಭಾವಿಸಲಾಗಿದೆ. ಆ ನದಿಯು ಅವನ ಪಾಪವನ್ನು ಬೂದಿ ಮಾಡಿತು ಎಂದು ಹೇಳಲಾಗುತ್ತದೆ. ಹೀಗಾಗಿ ಪಾಪಾಗ್ನಿ ಎಂಬ ಹೆಸರು ಪಡೆದುಕೊಂಡಿದೆ ಎಂದು ತಿಳಿಸಿದರು.

ಪಾಪಾಗ್ನಿ ನದಿಯು ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ. ಇದು ದೀರ್ಘ‌ಕಾಲಿಕ ನದಿ ಅಲ್ಲ. ಅದರ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 60-80 ಸೆಂ.ಮೀ. ಮಳೆ ಪಡೆಯುತ್ತದೆ. ಇದು ಮಣ್ಣಿನ ಸವಕಳಿಯಿಂದ ಆಗ್ಗಾಗ್ಗೆಪರಿಣಾಮ ಬೀರುವ ಗ್ರಾನೈಟಿಕ್‌ ನಿಕ್ಷೇಪಗಳು, ಕೆಂಪುಮಣ್ಣು ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದು ಹೇಳಿದರು.

ಪೆನ್ನಾರ ನದಿ ಸೇರುತ್ತೆ: ಇದು ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಆಂಧ್ರಪ್ರದೇಶದಚಿತ್ತೂರು, ಅನಂತಪುರ, ಕಡಪ ಜಿಲ್ಲೆಗಳಲ್ಲಿ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶವು16,500 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ಆಂಧ್ರಪ್ರದೇಶದ ಕಮಲಾಪುರಂ (ಗಂಡಿ)ಬಳಿ ಪೆನ್ನಾರ ನದಿ ಸೇರುತ್ತದೆ ಎಂದು ತಿಳಿಸಿದರು.

ನೀರು ಸಂರಕ್ಷಣಾ ರಚನೆ ಹಾಳು: ಪಾಪಾಗ್ನಿ ಅಲ್ಲದೆ, ಅರ್ಕಾವತಿ, ಚಿತ್ರಾವತಿ, ಉತ್ತರ ಪಿನಾಕಿನಿ ಅಥವಾಪೆನ್ನಾರ್‌, ದಕ್ಷಿಣ ಪಿನಾಕಿನಿ ಅಥವಾ ಪೊನ್ನಯ್ಯರ್‌,ಪಾಲಾರ್‌ ನದಿ ಈ ನಂದಿಬೆಟ್ಟದ ಶ್ರೇಣಿಯಿಂದ ಹುಟ್ಟುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರಿದಮರಳು ಗಣಿಗಾರಿಕೆಯಿಂದ ನದಿಯು ತನ್ನ ಅಸ್ತಿತ್ವಕಳೆದುಕೊಳ್ಳುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ.ನದಿ ಸಮೀಪ ಇರುವ ನೀರು ಸಂರಕ್ಷಣಾ ರಚನೆಗಳನ್ನು ಹಾನಿಗೊಳಿಸುತ್ತಿದೆ ವಿಷಾದ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಯೋಜನಾಧಿಕಾರಿ ಧನು ರೇಣುಕಾ ಮಾತನಾಡಿ, ಅಧುನಿಕ ಯುಗದಿಂದ ನಾವೆಲ್ಲ ಹಳ್ಳಿ ಸೊಗಡು ಮರೆಯುತ್ತಿದ್ದೇವೆ. ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ಬರೀಮೆಕಾನಿಲ್‌ ಜೀವನ ಮಾತ್ರ ನಗರಗಳಲ್ಲಿ ನೋಡಲು ಸಾಧ್ಯವಿದೆ. ಸ್ನೇಹ, ಪ್ರೀತಿ, ಬಂಧುತ್ವ, ನಂಬಿಕೆ,ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಒಳ್ಳೆಯವಾತಾವರಣ ಗ್ರಾಮೀಣ ಭಾಗದಲ್ಲಿ ಮಾತ್ರ ನೋಡಬಹುದು ಎಂದು ಹೇಳಿದರು.

ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ: ಬಾಪೂಜಿಯವರ ಕನಸು ಕೂಡ ಹಳ್ಳಿ ಕಟ್ಟುವುದೇಆಗಿತ್ತು. ಗ್ರಾಮಗಳ ಉದ್ದಾರವಾಗದೇ ಈ ದೇಶದಅಭಿವೃದ್ಧಿ ಶೂನ್ಯ ಎಂದು ಸಾರಿದ್ದರು. ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮಗಳಲ್ಲಿ ಇರುವ ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ. ಈ

ನಿಟ್ಟಿನಲ್ಲಿ ಗ್ರಾಮ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಸಾಮೂಹಿಕ ಆಸ್ತಿ ಸಂರಕ್ಷಿಸಿ ಅಭಿವೃದ್ಧಿಪಡಿಸಲು ಎಫ್‌ಇಎಸ್‌ ಸಂಸ್ಥೆ ಶ್ರಮಿಸುತ್ತಿದೆ. ಗ್ರಾಮಸ್ಥರೆಲ್ಲರೂ ಒಂದಾಗಿ ಈ ಆಸ್ತಿ ಉಳಿಸಿ ಅಭಿವೃದ್ಧಿಪಡಿಸುವ ಕಡೆ ನಮ್ಮ ಚಿಂತನೆ ಸಾಗಬೇಕು ಎಂದು ವಿವರಿಸಿದರು.

ನೀರಿನ ಪ್ರಾಮುಖ್ಯತೆ ಅರಿಯಬೇಕಿದೆ: ಫೌಂಡೇಶನ್‌ ಫಾರ್‌ ಎಕಲಾಜಿಕಲ್‌ ಸೆಕ್ಯೂರಿಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಆಗಟಮಡಕ ರಮೇಶ್‌ ಮಾತನಾಡಿ, ಮಾನವನ ಜೀವಿಸುವುದಕ್ಕೆ ಅಗತ್ಯವಾಗಿಬೇಕಾಗಿರುವುದಲ್ಲಿ ಗಾಳಿಯ ನಂತರದ ಸ್ಥಾನ ನೀರು. ಅದರ ಪ್ರಾಮುಖ್ಯತೆ ಅರಿಯಬೇಕಾಗಿದೆ. ಭೂಮಿಮೇಲೆ ಶೇ.70 ನೀರು ಇದ್ದರೂ ಪರದಾಟ ನಿಂತಿಲ್ಲ. ಅದರಲ್ಲಿ ಬಳಕೆಗೆ ಬರುವುದು ಶೇ.3 ಮಾತ್ರ. ಅದರಲ್ಲೂ ಶೇ.2 ಮಂಜುಗಡ್ಡೆ ಆಗಿದೆ ಎಂದು ಹೇಳಿದರು.

1,700 ವರ್ಷ ಇತಿಹಾಸ: ಉಳಿದ ಶೇ.1 ಸಿಹಿ ನೀರಿನಲ್ಲಿ ಕೃಷಿ, ಪಶು ಸಂಗೋಪನೆ, ಕುಡಿಯಲು, ಮನೆ ಬಳಕೆಗೆ, ಕಾರ್ಖಾನೆ ಮುಂತಾದವುಗಳಿಗೂ ಪೂರೈಕೆ ಆಗಬೇಕು. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನಾಡಲ್ಲಿ ಕೆರೆನೀರಾವರಿ ಕೃಷಿ ವ್ಯವಸ್ಥೆಗೆ 1,700 ವರ್ಷ ಇತಿಹಾಸವಿದೆ ಎಂದು ತಿಳಿಸಿದರು.

ಎಫ್‌ಇಎಸ್‌ ಸಂಸ್ಥೆಯ ಹಿರಿಯ ಯೋಜನಾ ವ್ಯವಸ್ಥಾಪಕ ಲೋಕೇಶ್‌, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷಮುನಿನಾರಾಯಣಪ್ಪ, ಪಿಡಿಒ ತಿಪ್ಪಯ್ಯ, ಸದಸ್ಯೆಭಾಗ್ಯಮ್ಮ, ಶಿಡ್ಲಘಟ್ಟ ತಾಲೂಕು ಕೊತ್ತನೂರು ಗ್ರಾಪಂಅಧ್ಯಕ್ಷ ಮಂಜುನಾಥ್‌, ಎಫ್‌ಇಎಸ್‌ ಸಂಸ್ಥೆಯ ತಂಡದನಾಯಕ ವಿಜಯ್‌ಕುಮಾರ್‌, ರೀವಾರ್ಡ್ಸ್‌ ಸಂಸ್ಥೆಯಮುಖ್ಯಸ್ಥ ಹರಿಪ್ರಸಾದ್‌, ನಂದೀಶ್ವರ ರೂರಲ್‌ ಟ್ರಸ್ಟ್‌ನಈಶ್ವರಯ್ಯ, ವೆಂಕಟೇಶ್‌, ಬೂದಾಳ ರಾಮಣ್ಣ, ಎಫ್‌ಇಎಸ್‌ ಸಂಸ್ಥೆಯ ಸಂಯೋಜಕಿ ನಿಖತ್‌ ಪರ್ವೀಣ್‌,ನಯನ್‌ರೆಡ್ಡಿ, ಸಿಬ್ಬಂದಿ ಪಲ್ಲವಿ, ಕುಮಾರ್‌, ಉತ್ತನ್ನ, ಸುನೀಲ್‌, ಸೌಭಾಗ್ಯ, ಲೀಲಾವತಿ, ಸಿ.ನಾರಾಯಣಸ್ವಾಮಿ,ಗೋಪಿ, ಮುನಿರಾಜ್‌, ಸುಬ್ರಮಣಿ, ವಿಶ್ವನಾಥ್‌,ಪಂಚಾಯ್ತಿ ಸಂಪನ್ಮೂಲ ವ್ಯಕ್ತಿಗಳಾದ ವಿ.ಎಲ್‌.ಮಧು,ರಾಜಮ್ಮ, ಚಂದ್ರನಾಯಕ್‌, ರೇಖಾ ಮತ್ತಿತರರು ಭಾಗವಹಿಸಿದರು.

 

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SSLC-PUC-Mark

Correction: ಎಸೆಸೆಲ್ಸಿ, ಪಿಯು ಅಂಕಪಟ್ಟಿ ತಿದ್ದುಪಡಿ ಇನ್ನು ದುಬಾರಿ!

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Chikkaballapur: ಜೀವಭಯದಲ್ಲೇ ಕೂಲಿ ಕಾರ್ಮಿಕರ ಸಂಚಾರ!

Chikkaballapur: ಜೀವಭಯದಲ್ಲೇ ಕೂಲಿ ಕಾರ್ಮಿಕರ ಸಂಚಾರ!

Chikkaballapur: ಡೇರಿಗಳಲ್ಲಿ ಹಾಲಿಗೆ ನೀರು; ವಿಡಿಯೋ ವೈರಲ್‌

Chikkaballapur: ಡೇರಿಗಳಲ್ಲಿ ಹಾಲಿಗೆ ನೀರು; ವಿಡಿಯೋ ವೈರಲ್‌

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.