![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 28, 2021, 5:20 PM IST
ಚಿಕ್ಕಬಳ್ಳಾಪುರ: ತಂಬಾಕು ಸೇವನೆ ಆರೋಗ್ಯವನ್ನುಹದಗೆಡಿಸುವುದಲ್ಲದೇ, ಯುವಕರು ಮತ್ತುನೆರೆಹೊರೆಯವರ ಮೇಲೆ ಪರಿಣಾಮ ಬೀರುತ್ತದೆ.ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಸೇರಿದಂತೆ ತಂಬಾಕು ಸೇವನೆ ಮಾಡಿದವರ ವಿರುದ್ಧಕಾನೂನು ಕ್ರಮಕೈಗೊಂಡು, ದಂಡ ವಿಧಿಸುವಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿಅನುಷ್ಠಾನಗೊಳಿಸಬೇಕು ಎಂದು ಅಪರಜಿಲ್ಲಾಧಿಕಾರಿ ಎಚ್.ಅಮರೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಮತ್ತು ಕೊಟಾ³ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣಕಾರ್ಯಕ್ರಮದಡಿ ಈಗಾಗಲೇ ಜಿಲ್ಲೆಯಲ್ಲಿ ಹಲವುಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.
ತಂಬಾಕುಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವಪರಿಣಾಮಗಳ ಬಗ್ಗೆ ಸಾಮಾನ್ಯರು, ಯುವಕರಿಗೆಅರಿವಿನ ಅಗತ್ಯವಿದೆ. ತಂಬಾಕು ಸೇವನೆಯಲ್ಲಿತೊಡಗಿರುವವರನ್ನು ತಂಬಾಕಿನಿಂದಮುಕ್ತಗೊಳಿಸಬೇಕು. ತಂಬಾಕು ಉತ್ಪನ್ನಗಳಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆಅರಿವು ಮೂಡಿಸಬೇಕು ಎಂದರು.
ಜಾಗೃತಿ ನಾಮಫಲಕ ಕಡ್ಡಾಯ: ತಾಲೂಕಿನಸಾರ್ವಜನಿಕ ಸ್ಥಳ, ಶಾಲಾ-ಕಾಲೇಜು,ಅಂಗಡಿಗಳು ಹಾಗೂ ಆಸ್ಪತ್ರೆ ಸುತ್ತಲೂ ಸ್ವತ್ಛತೆಕಾಪಾಡಿಕೊಳ್ಳುವುದರ ಜೊತೆಗೆ ತಂಬಾಕುಸೇವನೆಯಿಂದಾಗುವ ಪರಿಣಾಮಗಳು ಮತ್ತುಧೂಮಪಾನ, ತಂಬಾಕು ನಿಯಂತ್ರಣದ ಬಗ್ಗೆಜಾಗೃತಿ ಮೂಡಿಸಬೇಕು. ತಾಲೂಕುವಾರುಈಗಾಗಲೇ 743 ವಿರುದ್ಧ ದಂಡ ವಿಧಿಸಿದ್ದು, ಒಟ್ಟು51,950 ರೂ. ದಂಡ ಸಂಗ್ರಹಿಸಲಾಗಿದೆ.
18ವಷದೊಳಗಿನ ವಯಸ್ಕರಿಗೆ ತಂಬಾಕು,ಧೂಮಪಾನ ಮಾರಾಟ ಮಾಡದಂತೆಕ್ರಮವಹಿಸಿದ್ದು, ಶೇ.80.77ರಷ್ಟು ಪ್ರಗತಿ ಸಾಧಿಸಿದೆ.ಹೆಚ್ಚಿನ ರೀತಿಯಾಗಿ ತಂಬಾಕುಸೇವನೆಯಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿನಾಮಫಲಕಗಳು ಕಡ್ಡಾಯ ಮಾಡುವ ಅಗತ್ಯವಿದೆಎಂದರು.ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕಡಾ.ರಮೇಶ್, ತಾಲೂಕು ಆರೋಗ್ಯ ಅಧಿಕಾರಿಮಂಜುಳಾ ಸೇರಿದಂತೆ ವಿವಿಧ ಇಲಾಖೆಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.