ಮುಖ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಬೇಸತ್ತು ಮಕ್ಕಳೇ ರಸ್ತೆ ಗುಂಡಿ ಮುಚ್ಚಿದರು..!
Team Udayavani, Dec 16, 2021, 11:37 AM IST
ಗುಡಿಬಂಡೆ: ಪಟ್ಟಣದ ಠಾಣೆ ಪಕ್ಕದಿಂದ ರಾಮಪಟ್ಟಣ-ಗುಡಿಬಂಡೆ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಭಾರೀ ಗುಂಡಿಗಳು ಬಿದ್ದಿದ್ದು ಮಕ್ಕಳೇ ರಸ್ತೆಯ ಗುಂಡಿ ಮುಚ್ಚಿ ಮಾದರಿಯಾದರು.
ಸಂಚಾರ ಕಷ್ಟವಾಗಿತ್ತು: ಗುಡಿಬಂಡೆ ಪಟ್ಟ ಣದ ನಾರೆಪ್ಪ ಬಡಾ ವಣೆಯಲ್ಲಿ ಹಾದು ಹೋಗುವ ರಸ್ತೆ ಇತ್ತೀಚೆಗೆ ಬಿದ್ದ ಮಳೆ ಹಾಗೂ ರಾಮಪಟ್ಟಣ ರಸ್ತೆಯ ಚರಂಡಿ ನೀರನ್ನು ಈ ಭಾಗಕ್ಕೆ ತಿರುಗಿಸಿರುವುದರಿಂದ, ಚರಂಡಿ ನೀರು, ಮನೆಗಳ ನೀರು ರಸ್ತೆಗೆ ಬಂದು ಸಣ್ಣ ಗಾತ್ರದಕಾಲು ವೆಗಳಾಗಿ ಪರಿಣಮಿಸಿತ್ತು.
ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ಓಡಾಡಲುಕಷ್ಟಕರವಾಗಿತ್ತು. ಗುಡಿಬಂಡೆಯಿಂದ ರಾಮಪಟ್ಟಣಕ್ಕೆ ಹೋಗುವ ರಸ್ತೆ ಕಿರಿದಾಗಿದ್ದು, ಒಂದು ಸಣ್ಣಗಾತ್ರದ ವಾಹನ ಬಂದರೆ, ಕಿರಿದಾದ ಬೈಕ್ ಸಹ ಸಂಚರಿಸದ ಸ್ಥಿತಿಯಿತ್ತು. ಇನ್ನು ಆ ರಸ್ತೆಯಲ್ಲಿ ಸಂಚರಿಸಿದರೆ ಅಪಾಯಕ್ಕೆ ತುತ್ತಾಗಬಹುದಾದ ಸಂದರ್ಭ ಹೆಚ್ಚಿತ್ತು. ಪೊಲೀಸ್ ಠಾಣೆಯ ಪಕ್ಕದಲ್ಲಿನ ರಸ್ತೆ ಯಲ್ಲಿ ಹೆಚ್ಚಿನ ಜನತೆ ಸಂಚರಿಸುತ್ತಿದ್ದರು.
ರಸ್ತೆ ಸಂಚಾರಕ್ಕೆ ಸಂಚಕಾರವಾಗಿರುವುದ ರಿಂದ ಪಪಂ ಮುಖ್ಯಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋ ಜನವಾಗಿರಲಿಲ್ಲ. ಇದರಿಂದ ಬೇಸತ್ತ ಸ್ಥಳಿಯ ಮಕ್ಕಳೇ ಆಟೋದಲ್ಲಿ ತ್ಯಾಜ್ಯ ಮಣ್ಣನ್ನು ತಂದು ಗುಂಡಿ ಮುಚ್ಚಿದ್ದಾರೆ. ಅಧಿಕಾರಿಗಳು ಮಾಡುವ ಕೆಲಸವನ್ನು ಮಕ್ಕಳು ಮಾಡಿರುವುದರಿಂದ ಸಾರ್ವ ಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.