ಸಾವಯವ ಕೃಷಿ ಪದ್ಧತಿಗೆ ಅನುರೂಪಾ ಸಲಹೆ
Team Udayavani, Jan 4, 2021, 2:41 PM IST
ಚಿಂತಾಮಣಿ: ಅನೇಕ ವರ್ಷಗಳ ಹಿಂದೆ ಉತ್ತಮ ಪರಿಸರವಿದ್ದು, ಸಮಯಕ್ಕೆ ಸರಿಯಾಗಿ ಮಳೆ-ಬೆಳೆಯಾಗುತ್ತಿತು. ಆರೋಗ್ಯವೂ ಉತ್ತಮವಾಗಿರು ತ್ತಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ರಸಗೊಬ್ಬರಗಳ ಬಳಕೆಯಿಂದ ನಾವು ಬೆಳೆಯುವ ಬೆಳೆಯಲ್ಲಿ ಪೌಷ್ಟಿಕಾಂಶ ಕುಂಠಿತಗೊಂಡು ಆರೋಗ್ಯ ಕೆಡುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪಾ ಅಭಿಪ್ರಾಯಪಟ್ಟರು.
ತಾಲೂಕಿನ ಮುರಗಮಲ್ಲಾ ಹೋಬಳಿ, ನಿಮ್ಮ ಕಾಯಿಲಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಗಂಗಪ್ಪರವರ ಜಮೀನಿನಲ್ಲಿ ಆತ್ಮಾ ಯೋಜನೆಯ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಾವಯುವ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಹಳೇ ಪದ್ಧತಿಯನ್ನು ಉಪಯೋಗಿಸಿ ಕೊಳ್ಳುವುದು ಉತ್ತಮ. ಈಗಿನ ಆಧುನಿಕ ಕೃಷಿ ಪದ್ಧತಿಯ ಪದಾರ್ಥಗಳನ್ನು ಸೇವನೆ ಮಾಡುತ್ತಿರುವುದರಿಂದ ಬಹುತೇಕ ಮಂದಿಗೆ ಬಾಲ್ಯದಲ್ಲೇ ಆರೋಗ್ಯ ದಲ್ಲಿ ಏರುಪೇರಾಗುತ್ತಿದೆ. ಜೊತೆಗೆ ವಾತಾವರಣ ಪರಿಸರವೂ ಏರುಪೇರಾಗಿದೆ ಎಂದರು.
ಆತ್ಮಾ ಯೋಜನೆಯ ಉಪನಿರ್ದೇಶಕ ಸತೀಶ್ ಮಾತನಾಡಿ, ರೈತರಿಗೆ ಗೋವಿನ ಅದರಲ್ಲೂ ನಾಟಿಹಸುಗಳನ್ನು ರೈತರು ಪೋಷಣೆ ಮಾಡುವುದು ಉತ್ತಮ. ಇದರಿಂದ ಒಳ್ಳೆಯ ಹಾಲು, ತುಪ್ಪ, ಬೆಣ್ಣೆ ಸೇವೆನೆ ಮಾಡುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ ಹಾಗೂ ಇದರ ಸಗಣಿಯಿಂದ ರೈತರು ಗೊಬ್ಬರತಯಾರಿಸಿ ವ್ಯವಸಾಯಕ್ಕೆ ಉಪಯೋಗಿಸಿದಾಗ ಉತ್ತಮ ರೀತಿಯ ಪೌಷ್ಟಿಕಾಂಶದ ಬೆಳೆ ಬೆಳೆಯಬಹುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ಮಾತನಾಡಿ, ಮುಂಗಾರು ಬೆಳೆ ಸಮೀಕ್ಷೆಯನ್ನು ರೈತರು ಆ್ಯಪ್ ಮೂಲಕ ಅಳವಡಿಸಿಕೊಂಡಂತೆ ಹಿಂಗಾರು ಬೆಳೆಯ ಸಮೀಕ್ಷೆ ಅಳವಡಿಸಿಕೊಳ್ಳಬೇಕು. ಪಿ.ಆರ್ಆ್ಯಪ್ ಮೂಲಕ ನೋಂದಣಿ ಮಾಡಿ ಕೊಳ್ಳಬೇಕೆಂದು ಅರಿವು ಮೂಡಿಸಿದರು. ಕೃಷಿ ಅಧಿಕಾರಿ ಎಂ.ಸಿ.ಪ್ರಸಾದ್ ರಾಗಿ ಬೆಂಬಲ ಬೆಲೆ ಸಂಬಂಧಿಸಿದಂತೆ ಬೆಲೆ ದರ್ಶಕ ತಾಂತ್ರಂಶ ಉಪಯೋಗಿಸುವ ಮತ್ತುಆಕ್ಷೇಪಣೆ ಸಲ್ಲಿಸುವ ಬಗ್ಗೆ ತಿಳಿಸಿದರು. ಆತ್ಮ ಯೋಜನೆಯ ಸಂಜಯ್ ಶ್ವೇತ, ಮುನಿರಾಜು, ರಾಮಚಂದ್ರ ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.