ಉದ್ಯೋಗ ಖಾತ್ರಿ ಸದ್ಬಳಕೆಗೆ ಸಲಹೆ
Team Udayavani, Oct 4, 2020, 2:13 PM IST
ಪಾತಪಾಳ್ಯ: ರೈತಾಪಿ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ ವರವಾಗಿರುವ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಇ.ಒ. ಹೆಚ್.ಎನ್.ಮಂಜುನಾಥಸ್ವಾಮಿ ತಿಳಿಸಿದರು.
ನಲ್ಲಚೆರವು ಪ್ರಮುಖ ರಸ್ತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ನಿರ್ಮಿಸುತ್ತಿದ್ದ ರಿವೀಟ್‌ಮೆಂಟ್ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯು ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ವರದಾನವಾಗಿದೆ.
ಕಾಮಗಾರಿ ಮಾಡುವವರು ಬ್ಯಾಂಕ್ ಖಾತೆ, ಜಾಬ್‌ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಅಪ್ರಾಪ್ತರು ಕೂಲಿ ಮಾಡುವುದು ಅಪರಾಧ. ಖಾತ್ರಿ ಯೋಜನೆಯಲ್ಲಿ ತೋಟಗಾರಿಕೆ, ಪಶುಪಾಲನೆ, ಕೃಷಿ, ರೇಷ್ಮೆ, ಮೀನುಗಾರಿಕೆ, ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಮಾಡಬಹುದು. ಕೆರೆ ಹೂಳೆತ್ತುವುದು, ಗೋಕುಂಟೆ, ಹೊಸಕೆರೆ ನಿರ್ಮಾಣ, ನೆರೆಹಾವಳಿ ತಡೆಗಟ್ಟುವ ಕಾಮಗಾರಿಗಳು, ಮಣ್ಣುಗಾಲುವೆ ನಿರ್ಮಾಣ, ಗ್ರಾಮೀಣ ಗೋದಾಮ, ಸ್ಮಶಾನ ಅಭಿವೃದ್ಧಿ ಸರ್ಕಾರಿ ಶಾಲೆಗಳ ಆಟದ ಮೈದಾನ ಹಾಗೂ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಸೋಪ್‌ಫಿಟ್, ಪೌಷ್ಟಿಕ ಕೈತೋಟ, ಅಣಬೆ ಬೇಸಾಯ ಮಾಡಬಹುದು ಎಂದು ತಿಳಿಸಿದರು.
ತಾಲೂಕು ಸಾಕ್ಷರತಾ ಸಂಯೋಜಕ ಎನ್. ಶಿವಪ್ಪ, ಚೇಳೂರು ಗ್ರಾಪಂ ಪಿಡಿಒ ಕೆ.ಸುರೇಶ್, ಪ್ರಸನ್ನ ಹಾಗೂ ಕೂಲಿ ಕಾರ್ಮಿಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್ ನಿಲ್ದಾಣ
Chikkaballapur: ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡಿದ್ದ ಅಂತಾರಾಜ್ಯ ಸೈಬರ್ ವಂಚಕನ ಬಂಧನ
Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್ ನಿಲ್ದಾಣ
Gudibande: ಹೆಸರಿಗಷ್ಟೇ ಬಸ್ ನಿಲ್ದಾಣ; ಬಸ್‌ಗಳೇ ಬರಲ್ಲ
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.