ಗ್ರಾಮಾಭಿವೃದ್ಧಿಗೆ ಶ್ರಮಿಸಲು ಸಲಹೆ
Team Udayavani, Feb 24, 2021, 1:41 PM IST
ಚಿಂತಾಮಣಿ: ಗ್ರಾಮೀಣ ಜನರ ಅಭಿವೃದ್ಧಿಗಾಗಿ ಸ್ಥಳೀಯಸರ್ಕಾರಗಳು ಸಮರ್ಪಕವಾಗಿ ಕೆಲಸ ಮಾಡುವ ಉದ್ದೇಶದಿಂದ ನೂತನ ಗ್ರಾಪಂ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದ್ದು, ಅವರನ್ನು ಜನಸೇವೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.
ನಗರದ ತಾಪಂ ಕಚೇರಿಯಲ್ಲಿ ನೂತನ ಗ್ರಾಪಂಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿಮಾತನಾಡಿದ ಅವರು, ಗ್ರಾಪಂನಲ್ಲಿ ಗ್ರಾಮದ ಮೂಲ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲ. ಅದರೊಂದಿಗೆ ಶೇ.100 ಲಸಿಕೆ ಸಾಧಿಸುವುದು, ಶೇ.100 ಶಾಲಾ ದಾಖಲಾತಿಸಾಧಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವಂತಹ ಕೆಲಸದೊಂದಿಗೆ ಬಾಲ್ಯವಿವಾಹ ಪದ್ಧತಿ, ಬಾಲಕಾರ್ಮಿಕ ಪದ್ಧತಿ ನಿಲ್ಲಿಸುವುದು ಸೇರಿದಂತೆ ಹಲವು ಕಾರ್ಯ ಕ್ರಮಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ನಾವು ಗ್ರಾಪಂಗಳಲ್ಲಿ ಶೇ.96 ರಷ್ಟು ತೆರಿಗೆ ವಸೂಲಿ ಸಾಧನೆ ಮಾಡಿದ್ದೇವೆ. ಇದೇ ಸಾಧನೆ ಮುಂದಿನದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಶೇ.100 ರೊಂದಿಗೆ ಮುನ್ನಡೆಸಬೇಕು. ಗ್ರಾಮೀಣ ಭಾಗದಲ್ಲಿ ವಿವಿಧ ಬಗೆಯಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮತ್ತು ಉತ್ತಮಸೇವೆ ಒದಗಿಸುತ್ತೀರಾ ಎಂಬ ನಂಬಿಕೆಯಿಂದ ಜನರು ನಿಮ್ಮನ್ನು ಸದಸ್ಯರನ್ನಾಗಿ ಆಯ್ಕೆಟ್ಟುಕೊಂಡು ಕೆಲಸ ಮಾಡಬೇಕೆಂದರು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್, ತಾಪಂ ಇಒ ಜಿ.ಆರ್.ಮಂಜುನಾಥ್, ತರಬೇತುದಾರರಾದ ಶಶಿರಾಜ್, ಆರ್.ಡಿ.ಮಂಜುನಾಥ್, ಪಿಡಿಒ ಶ್ರೀ ನಾಥ್ ಸೇರಿದಂತೆ ಗ್ರಾಪಂ ಸದಸ್ಯರು, ಅಧಿಕಾರಿಗಳು, ಇದ್ದರು.
ಕಿರುಕುಳ: ದಂಪತಿ ಧರಣಿ :
ಗೌರಿಬಿದನೂರು: ತಾಲೂಕಿನ ಗಂಗಸಂದ್ರದಲ್ಲಿ ಗ್ರಾಮಸ್ಥರ ಕಿರುಕುಳ ಖಂಡಿಸಿ ಗಂಡ-ಹೆಂಡತಿ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಎನ್. ಹನುಮಂತನಾಯಕ್ ಮತ್ತು ಪತ್ನಿ ಮಾತನಾಡಿ, ನಮ್ಮ ಕುಟುಂಬದ ಮೇಲೆ ವಿನಾಃಕಾರಣ ಅಕ್ಕಪಕ್ಕದವರು ಕಿರುಕುಳನೀಡುತ್ತಿದ್ದಾರೆ. ಮನೆ ಸುತ್ತಮುತ್ತ ಗಲೀಜು ಹಾಕುವುದು, ಕಸಕಡ್ಡಿ ಹಾಕುವುದರಿಂದ ಸೊಳ್ಳೆಗಳ ಕಾಟದಿಂದ ನಾವು ರಾತ್ರಿಇಡೀ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇಲ್ಲಿನ ಗ್ರಾಪಂ ಸದಸ್ಯರ ಕುಮ್ಮಕ್ಕು ಸೇರಿದಂತೆ ಹಲವರು ನಮ್ಮನ್ನು ಊರು ಬಿಡಿಸಲು ಮತ್ತು ಆಸ್ತಿ ಕಬಳಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆಯೂ ಸಹ ದಶಕದ ಹಿಂದೆ ಗ್ರಾಮಸ್ಥರ ಕಿರುಕುಳ ಸಹಿಲು ಆಗದೆ ನಗರದಲ್ಲಿ ವಾಸ ಮಾಡಿ ಕಷ್ಟ ಅನುಭಸಿದ್ದವೇವೆ. ಪರಿಶಿಷ್ಟಪಂಗಡ ಎಂಬ ಕಾರಣಕ್ಕಾಗಿ ತೊಂದರೆ ನೀಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದು, ಅವರು ಸಹಾಯ ನೀಡುವುದಾಗಿ ಭರವಸೆ ನೀಡಿದ ನಂತರ ಮತ್ತೆ ನಮ್ಮ ಸ್ವಗ್ರಾಮ ಸಾಗಾನಹಳ್ಳಿಗೆ ಬಂದು ನೆಲೆಸಿದ್ದೇವೆ. ಇದೀಗ ಮತ್ತೆ ಕಿರುಕುಳ ಶುರುವಾಗಿದೆ ಎಂದು ಅಳಲು ತೋಡಿಕೊಂಡರು. ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಸ್ಥಳಕ್ಕೆ ಆಗಮಿಸಿ ಹನುಮಂತನಾಯಕ್‌ರ ಸಮಸ್ಯೆಆಲಿಸಿ ನಿಮ್ಮ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ವಾಪಸ್ ಪಡೆದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.