ಅಕ್ಷರ ಜಾತ್ರೆ ಮರೆತ ಜಿಲ್ಲಾ ಕಸಾಪ!


Team Udayavani, Jan 10, 2020, 2:17 PM IST

cb-tdy-1

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿಯಮಿತವಾಗಿ ವರ್ಷಕ್ಕೊಮ್ಮೆ ನಡೆಯಬೇಕಿದ್ದ ಅಕ್ಷರ ಜಾತ್ರೆಯನ್ನು ಜಿಲ್ಲಾ ಕಸಾಪ ಸತತ ಎರಡು ವರ್ಷಗಳಿಂದ ಮರೆತು ಬಿಟ್ಟಿದೆ. ಕಳೆದ 2018ರ ಜನವರಿಯಲ್ಲಿ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕಾದ ಗುಡಿಬಂಡೆಯಲ್ಲಿ ನಡೆದ ಏಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬಳಿಕ ಸಾಹಿತ್ಯ ಸಮ್ಮೇಳನ ನಡೆಸದೇ ಜಿಲ್ಲಾ ಕಸಾಪ ಘಟಕ ನಿಷ್ಕ್ರಿಯಗೊಂಡು ಕೈಚೆಲ್ಲಿದ್ದು, ಜಿಲ್ಲೆಯ ಸಾಹಿತ್ಯ ಪ್ರೇಮಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಚಾರಕ್ಕೆ ಸೀಮಿತ: ಆಂಧ್ರದ ಗಡಿಯಲ್ಲಿರುವ ಅದರಲ್ಲೂ ತೆಲುಗು ಪ್ರಭಾವ ಹೆಚ್ಚಿರುವಲ್ಲಿ ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡದ ಕಂಪು ಪಸರಿಸ ಬೇಕಿದ್ದ ಜಿಲ್ಲಾ ಕಸಾಪ ಘಟಕ, ಬರೀ ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆ.

ಆಕ್ರೋಶ, ಅಸಮಾಧಾನ: ಈಗಾಗಲೇ ಕೇಂದ್ರ ಕಸಾಪ ಘಟಕ ಕಳೆದ ವರ್ಷ ಧಾರವಾಡದಲ್ಲಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಈಗ ಮತ್ತೆ ಕೊಪ್ಪಳದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ನಡೆಸಿದೆ. ಅದೇ ರೀತಿ ಪಕ್ಕದ ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷ ಸಮ್ಮೇಳನ ನಡೆಸದೇ ಈಗ ಮತ್ತೆ ಅಕ್ಷರ ಜಾತ್ರೆಗೆ ಅಗತ್ಯ ಸಿದ್ಧತೆ ಭರದಿಂದ ಸಾಗಿವೆ. ಆದರೆ ಸಾಹಿತ್ಯ ಸಮ್ಮೇಳನಗಳಿಗೆ ಕೇಂದ್ರ ಕಸಾಪ ದಿಂದ ಲಕ್ಷಾಂತರ ರೂ. ಆರ್ಥಿಕ ನೆರವು ಕೊಟ್ಟರೂ ಜಿಲ್ಲಾ ಕಸಾಪ ಸಕಾಲಕ್ಕೆ ಜಿಲ್ಲೆಯಲ್ಲಿ ನುಡಿ ಜಾತ್ರೆ ಗಳನ್ನು ಸಂಘಟಿಸದಿರುವ ಬಗ್ಗೆ ಆಕ್ರೋಶ, ಅಸಮಾಧಾನ ಜಿಲ್ಲೆ ಸಾಹಿತ್ಯ ಪ್ರೇಮಿಗಳಲ್ಲಿ ಕೇಳಿ ಬರುತ್ತಿದೆ.

ಮೊದಲಿನಿಂದಲೂ ಒಂದಲ್ಲ ಒಂದು ವಿವಾದ ಗಳಿಗೆ ಸುದ್ದಿಯಲ್ಲಿರುವ ಜಿಲ್ಲಾ ಕಸಾಪ ಪದೇ ಪದೆ ತಾಲೂಕು ಅಧ್ಯಕ್ಷರ ಬದಲಾವಣೆ ಮತ್ತಿತರ ಕಾರಣ ಗಳಿಗೆ ಜಿಲ್ಲೆಯ ಹಿರಿಯ ಸಾಹಿತಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಇದೀಗ ಸತತ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಅಕ್ಷರ ಜಾತ್ರೆ ನಡೆಸದಷ್ಟು ತಮ್ಮತನವನ್ನು ಜಿಲ್ಲಾ ಕಸಾಪ ಘಟಕ ಕಳೆದು ಕೊಂಡಿರುವುದು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅನುದಾನವು ಬಳಕೆ ಆಗಲಿಲ್ಲ: ವಿಪರ್ಯಾಸದ ಸಂಗತಿ ಎಂದರೆ ಜಿಲ್ಲಾ ಹಾಗೂ ತಾಲೂಕು ಕಸಾಪ ಘಟಕಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಕೇಂದ್ರ ಕಸಾಪದಿಂದ ಅನುದಾನ ಹರಿದು ಬರುತ್ತದೆ. ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ ರೂ. ಅನುದಾನ ಬಂದರೆ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ 1 ಲಕ್ಷ ರೂ. ಅನುದಾನ ಬರುತ್ತದೆ. ಆದರೆ ಕಸಾಪ ಕೊಡುವ ಅನುದಾನವನ್ನು ಬಳಕೆಮಾಡಿಕೊಂಡು ಇತಿಮಿತಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕಳೆದ 2 ವರ್ಷಗಳಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸದ ಪರಿಣಾಮ ಜಿಲ್ಲೆಗೆ ಬರಬೇಕಿದ್ದ 10 ಲಕ್ಷ ರೂ. ಅನುದಾನ ವಾಪಸ್ಸು ಹೋಗಿದೆ. ಇನ್ನೂ ಗೌರಿಬಿದನೂರು, ಶಿಡ್ಲಘಟ್ಟ ಹೊರತುಪಡಿಸಿದರೆ ಜಿಲ್ಲೆಯಲ್ಲಿ ತಾಲೂಕು ಸಮ್ಮೇಳನಗಳು ನಡೆದಿಲ್ಲ.ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಇದುವರೆಗೂ ಎರಡು ವರ್ಷಗಳಿಂದಲೂ ಸಾಹಿತ್ಯ ಸಮ್ಮೇಳನಗಳನ್ನು ನಡೆಸದಷ್ಟು ಅಧೋಗತಿಗೆ ಕಸಾಪ ಘಟಕಗಳು ನಿಷ್ಕ್ರಿಯಗೊಂಡಿದ್ದು, ಕನ್ನಡ ಪ್ರೇಮಿಗಳಲ್ಲಿ ತೀವ್ರ ಅಸಮಾಧಾನ ತರಿಸಿವೆ.

ಸಮ್ಮೇಳನಾಧ್ಯಕ್ಷರ ಘೋಷಣೆ :  ಕಳೆದ ವರ್ಷ ಜುಲೈ ತಿಂಗಳಲ್ಲಿ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾ ಕಸಾಪ ಯಾವುದೇ ಪೂರ್ವ ತಯಾರಿ ಮಾಡಿ ಕೊಳ್ಳದೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಣಿಮುತ್ತು ಖ್ಯಾತಿ ಬೆಂಗಳೂರಿನ ಉದ್ಯಮಿ ಷಡಕ್ಷರಿ ಅವರನ್ನು ಘೋಷಣೆ ಮಾಡಿತ್ತು. ಆದರೆ ಸಮ್ಮೇಳನ ನಡೆಸುವುದರ ಸಿದ್ಧತೆ ಯಲ್ಲಿ ವರ್ಷ ಕಳೆಯಿತು. ಈಗ 2020ಕ್ಕೆ ಕಾಲಿಟ್ಟಿ ದ್ದರೂ ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ನಡೆಸುವ ಸುದ್ದಿ ಜಿಲ್ಲಾ ಮಟ್ಟದ ಅಕ್ಷರ ಜಾತ್ರೆಯನ್ನು ಕಳೆದ ಎರಡು ಮಾತ್ರ ಜಿಲ್ಲಾ ಕಸಾಪದಿಂದ ಕೇಳಿ ಬರುತ್ತಿಲ್ಲ.

ಶಾಸಕರ ದಿನಾಂಕಕೆ ಕಾಯುತ್ತಿದ್ದೇವೆ  : ಜಿಲ್ಲಾ ಮಟ್ಟದ ಅಕ್ಷರ ಜಾತ್ರೆಯನ್ನು ಕಳೆದ ಎರಡು ಮಾತ್ರ ಜಿಲ್ಲಾ ಕಸಾಪದಿಂದ ಕೇಳಿ ಬರುತ್ತಿಲ್ಲ. ವರ್ಷದಿಂದ ನಡೆಸದ ಕುರಿತು ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ ಅವರನ್ನು ಉದಯ ವಾಣಿ ಸಂಪರ್ಕಿಸಿದಾಗ, ಜಿಲ್ಲೆಯ ಚಿಂತಾಮಣಿ ಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಮ್ಮೇಳನಾ ಧ್ಯಕ್ಷರನ್ನು ಆಯ್ಕೆ ಮಾಡಿ ಆಹ್ವಾನ ಪತ್ರಿಕೆ ಮುದ್ರಿ ಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಸ್ಥಳೀಯ ಶಾಸಕರು ದಿನಾಂಕ ಕೊಟ್ಟ ತಕ್ಷಣ ಸಮ್ಮೇಳನ ಆಯೋಜಿಸಲಾಗುವುದು ಎಂದರು. ಶಾಸಕರು ದಿನಾಂಕ ಕೊಡದೇ ನಾವು ಸಾಹಿತ್ಯ ಸಮ್ಮೇಳನ ಮಾಡಲು ಸಾಧ್ಯವೇ? ಎಂದು ಕೈವಾರ ಶ್ರೀನಿವಾಸ್‌ ಪ್ರಶ್ನಿಸಿದರು. ಚಿಕ್ಕಬಳ್ಳಾಪುರದಲ್ಲಿ ಸಮ್ಮೇಳನ ಮಾಡೋಣ ಎನ್ನುವ ತೀರ್ಮಾನಕ್ಕೆ ಬಂದು ಶಾಸಕರನ್ನು ಸಂಪರ್ಕ ಮಾಡಿದೆವು. ಅವರು ಸಂಕ್ರಾಂತಿ ಆದ ಮೇಲೆ ಮಾಡೋಣ ಎಂದರು. ಸದ್ಯದಲೇ ಒಂದು ತೀರ್ಮಾನಕ್ಕೆ ಬಂದು ಸಮ್ಮೇಳನ ಎಲ್ಲಿ ನಡೆಸಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದರು.

ಜಿಲ್ಲಾ ಕಸಾಪ ಘಟಕಕ್ಕೆ ಬದ್ಧತೆ ಇಲ್ಲ. ಸಾಹಿತಿಗಳೊಂದಿಗೆ ಅವರು ಮೊದಲು ಸಂಪರ್ಕವೇ ಇಟ್ಟುಕೊಂಡಿಲ್ಲ. ಚಿಂತಾಮಣಿಯಲ್ಲಿ ಸಮ್ಮೇಳನ ನಡೆಸುತ್ತೇವೆ ಎಂದು ಸಮ್ಮೇಳನಾಧ್ಯಕ್ಷರನ್ನು ಘೋಷಣೆ ಮಾಡಿದರು. ಆದರೆ ಯಾವಾಗ ಸಮ್ಮೇಳನ ನಡೆಯು ತ್ತದೆ ಅಂತ ಯಾರಿಗೂ ಗೊತ್ತಾಗುತ್ತಿಲ್ಲ. ಕಸಾಪ ಪದಾಧಿಕಾರಿಗಳ ಮಾನಸಿಕ ಸ್ಥಿತಿ, ಯೋಜನೆ, ಯೋಚನೆ ಯಾರಿಗೂ ಗೊತ್ತಾಗುತ್ತಿಲ್ಲ. – ಗೋಪಾಲಗೌಡ ಕಲ್ವಮಂಜಲಿ ಹಿರಿಯ ಸಾಹಿತಿ, ಚಿಕ್ಕಬಳ್ಳಾಪುರ

 

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.