ಹೂವು ಮಾರುಕಟ್ಟೆ ಸ್ಥಾಪನೆಗೆ ಜಮೀನು ಮಂಜೂರು
Team Udayavani, Sep 21, 2022, 5:31 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕೊರೊನಾ ಸೋಂಕಿನ ಸಂಕಷ್ಟದ ದಿನಗಳಿಂದ ಹೊರವಲಯದಲ್ಲಿ ತಾತ್ಕಾಲಿವಾಗಿ ನಡೆಯುತ್ತಿದ್ದ ಹೂವು ಮಾರುಕಟ್ಟೆಗೆ ಕೊನೆಗೂ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಅಗಲಗುರ್ಕಿ ಗ್ರಾಮದ ಸರ್ವೆ ನಂ. 122 ರಲ್ಲಿ 9.05 ಎಕರೆ ಜಮೀನು ನೀಡಲು ಆದೇಶ ಹೊರಬಿದ್ದಿದೆ. ಜಿಲ್ಲೆಯಲ್ಲಿ ಹೂವು ಮಾರುಕಟ್ಟೆಯ ವಿಚಾರದಲ್ಲಿ ವರ್ತಕರು ಮತ್ತು ಹೂವು ಬೆಳೆಗಾರರು ಪ್ರತಿನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದರು. ಎಪಿಎಂಸಿಯ ಮಾರುಕಟ್ಟೆಯ ಆವರಣದಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದರು. ಇದೇ ವಿಚಾರದಲ್ಲಿ ಹೂವು ಬೆಳೆಗಾರರು ಬೃಹತ್ ಪ್ರತಿಭಟನೆ ನಡೆಸಿ ತಾತ್ಕಾಲಿಕ ಹೂವಿನ ಮಾರುಕಟ್ಟೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಗಮನ ಸೆಳೆದಿದ್ದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಯ ಹೂವು ಬೆಳೆಗಾರರಿಗೆ ಮತ್ತು ವರ್ತಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನು ಮಂಜೂರು ಮಾಡಲು ಭರವಸೆಯನ್ನು ನೀಡಿದ್ದರು.
ಅದರಂತೆ ಜಿಲ್ಲಾಡಳಿತ ಹೂವಿನ ಬೆಳೆಗಾರರು ಮತ್ತು ವರ್ತಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮತ್ತು ಮಾರುಕಟ್ಟೆ ನಿರ್ಮಿಸಲು ಜಮೀನು ನೀಡಿದೆ. ಪ್ರಸ್ತುತ ಕಡತವನ್ನು ಎಪಿಎಂಸಿ ಅಧಿಕಾರಿಗಳು ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ. ಕೇಂದ್ರ ಕಚೇರಿಯಿಂದ ಅನುಮೋದನೆ ಸಿಕ್ಕ ತಕ್ಷಣ ಜಿಲ್ಲೆ ಹೂವು ಮಾರಾಟಗಾರರ ಬಹುವರ್ಷಗಳ ಕನಸು ನನಸಾಗಲಿದೆ. ಸಾಮಾನ್ಯವಾಗಿ ಹೂವು ಬೆಳೆಗಾರರು ಎಪಿಎಂಸಿಯ ಆವರಣದಲ್ಲಿ ಹೂವು ಮಾರಾಟ ಮಾಡುತ್ತಿದ್ದರು ಕೊರೊನಾ ವೇಳೆ ಎಪಿಎಂಸಿಯಿಂದ ಚಿಕ್ಕಬಳ್ಳಾಪುರ ನಗರದ ಹೊರವಲಯದ ಕೆವಿ ಕ್ಯಾಂಪಸ್ ಬಳಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಮಳೆಗಾಲದಲ್ಲಿ ಹೂವು ಮಾರುಕಟ್ಟೆ ಕೆಸರಿನ ಗುಂಡಿಗಳಾಗಿ ವ್ಯಾಪಾರಿಗಳು ಮತ್ತು ಬೆಳೆಗಾರರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ ಎಂದು ಆರೋಪಿಸಿ ರೈತರು ಎಪಿಎಂಸಿ ಮಾರುಕಟ್ಟೆಯಲ್ಲೇ ಹೂವು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು ಎಂದು ಹೋರಾಟ ನಡೆಸಿದರು.
ಜಿಲ್ಲೆಯಲ್ಲಿ ಹೂವು ಬೆಳೆಗಾರರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಹೂವು ಬೆಳೆಗಾರರು ಮತ್ತು ವರ್ತಕರ ಸಭೆ ನಡೆಸಿ ಪುಷ್ಪೋದ್ಯಮಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ದವಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ವಾಹನ ಸಂಚಾರ ದಟ್ಟಣೆ ಆಗುವ ಕಾರಣ ವಹಿವಾಟಿಗೆ ತೊಂದರೆಯಿದೆ. ಹೂವು ಬೆಳೆಗಾರರು ಮತ್ತು ಮಾರಾಟಗಾರರಿಗೆ ಅನುಕೂಲವಾಗುವಂತಹ ಸ್ಥಳವನ್ನು ಗುರುತಿಸಿ ಮಂಜೂರು ಮಾಡುವ ಭರವಸೆ ನೀಡಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ, ಪುಟ್ಟತಿಮ್ಮನಹಳ್ಳಿ, ತಿಪ್ಪೇನಹಳ್ಳಿ, ಮತ್ತಿತರ ಕಡೆಗಳಿಂದ ಹೂವು ಮಾರುಕಟ್ಟೆಯನ್ನು ನಿರ್ಮಿಸಲು ಸ್ಥಳವನ್ನು ಗುರುತಿಸುವ ಕೆಲಸವನ್ನು ಮಾಡಲಾಯಿತು ಹೂವು ಮಾರುಕಟ್ಟೆಗೆ ತಿಪ್ಪೇನಹಳ್ಳಿಯ ಬಳಿ ಇರುವ ಸರ್ಕಾರಿ ಜಮೀನು ಅಥವಾ ಮರಸನಹಳ್ಳಿಯ ಗುಂಡುತೋಪಿನಲ್ಲಿ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಕೇಳಿಬಂದಿತ್ತು.
ಕೊನೆಗೆ ಅಗಲಗುರ್ಕಿಯ ಬಳಿ 9.20 ಎಕರೆ ಜಮೀನು ಜಿಲ್ಲಾಡಳಿತ ಮಂಜೂರು ಮಾಡಿತು ರಾಷ್ಟ್ರೀಯ ಹೆದ್ದಾರಿ 44 ಹೊಂದುಕೊಂಡಿರುವ ರೈತರು ಮತ್ತು ವರ್ತಕರ ಬೇಡಿಕೆಗೆ ಅನುಗುಣವಾಗಿ ಜಿಲ್ಲಾಡಳಿತ ಹೂವು ಮಾರುಕಟ್ಟೆಗೆ ಜಮೀನು ಮಂಜೂರು ಮಾಡಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗ ಇದ್ದಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ ನೆರೆಯ ಬೆಂ. ಗ್ರಾಮಾಂತರ ಜಿಲ್ಲೆ, ತುಮಕೂರು, ಬೆಂಗಳೂರು ನಗರ ಸಹಿತ ವಿವಿಧ ಭಾಗಗಳಿಂದ ಬರುವ ವ್ಯಾಪಾರಿಗಳಿಗೆ ಹೂವು ಖರೀದಿ ಮಾಡಲು ಅನುಕೂಲವಾಗಿದೆ.
ಜಿಲ್ಲೆಯಲ್ಲಿ ಹೂವು ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಮಾರುಕಟ್ಟೆಗೆ ಸೂಕ್ತ ರೀತಿಯ ಸಾರಿಗೆ, ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲು ಎರಡು ಭಾಗಗಳಿಂದ ರಸ್ತೆ ಸಂಪರ್ಕ ಕಲ್ಪಿಸುವ ಸ್ಥಳವನ್ನು ಗುರುತಿಸಿ ಹೂವು ಮಾರುಕಟ್ಟೆಗೆ ಜಾಗ ಮಂಜೂರು ಮಾಡಲಾಗಿದೆ. – ಎನ್.ಎಂ.ನಾಗರಾಜ್, ಜಿಲ್ಲಾಧಿಕಾರಿ
ರಾಜ್ಯದಲ್ಲಿ ಮಾದರಿಯಾದ ಹೂವು ಮಾರುಕಟ್ಟೆ ನಿರ್ಮಾಣ ಮಾಡಲು ಜಿಲ್ಲಾಡಳಿತ 9.20 ಎಕರೆ ಜಮೀನು ಮಂಜೂರು ಮಾಡಿದೆ. ನಾವು ಜಿಲ್ಲಾಡಳಿತ ಮಂಜೂರು ಮಾಡಿರುವ ಕಡತವನ್ನು ಕೇಂದ್ರ ಕಚೇರಿಗೆ ರವಾನಿಸುತ್ತೇವೆ. ಅವರ ಅನುಮತಿ ಪಡೆದು ಹೂವು ಬೆಳೆಗಾರರಿಗೆ- ವರ್ತಕರಿಗೆ ಅನುಕೂಲ ಕಲ್ಪಿಸಲು ಕ್ರಮವಹಿಸುತ್ತೇವೆ. – ವೆಂಕಟೇಶ್, ಎಪಿಎಂಸಿ ಪ್ರಭಾರ ಕಾರ್ಯದರ್ಶಿ
– ಎಂ.ಎ.ತಮೀಮ್‌ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನಿಮ್ಮ ಸಹವಾಸನೇ ಬೇಡ.. ಎಲ್ಲದಕ್ಕೂ ಫುಲ್ ಸ್ಟಾಪ್ ಎಂದ ಮೋಕ್ಷಿತಾ; ಒಂಟಿಯಾದ ಮಂಜು
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Jammu-Kashmir: ಕುಪ್ವಾರದಲ್ಲಿ ಸೇನಾ ಕಾರ್ಯಾಚರಣೆ… ಉಗ್ರನ ಹ*ತ್ಯೆ, ಶಸ್ತ್ರಾಸ್ತ್ರ ವಶ
Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ
Lalbag: ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂಡಗಳ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.