ಸುಧಾಕರ್‌ ಅಕ್ರಮಗಳ ಚರ್ಚೆಗೆ ಬಹಿರಂಗ ಸವಾಲು


Team Udayavani, Sep 26, 2019, 3:00 AM IST

sudhakar

ಅತ್ತ ಅನರ್ಹ ಶಾಸಕ ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಘೋಷಣೆಯಾಗಿರುವ ಉಪಚುನಾವಣೆಯನ್ನು ಮುಂದೂಡುವಂತೆ ತಮ್ಮ ಅರ್ಜಿದಾರ ಪರ ವಕೀಲ ಸುಂದರಂ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ಬಿರುಸಿನ ವಾದ ಮಂಡಿಸಿದರೆ, ಇತ್ತ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಸುಧಾಕರ್‌ ಕೋಟೆಯಲ್ಲಿ ನಿಂತು ಪ್ರಚಾರ ನಡೆಸಿ ಟಾಂಗ್‌ ನೀಡಿದರು. ಅಲ್ಲದೇ ಸುಧಾಕರ್‌ ಅಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ಸುಧಾಕರ್‌ಗೆ ಸವಾಲು ಹಾಕಿದರು.

ಈ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಇರುವಾಗಲೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೆ.30ರಂದು ಅಖಾಡಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲೆಯ ಚುನಾವಣೆ ಉಸ್ತುವಾರಿ ವಹಿಸಿರುವ ಮಾಜಿ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಪ್ರಕಟಿಸಿದ್ದು ಉಪ ಕದನ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಾರಕಕ್ಕೇರುವಂತೆ ಮಾಡಿದೆ.

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ.ಕೆ. ಸುಧಾಕರ್‌ ಸ್ವ-ಗ್ರಾಮವಾದ ಪೆರೇಸಂದ್ರದಲ್ಲಿ ಬುಧವಾರ ಉಪ ಚುನಾವಣೆಯ ಪ್ರಚಾರ ನಡೆಸಿದ ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಸುಧಾಕರ್‌ ಮಾಡಿರುವ ಅಕ್ರಮಗಳ ಬಗ್ಗೆ ನಾವು ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಸುಧಾಕರ್‌ ನಮ್ಮ ಅಕ್ರಮಗಳ ಬಗ್ಗೆ ದಾಖಲೆ ಇದ್ದರೆ ತರಲಿ. ಒಂದು ವೇದಿಕೆಯಲ್ಲಿ ಚರ್ಚೆ ನಡೆಸೋಣ ಎಂದು ಸುಧಾಕರ್‌ಗೆ ಬಹಿರಂಗವಾಗಿ ಸವಾಲು ಎಸೆದಿದ್ದಾರೆ.

ಕ್ಷೇತ್ರದ ಮಂಡಿಕಲ್‌ ಹೋಬಳಿಯವರು ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದ ಚುನಾವಣೆ ಉಸ್ತುವಾರಿಗಳಾದ ಮಾಜಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ, ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ಮತ್ತಿತರ ಹಿರಿಯ ಕಾಂಗ್ರೆಸ್‌ ನಾಯಕರು ಅನರ್ಹ ಶಾಸಕ ಸುಧಾಕರ್‌ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ವಾಗ್ಧಾಳಿ ನಡೆಸಿದರು. ಸುಧಾಕರ್‌ 2 ಬಾರಿ ಶಾಸಕರಾಗಿ ಏನೆಲ್ಲಾ ಅಕ್ರಮಗಳನ್ನು ಮಾಡಿದ್ದಾರೆ. ಕೋಟ್ಯಂತರ ರೂ., ಅಕ್ರಮ ಆಸ್ತಿ ಮಾಡಿರುವುದನ್ನು ನಾವು ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಪೆರೇಸಂದ್ರದಲ್ಲಿ ವೇದಿಕೆ ಸಿದ್ಧಪಡಿಸುತ್ತೇವೆ. ತಾಕತ್ತಿದ್ದರೆ ಸುಧಾಕರ್‌ ನಮ್ಮ ಮೇಲೆ ಇರುವ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬರಲಿಯೆಂದರು.

ಶ್ರೀಲಂಕಾದಲ್ಲಿ ಮಾಡಿರುವ ಅಕ್ರಮ ಆಸ್ತಿ, ಬೆಂಗಳೂರು, ಚಿಕ್ಕಬಳ್ಳಾಪುರದಲ್ಲಿ ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ., ಆಸ್ತಿ ಮಾಡಿದ್ದಾರೆ. ತಾಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಕುಮ್ಮಕ್ಕು ನೀಡಿ ಕ್ರಷರ್‌ ಮಾಲಿಕರಿಂದ ತಿಂಗಳಿಗೊಮ್ಮೆ ಒಂದು ಕ್ರಷರ್‌ಗೆ ಒಂದು ಲಕ್ಷ ರೂ. ವಸೂಲಿ ಮಾಡಿ, ಇಂದು ನೂರಾರು ಕೋಟಿ ಒಡೆಯನಾಗಿದ್ದಾನೆ. ಈ ದುಡ್ಡೇನು ವ್ಯವಸಾಯ ಮಾಡಿ, ಸಂಪಾದನೆ ಮಾಡಿಲ್ಲ. ಬದಲಾಗಿ ರೋಲ್‌ ಕಾಲ್, ಮತ್ತು ಚಿಕ್ಕಬಳ್ಳಾಪುರದಲ್ಲಿ ಭ್ರಷ್ಟಾಚಾರ ಮಾಡಿ ಸಂಪಾದಿಸಿದ ಹಣ ಎಂದು ಸುಧಾಕರ್‌ ವಿರುದ್ಧ ಶಿವಶಂಕರರೆಡ್ಡಿ ಕಿಡಿ ಕಾರಿದರು.

ಸುಧಾಕರ್‌ ಅತ್ಯಂತ ಭ್ರಷ್ಟ ರಾಜಕಾರಣಿ: ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ, ಸುಧಾಕರ್‌ ಒಬ್ಬ ಅತಿ ಭ್ರಷ್ಟ ರಾಜಕಾರಣಿ. ಈತನಿಂದ ಇಡೀ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಗೌರವ ತಂದ ಅಪಕೀರ್ತಿ ಸುಧಾಕರ್‌ಗೆ ಸಲ್ಲುತ್ತದೆ. ಸಿದ್ದರಾಮಯ್ಯನವರ ಆಶೀರ್ವಾದದಿಂದ ಬೆಳೆದು, ಬೆಳೆಸಿದ ಗುರುವಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾದರೂ ಯಾವತ್ತೂ ಮಂತ್ರಿ ಸ್ಥಾನಕ್ಕೆ ಬ್ಲಾಕ್‌ ಮೇಲ್‌ ತಂತ್ರಗಾರಿಕೆ ಮಾಡಲಿಲ್ಲ. ಪಕ್ಷದ ವಿರುದ್ಧ ಮಾತನಾಡಲಿಲ್ಲ. ಆದರೆ ಈತ ಮೊದಲ ಬಾರಿಗೆ ಮಂತ್ರಿಯಾಗಲು ಬ್ಲಾಕ್‌ವೆುಲ್‌ ಮಾಡಿದ್ದಾರೆ.

ಹೀಗಾಗಿ ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಹಾಜನತೆ ಈತನನ್ನು ಮನೆಗೆ ಕಳಿಸಬೇಕು. ಮುಂದೆ ಈತನ ಅಕ್ರಮಗಳನ್ನು ಹೊರತಂದು ನಾವು ಸುಧಾಕರ್‌ನನ್ನು ಶ್ರೀಕೃಷ್ಣನ ಜನ್ಮ ಸ್ಥಳಕ್ಕೆ ಕಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಸಾಮಾನ್ಯ ನಿವೃತ್ತ ಶಿಕ್ಷಕನ ಮಗನಾಗಿ ಸದಾಶಿವನಗರದಲ್ಲಿ ಬೃಹತ್‌ ಮನೆ, ಪೆರೇಸಂದ್ರದಲ್ಲಿ ಶಾಲಾ ಕಾಲೇಜುಗಳು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಎಲ್ಲಿಂದ ಬಂತು? ಎಂದು ಕ್ಷೇತ್ರದ ಮತದಾರರು ಕೇಳಲೇಬೇಕು ಎಂದರು.

ಸುಧಾಕರ್‌ ತವರಲ್ಲಿ ಪ್ರಚಾರ: 2 ದಿನಗಳಿಂದ ಮಂಚನಬಲೆ, ತಿಪ್ಪೇನಹಳ್ಳಿ ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದ ಕಾಂಗ್ರೆಸ್‌ ನಾಯಕರು 3ನೇ ದಿನ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ಕೋಟೆಯಾದ ಮಂಡಿಕಲ್‌ ಹೋಬಳಿಯಲ್ಲಿ ಪ್ರಚಾರ ನಡೆಸಿ ಗಮನ ಸೆಳೆದರು. ಮಂಡಿಕಲ್, ಅಡ್ಡಗಲ್, ಪೆರೇಸಂದ್ರ, ಅರೂರು, ಕಮ್ಮಗಟ್ಟಹಳ್ಳಿ ಮತ್ತು ದೊಡ್ಡ ಪೈಲಗುರ್ಕಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಸುಧಾಕರ್‌ ವಿರುದ್ದ ನಾಯಕರು ವಾಗ್ಧಾಳಿ ಮುಂದುವರಿಸಿದರು.

ಮಾಜಿ ಶಾಸಕ ಸಂಪಂಗಿ, ಎಸ್‌.ಎಂ. ಮುನಿಯಪ್ಪ, ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌. ಕೇಶವ ರೆಡ್ಡಿ, ಹಿರಿಯ ಮುಖಂಡರಾದ ಜಿ.ಎಚ್‌.ನಾಗರಾಜ್, ನಂದಿ ಆಂಜಿನಪ್ಪ, ಕೆ.ವಿ. ನವೀನ್‌ ಕಿರಣ್, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌ , ಪಿ.ಎನ್‌, ಮುನೇಗೌಡ, ವಕೀಲ ಬಾಲರಾಜ್, ಅಜಿತ್‌ ಪ್ರಸಾದ್‌, ಶೆಟ್ಟಿಗೆರೆ ಮುರಳಿ, ಜಿ.ಆರ್‌. ಶ್ರೀನಿವಾಸ್‌, ಮಂಚನಬಲೆ ಇಸ್ಮಾಯಿಲ್‌, ಶ್ರೀಧರ್‌, ಗಂಗರಾಜ್, ಕಿಟ್ಟಿ, ಆವಲಪ್ಪ, ದಯಾನಂದ್‌, ನಾರಾಯಣಸ್ವಾಮಿ, ನವೀನ್‌ ಹಾಜರಿದ್ದರು.

ಸುಧಾಕರ್‌ ಕ್ಷೇತ್ರಕ್ಕೆ ಕಾಲಿಟ್ಟರೆ ಹಿಂದೆ ಮುಂದೆ ಪೊಲೀಸರ ರಕ್ಷಣೆಯಲ್ಲಿ ಬರುವ ಶಾಸಕರು ಈ ಕ್ಷೇತ್ರದ ಚುನಾಯಿತ ಜನಪ್ರತಿನಿದಿ ಆಗಬೇಕೆ? ಇಂತಹವರಿಗೆ ಕ್ಷೇತ್ರದ ಜನತೆ ಛೀಮಾರಿ ಹಾಕಬೇಕು. ಕ್ಷೇತ್ರದ ಮತದಾರರು ಆಸೆ, ಅಮಿಷಗಳಿಗೆ ಒಳಗಾಗದೇ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು.
-ವಿ.ಮುನಿಯಪ್ಪ, ಮಾಜಿ ಸಚಿವ

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

10-gudibande

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.