ಹಣಕ್ಕಾಗಿ ಪೀಡಿಸುತ್ತಿದ್ದ 2ನೇ ಪತ್ನಿ ಕೊಲೆಗೈದ ಪತಿ, ಪುತ್ರ ಸೆರೆ
Team Udayavani, Feb 4, 2021, 3:41 PM IST
ಶಿಡ್ಲಘಟ್ಟ: ಮನೆ ನಿರ್ಮಿಸಿಕೊಳ್ಳಲು ಹಣಕ್ಕಾಗಿ ಪೀಡಿಸುತ್ತಿದ್ದ ಎರಡನೇ ಪತ್ನಿಯನ್ನು ಪತಿ ಸೇರಿದಂತೆ ಆತನ ಮೊದಲ ಪತ್ನಿಯ ಪುತ್ರ ಕೊಲೆ ಮಾಡಿರುವ ಸಂಬಂಧ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಗೊಲ್ಲಹಳ್ಳಿಯ ಜ್ಯೋತಿ ಕೊಲೆಯಾಗಿದ್ದ ಮಹಿಳೆ. ಪೂಸಗಾನದೊಡ್ಡಿಯ ನರಸಿಂಹಪ್ಪ ಹಾಗೂ ಆತನ ಮೊದಲನೇ ಪತ್ನಿಯ ಮಗ ನವೀನ್ ಕುಮಾರ್ ಬಂಧಿತರು.
ಏನಿದು ಘಟನೆ?: ಪೂಸಗಾನದೊಡ್ಡಿಯ ನರಸಿಂಹಪ್ಪ ಎಂಬಾತ ಮೊದಲೇ ಪತ್ನಿ ಇದ್ದರೂ ಎಸ್.ಗೊಲ್ಲಹಳ್ಳಿಯ ಜ್ಯೋತಿಯೊಂದಿಗೆ ವಿವಾಹವಾಗಿದ್ದ ಎನ್ನಲಾಗಿದೆ.
ಮೊದಲ ಪತ್ನಿಗೆ ನಾಲ್ವರು ಮಕ್ಕಳಿದ್ದಾರೆ. ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆದರೆ, ನರಸಿಂಹಪ್ಪನೊಂದಿಗೆ ವಿವಾಹವಾಗಿದ್ದ ಜ್ಯೋತಿ 14 ವರ್ಷದ ಹೆಣ್ಣುಮಗಳೊಂದಿಗೆ ಪ್ರತ್ಯೇಕವಾಗಿರಲು ಮನೆ ನಿರ್ಮಿಸಿಕೊಳ್ಳಲು ಹಣ ನೀಡುವಂತೆ ನರಸಿಂಹಪ್ಪನಿಗೆ ಒತ್ತಾಯಿಸುತ್ತಿದ್ದರೆನ್ನಲಾಗಿದೆ.
ಆದರೆ, ನರಸಿಂಹಪ್ಪ ಯಾವುದೇ ಸೌಲಭ್ಯ ಒದಗಿಸಿರಲಿಲ್ಲ ಎಂದು ಹೇಳಲಾಗಿದೆ. ಆದರೇ 2007ರ ಜು.1ರಂದು ಜ್ಯೋತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಜ್ಯೋತಿ ಪುತ್ರಿಯನ್ನು ಕರೆದುಕೊಳ್ಳುವಂತೆ
ಅಳಿಯ ನರಸಿಂಹಪ್ಪ ಎಂಬಾತನನ್ನು ಅತ್ತೆ ಮುನಿನಾರಾಯಣಮ್ಮ ಕೇಳಿಕೊಂಡಾಗ, ತಾನು ಏಕೆ ಇಟ್ಟುಕೊಳ್ಳಿ. ನಿನ್ನ ಮಗಳು ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು ಅದಕ್ಕೆ ಕೊಂದಿದ್ದೇನೆ. ಇನ್ನು ಮುಂದೆ ತನ್ನ ತಂಟೆಗೆ ಬಂದರೇ ನಿನಗೂ ನಿನ್ನ ಮಗಳ ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ಮುನಿನಾರಾಯಣಮ್ಮ ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್, ಪಿಎಸ್‌ಐ ನಾರಾಯಣಪ್ಪ ಮತ್ತು ಸಿಬ್ಬಂದಿ ಒಳಗೊಂಡಂತೆ ರಚಿಸಿದ ತಂಡ ತನಿಖೆ ನಡೆಸಿ ಜ್ಯೋತಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಗಂಡ ನರಸಿಂಹಪ್ಪ, ಆತನ ಪುತ್ರ ನವೀನ್ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.