ರೈಸ್ ಮಿಲ್ ಮೇಲೆ ದಾಳಿ: 4 ಲಕ್ಷ ರೂ.ನ ಅಕ್ಕಿ, ನುಚ್ಚು, ರಾಗಿ ಜಪ್ತಿ
Team Udayavani, Jun 6, 2021, 7:46 PM IST
ಚಿಕ್ಕಬಳ್ಳಾಪುರ: ನಗರದ ಕಂದವಾರಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಖಾಸಗಿ ರೈಸ್‌ಮಿಲ್‌ವೊಂದರ ಮೇಲೆ ದಾಳಿ ನಡೆಸಿರುವ ಆಹಾರಇಲಾಖೆಯ ಅ ಧಿಕಾರಿಗಳು 4 ಲಕ್ಷ ರೂ. ಮೌಲ್ಯದಅಕ್ಕಿ, ನುಚ್ಚು, ರಾಗಿ ಹಾಗೂ ವಿವಿಧ ಬ್ರಾಂಡ್‌ಗಳಚೀಲ ವಶಪಡಿಸಿಕೊಂಡಿದ್ದಾರೆ.
ವೇಣುಗೋಪಾಲ್ ಮಾಲಿಕತ್ವದ ಶ್ರೀಸಪ್ತಗಿರಿಗ್ರಾಮೋದಯ ಅಕ್ಕಿ ಗಿರಣಿಯ ಮೇಲೆ ಆಹಾರನಾಗರಿಕ ಸರಬರಾಜು ಮತ್ತು ಗ್ರಾಹಕರವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿಪಿ.ಸವಿತಾ ಅವರ ಮಾರ್ಗದರ್ಶನದಲ್ಲಿಚಿಕ್ಕಬಳ್ಳಾಪುರ ತಾಲೂಕು ಆಹಾರ ಇಲಾಖೆಶಿರಸ್ತೇದಾರ್ ಬಿ.ಜಿ.ಗೌತಮ್, ನಿರೀಕ್ಷಕ ರಘುನೇತೃತ್ವದ ತಂಡ ದಾಳಿ ನಡೆಸಿತು.ಈ ವೇಳೆ 7,440 ಕೇಜಿ ಅಕ್ಕಿ, 28,150 ಕೇಜಿನುಚ್ಚು, 322 ಕೇಜಿ ರಾಗಿ ಹಾಗೂ ಪಾಲಿಶ್ ಮಾಡಿದಅಕ್ಕಿಯನ್ನು ತುಂಬಿಸಲು ತಂದಿದ್ದ ವಿವಿಧ ಬ್ರಾಂಡ್‌ಗಳ ಚೀಲಗಳನ್ನು ಆಹಾರ ಇಲಾಖೆಯಅ ಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿವಿಧ ಬ್ರಾಂಡ್ ಹೆಸರಲ್ಲಿ ಮಾರಾಟ: ಭತ್ತದಿಂದಅಕ್ಕಿ ಉತ್ಪಾದಿಸಿ ಮಾರಾಟ ಮಾಡುವ ಗಿರಣಿಯಲ್ಲಿಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಸರ್ಕಾರದಿಂದ ಬಡವರಿಗೆ ಬಿಡುಗಡೆ ಮಾಡಿರುವಅಕ್ಕಿಯನ್ನು ವಿವಿಧ ಮೂಲಗಳಿಂದ ಅಕ್ರಮವಾಗಿಖರೀದಿ ಮಾಡಿ, ಗಿರಣಿಯಲ್ಲಿ ಪಾಲಿಶ್ ಮಾಡಿವಿವಿಧ ಬ್ರಾಂಡ್‌ನಲ್ಲಿ ಅಕ್ಕಿ ಚೀಲ ತಯಾರಿಸಿಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು. ಈಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇಲೆಆಹಾರ ಇಲಾಖೆ ಅ ಧಿಕಾರಿಗಳು ದಾಳಿನಡೆಸಿದರು
.ಪೊಲೀಸರಿಗೆ ದೂರು: ಈ ಸಂಬಂಧ ಆಹಾರಇಲಾಖೆ ಶಿರಸ್ತೇದಾರ್ ಅವರು ಸಪ್ತಗಿರಿಗ್ರಾಮೋದಯ ಅಕ್ಕಿ ಗಿರಣಿ ಮಾಲಿಕರಗೋಪಾಲ್ ಅವರ ವಿರುದ್ಧ ಅಗತ್ಯ ವಸ್ತುಗಳಕಾಯ್ದೆ 1955 ಸೆಕ್ಷನ್ 3 ಮತ್ತು 6(ಎ) ಐಪಿಸಿಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಮತ್ತು ಕಾಳಸಂತೆಕೋರರ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ನಂದಿಗಿರಿಧಾಮಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪಿಎಸ್‌ಐ ಸುನೀಲ್ ದೂರುದಾಖಲಿಸಿ, ಆರೋಪಿ ಬಂಧಿ ಸಿದ್ದಾರೆ. ಜಿಲ್ಲೆಯಲ್ಲಿಬಡವರಿಗೆ ಸಮರ್ಪಕ ಪಡಿತರ ಹಂಚಿಕೆಮಾಡಲು ಆಹಾರ ನಾಗರಿಕ ಸರಬರಾಜು,ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿಪಿ.ಸವಿತಾ ಅವರು ಕ್ರಮ ಕೈಗೊಂಡಿದ್ದಾರೆ.ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸರ್ಕಾರಬಡವರಿಗೆ ನೀಡುವ ಅಕ್ಕಿಯನ್ನು ಪಾಲಿಶ್ ಮಾಡಿಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಮಾಡಲಾಗುತ್ತಿದೆ ಎಂಬ ದೂರು ಈಘಟನೆಯಿಂದ ಕೊನೆಗೂ ನಿಜವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.