ಕ್ಷೌರಿಕ ವೃತ್ತಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸವಿತಾ ಸಮಾಜ
ಇಂದು ವಿಶ್ವ ಕ್ಷೌರಿಕರ ದಿನಾಚರಣೆ
Team Udayavani, Sep 16, 2020, 4:36 PM IST
ಚಿಕ್ಕಬಳ್ಳಾಪುರ: ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಸವಿತಾ ಸಮಾಜದ ಬಂಧುಗಳು ವೃತ್ತಿ ಪಾವಿತ್ರ್ಯತೆ ಕಾಪಾಡಿ ಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳಿಂದ ಬರುವ ಸೌಲಭ್ಯಪಡೆದುಕೊಳ್ಳುವ ಜೊತೆಗೆ ಆರೋಗ್ಯವಂತ ಸಮಾಜ ವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆ ನೀಡಿ ಕೇವಲ ಕ್ಷೌರಿಕ ವೃತ್ತಿಮಾತ್ರವಲ್ಲದೆ ಕಲೆಯಲ್ಲಿ ಸಹ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ.
ದಿನಾಚರಣೆ ಗೊತ್ತಿಲ್ಲ: 1096ರಲ್ಲಿ ಫ್ರಾನ್ಸ್‌ನಲ್ಲಿ ಕ್ಷೌರಿಕವೃತ್ತಿಯಲ್ಲಿ ತೊಡಗಿದ್ದ ಸವಿತಾ ಸಮಾಜದವರು ಕ್ಷೌರಿಕರು ಕೇವಲ ಕ್ಷೌರಿಕರು ಮಾತ್ರವಲ್ಲ, ಸಣ್ಣ ಸಣ್ಣ ಶಸ್ತ್ರ ಚಿಕಿತ್ಸೆ, ಗಾಯಗಳನ್ನು ವಾಸಿಪಡಿಸಲು ಔಷಧಿ ನೀಡಿ ಹಲ್ಲುಗಳು ಕೀಳು ವಂತಹ ಕೆಲಸದಲ್ಲಿ ಸಹ ತೊಡಗಿಸಿ ಕೊಂಡಿದ್ದಾರೆ ಎಂದು ಸಂಘ ಸ್ಥಾಪಿಸಿದರು.ಅಂದಿನಿಂದ ಇದು ವರೆಗೆ ಸೆ.16ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲಾಗುತ್ತದೆ.
ಆದರೆ ಬಹುತೇಕ ಸವಿತಾ ಸಮಾಜದ ಬಂಧುಗಳಿಗೆ ತಮ್ಮ ದಿನಾ ಚರಣೆ ಕೂಡ ನೆನಪಿಲ್ಲ.ಮಂಗಳವಾರಹೊರತುಪಡಿಸಿ ಪ್ರತಿನಿತ್ಯ ಬೆಳಗಿನ ಜಾವ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
ಬ್ಯೂಟಿಷಿಯನ್ ಮಾರ್ಗ: ಕೇವಲ ಸವಿತಾ ಸಮಾಜ ಮಾತ್ರವಲ್ಲದೆ ಇತರೆ ಸಮಾಜ ಮತ್ತು ಸಮುದಾಯಗಳ ಜನ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮತ್ತೂಂದೆಡೆ ಮಹಿಳೆಯರು ಸಹ ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರುಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರುಆರ್ಥಿವಾಗಿ ಅಭಿವೃದ್ಧಿ ಹೊಂದಲುಬ್ಯೂಟಿಷಿಯನ್ ಮಾರ್ಗ ಕಂಡುಕೊಂಡಿದ್ದಾರೆ.
ವೃತ್ತಿಯನ್ನು ಅವಹೇಳನೆ ಮಾಡು ವಂತಹ ಪದ ಬಳಸುವುದರಿಂದ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸವಿತಾ ಸಮಾಜದವರಿಗೆ ಮುಜುಗರ, ಅವಮಾನ ಮಾಡಿದಂತಾಗುತ್ತದೆ. ಅದಕ್ಕಾಗಿ ಸರ್ಕಾರ ಅಟ್ರಾಸಿಟಿ ಮಾದರಿಯಲ್ಲಿ ನಿಬಂಧಿತ ಪದವನ್ನು ಬಳಕೆ ಮಾಡುವವರನ್ನು ಕೇಸು ಹಾಕಿ ಕಾನೂನುಕ್ರಮ ಜರುಗಿಸಬೇಕೆಂಬ ಧ್ವನಿ ಎಲ್ಲೆಡೆಯಿಂದಕೇಳಿ ಬರುತ್ತಿದೆ.
ಅರಸು ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ ರಾಜ್ಯದಲ್ಲಿ ಸವಿತಾ ಸಮಾಜದ ನಿಗಮ ಸ್ಥಾಪನೆ ಯಾದ ಬಳಿಕ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 7 ಮಂದಿಗೆ ಸ್ವಯಂ ಉದ್ಯೋಗಕೈಗೊಳ್ಳಲು 50 ಸಾವಿರ ರೂ. ಸಾಲ ನೀಡಲುಕ್ರಮಕೈಗೊಂಡಿದ್ದೇವೆ. – ಆರ್.ಬಸವರಾಜು, ಜಿಲ್ಲಾ ವ್ಯವಸ್ಥಾಪಕರು, ದಿ.ದೇವರಾಜ ಅರಸು ಅಭಿವೃದ್ಧಿ ನಿಗಮ
ಜಿಲ್ಲೆಯಲ್ಲಿ 12 ಸಾವಿರ ಸವಿತಾ ಸಮಾಜದ ಬಂಧುಗಳು ಕ್ಷೌರಿಕ ವೃತ್ತಿ ಮತ್ತು ನಾದಸ್ವರ, ಡೋಲುಮುಂತಾದಕಲೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಸರ್ಕಾರಕೋವಿಡ್ ಸಂದರ್ಭದಲ್ಲಿ 5 ಸಾವಿರ ರೂ. ಪ್ರೋತ್ಸಾಹ ಧನ ಎಲ್ಲರಿಗೂ ಕಲ್ಪಿಸಬೇಕು. –ಚಲಪತಿ, ಜಿಲ್ಲಾ ಸವಿತಾ ಸಮಾಜ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.