ಕೋವಿಡ್ 19 ತಡೆಗೆ ಮುನ್ನೆಚ್ಚರಿಕೆ ವಹಿಸಿ
Team Udayavani, Jun 23, 2020, 6:17 AM IST
ಶಿಡ್ಲಘಟ್ಟ: ನಗರ ಸಹಿತ ತಾಲೂಕಿನಾದ್ಯಂತ ಕೋವಿಡ್ 19 ಸೋಂಕು ನಿಯಂತ್ರಿಸಲು ಅಧಿಕಾರಿಗಳು ಮತ್ತಷ್ಟು ಮುನ್ನೆ ಚ್ಚರಿಕೆ ಕ್ರಮಗಳನ್ನು ಕೈಗೊಂಡು ನಾಗರಿಕರ ಆತಂಕ ದೂರ ಮಾಡಬೇಕೆಂದು ಶಾಸಕ ವಿ.ಮುನಿಯಪ್ಪ ಸೂಚಿಸಿದರು.
ನಗರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕ್ರಿಮಿನಾಶಕ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್ 19 ಮುಕ್ತವಾಗಿದ್ದ ತಾಲೂಕಿನಲ್ಲಿ ಸೋಂಕು ಕಾಲಿಟ್ಟಿದೆ. ನಾಗರಿಕರು ವಿನಾಕಾರಣ ಮನೆಯಿಂದ ಹೊರ ಬರುವುದನ್ನು ಸ್ವಯಂ ಪ್ರೇರಿತರಾಗಿ ನಿಯಂತ್ರಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಸಹಕರಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಳೇ ಅಂಚೆ ಕಚೇರಿ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾಹಿತಿ ನೀಡಿದರು. ಶಾಸಕರು ನಗರದಲ್ಲಿ ಪ್ರದಕ್ಷಿಣೆ ಮಾಡಿ ಸೀಲ್ ಡೌನ್ ಆಗಿರುವ ಪ್ರದೇಶ ವೀಕ್ಷಿಸಿ ನಗರದ ಎಲ್ಲಾ ವಾಡ್‌ಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಿಸಿ ಸ್ವತ್ಛತೆ ಕಾಪಾಡಲು ವಿಶೇಷ ಅಭಿಯಾನ ನಡೆಸಬೇಕೆಂದು ಪೌರಾಯುಕ್ತ ಹಾಗೂ ಆರೋಗ್ಯ ನಿರೀಕ್ಷಕಿಗೆ ಆದೇಶಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಹ್ಮಣಿ, ನಗರಸಭಾ ಸದಸ್ಯ ರಿಯಾಝ್ಪಾಷ, ಮನೋಹರ್, ನಗರಸಭೆಯ ನೀರು ಸರಬರಾಜು ವಿಭಾಗದ ಮುರಳಿ, ಮುಖಂಡರಾದ ಟಿ.ಕೆ.ನಟರಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಭಕ್ತರಹಳ್ಳಿ ಗ್ರಾಪಂ ಸದಸ್ಯ ಚಿದಾ ನಂದಮೂರ್ತಿ, ಕಾಕಚೊಕ್ಕಂಡಹಳ್ಳಿ ಮಂಜುನಾಥ್, ಮಾದಿಗ ದಂಡೋರ ಸಮಿತಿ ಖಜಾಂಚಿ ನರಸಿಂಹ ಮೂರ್ತಿ, ನಾಗನರಸಿಂಹ, ಆರೋಗ್ಯ ನಿರೀಕ್ಷಕಿ ಶೋಭಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Tragedy: ಕಾರು ಅಪಘಾತ: ಯುವ ಪತ್ರಕರ್ತ ಸ್ಥಳದಲ್ಲೇ ಮೃತ್ಯು!
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
MUST WATCH
ಹೊಸ ಸೇರ್ಪಡೆ
Uppinangady: ಗಾಂಜಾ ಸಹಿತ ಓರ್ವನ ಬಂಧನ
Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ
ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!
Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.