ಶಿಥಿಲಾವಸ್ಥೆಯಲ್ಲಿ ಬೆಸ್ಕಾಂ ಕಚೇರಿ, ವಸತಿಗೃಹ
Team Udayavani, Jul 28, 2019, 3:17 PM IST
ದಿಬ್ಬೂರಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿಗೃಹಗಳು ತ್ಯಾಜ್ಯ, ಮಲಮೂತ್ರ ವಿಸರ್ಜನೆ ಕೇಂದ್ರವಾಗಿರುವುದು.
ಶಿಡ್ಲಘಟ್ಟ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರಿ ಸೌಲಭ್ಯ ತಲುಪಿಸಬೇಕೆಂಬ ಉದ್ದೇಶದೊಂದಿಗೆ ಸರ್ಕಾರಿ ನೌಕರರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸುವ ಕಚೇರಿ ಮತ್ತು ವಸತಿಗೃಹಗಳು ನಿರ್ವಹಣೆ ಇಲ್ಲದಿದ್ದರೇ ಯಾವ ಗತಿಗೆ ತಲುಪುತ್ತದೆ ಎಂಬುದಕ್ಕೆ ಕೆಇಬಿ(ಬೆಸ್ಕಾಂ) ಕಚೇರಿ ಮತ್ತು ವಸತಿಗೃಹಗಳು ಜೀವಂತ ಸಾಕ್ಷಿಯಾಗಿದೆ.
ತಾಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆ ಕೆಇಬಿ ಅಥವಾ ಬೆಸ್ಕಾಂ ಕಚೇರಿ, ನೌಕರರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದ ಲಕ್ಷಾಂತರ ರೂ. ಮೌಲ್ಯದ ಜಾಗ ಅನಾಥವಾಗಿದ್ದು, ಕಟ್ಟಡ ಪಾಳುಬಿದ್ದಿದ್ದು, ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ.
ಅಕ್ರಮ ಚಟುವಟಿಕೆ: ಗ್ರಾಮ ಪಂಚಾಯಿತಿ ಕೇಂದ್ರದ ಸಮೀಪಯಿರುವ ಕೆಇಬಿ ಕಚೇರಿ ಮತ್ತು ವಸತಿಗೃಹಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲು ಕಾಣುತ್ತವೆ. ಮಲಮೂತ್ರ ವಿಸರ್ಜನೆಯ ಕೇಂದ್ರವಾಗಿ ಪರಿ ವರ್ತನೆಗೊಂಡಿದ್ದು, ರಾತ್ರಿ ವೇಳೆಯಲ್ಲಿ ಸರ್ಕಾರಿ ಕಟ್ಟಡ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ನಿರ್ವಹಣೆ ಇಲ್ಲ: ಸರ್ಕಾರಿ ನೌಕರರು ಕೇಂದ್ರ ಸ್ಥಾನ ದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಇಲಾ ಖೆಗೆ ಪ್ರತ್ಯೇಕ ಕಚೇರಿ ಮತ್ತು ವಸತಿಗೃಹ ನಿರ್ಮಿಸಲು ಕ್ರಮ ಕೈಗೊಂಡಿದ್ದ ಫಲದಿಂದಾಗಿ ದಿಬ್ಬೂರಹಳ್ಳಿಯಲ್ಲಿ ನಿರ್ಮಿಸಿರುವ ಕೆಇಬಿ ಕಚೇರಿ ಮತ್ತು ವಸತಿಗೃಹಗಳು ಸೂಕ್ತ ನಿರ್ವಹಣೆ ಇಲ್ಲದೇ ಅನಾಥವಾಗಿದೆ.
ಕಟ್ಟಡದ ಸ್ವರೂಪವೇ ಬದಲು: ದಿಬ್ಬೂರಹಳ್ಳಿ ಗ್ರಾಮ ದಲ್ಲಿ ಕೆಇಬಿ ಕಚೇರಿಗೆ ನೂತನ ಕಟ್ಟಡ ನಿರ್ಮಾಣ ಗೊಂಡ ಬಳಿಕ ಹಳೆ ಕಚೇರಿಯನ್ನು ಕಂದಾಯ ಇಲಾ ಖೆಯ ಸಿಬ್ಬಂದಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಕೆಇಬಿ ಇಲಾಖೆಯ ಅಧಿಕಾರಿಗಳು ಅವರನ್ನು ಖಾಲಿ ಮಾಡಿದ ಬಳಿಕ ಹಳೆ ಕಚೇರಿ ಮತ್ತು ವಸತಿಗೃಹ ಬಳಕೆ ಯಾಗದೇ ಪಾಳುಬಿದ್ದಿದ್ದು, ಕಟ್ಟಡದ ಸ್ವರೂಪವೇ ಬದಲಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರದ ಸಮೀಪ ಮತ್ತು ಊರಿನ ಮಧ್ಯೆ ಭಾಗದಲ್ಲಿರುವ ಕೆಇಬಿ ಕಚೇರಿ ಮತ್ತು ವಸತಿಗೃಹಗಳು ಯಾರಿಗೂ ಬೇಡವಾದ ಸ್ಥಿತಿಗೆ ತಲುಪಿದೆ. ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಹಂತಕ್ಕೆ ತಲುಪಿದೆ.
ಗ್ರಾಪಂಗೆ ಬರುವ ಗ್ರಾಮಸ್ಥರು ಕೆಇಬಿ ಹಳೆ ಕಚೇರಿ ಮತ್ತು ವಸತಿಗೃಹಗಳನ್ನು ನೋಡಿ ಭೂತಬಂಗಲೆಯಂತಿರುವ ಕಟ್ಟಡಗಳನ್ನು ಯಾರು ನಿರ್ವಹಣೆ ಮಾಡುತ್ತಿಲ್ಲವೇ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಕಚೇರಿಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಉತ್ಸಾಹ ತೋರಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಸ್ತಿತ್ವದಲ್ಲಿರುವ ಹಳೆ ಕಚೇರಿಯ ಕಟ್ಟಡಗಳ ಸ್ಥಿತಿಗತಿ ಮತ್ತು ವಸತಿಗೃಹಗಳ ಪರಿಸ್ಥಿತಿಯನ್ನು ಅವಲೋಕಿಸಲು ಮುಂದಾಗಬೇಕಾಗಿದೆ. ಹೊಸದು ನಿರ್ಮಾಣವಾದ ಮೇಲೆ ಹಳೆ ಕಚೇರಿಗಳನ್ನು ಕಡೆಗಣಿಸುವ ನೀತಿ ಬದಲಾಗದಿದ್ದರೆ ಸರ್ಕಾರದ ಮೂಲ ಉದ್ದೇಶಗಳಿಗೆ ಬೆಲೆ ಇಲ್ಲದಂತಾಗುತ್ತದೆ.
ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಶಿಥಿಲಾವಸ್ಥೆಯಲ್ಲಿರುವ ಕೆಇಬಿ ಹಳೆ ಕಚೇರಿ ಮತ್ತು ವಸತಿಗೃಹಗಳ ಕಾಯಕಲ್ಪಕ್ಕೆ ಮುಂದಾಗಬೇಕಿದೆ.
● ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
MUST WATCH
ಹೊಸ ಸೇರ್ಪಡೆ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.