ಚಂದ್ರಯಾನ ಯಶಸ್ವಿ ಹಿಂದೆ ಗುಡಿಬಂಡೆಯ ವಿಜ್ಞಾನಿ ಒಬ್ಬರು
Team Udayavani, Jul 14, 2023, 7:02 PM IST
ಗುಡಿಬಂಡೆ: ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ಈ ಭಾರಿಯ ಚಂದ್ರಯಾನ-3 ಉಡಾವಣೆಯಲ್ಲಿ ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ತಾಲೂಕಿನ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಗುಡಿಬಂಡೆ ತಾಲೂಕಿನ ಕುಗ್ರಾಮವಾದ ಜಂಗಾಲಹಳ್ಳಿಯಲ್ಲಿ ಚನ್ನಪ್ಪಯ್ಯ, ತಿಮ್ಮಕ್ಕ ರವರ ಮಗನಾಗಿ ಜನಿಸಿದ, ಇವರು 2013 ರ ಮಂಗಳಯಾನ ,2019 ಚಂದ್ರಯಾನ -2 ಉಡಾವಣೆಯಲ್ಲೂ ಸಹ ಪ್ರಮುಖ ಪಾತ್ರವನ್ನು ಸಹ ವಹಿಸಿ ಕೆಲಸ ನಿರ್ವಹಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು.
ಈಗ ಚಂದ್ರಯಾನ -3 ಉಡಾವಣೆಯಲ್ಲಿ ಇನ್ನು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಮಿಷನ್ ಕಂಟ್ರೋಲ್ ಸೆಂಟ್ರಲ್‌ನ ಇನ್‌ಚಾರ್ಜ್ ಮತ್ತು ಸಪೋರ್ಟ್ ಸಿಸ್ಟಮ್ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವುದಕ್ಕೆ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಮೋದಿಯಿಂದ ಶ್ಲಾಘನೆ:2019 ರ ಚಂದ್ರಯಾನ-2 ಉಡಾವಣೆಯಲ್ಲಿ ಗುರ್ರಪ್ಪ ರವರು ಪ್ರಮುಖ ಪಾತ್ರ ವಹಿಸಿ ಕೆಲಸ ನಿರ್ವಹಿಸಿದ್ದರು. ಮಂಗಳಯಾನ ಉಡಾವಣೆ ಯಶಸ್ವಿಯಾದ ಸಂದರ್ಭದಲ್ಲಿ ಗುರ್ರಪ್ಪ ರವರನ್ನು ಪ್ರಧಾನಿ ನರೇಂದ್ರ ಮೋದಿರವರು ಹಸ್ತ ಲಾಘವ ಮಾಡಿ ಶ್ಲಾಘಿಸಿದ್ದರು.
ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ರವರು ಚಂದ್ರಯಾನ-3 ರ ಉಡಾವಣೆಯಲ್ಲಿ ಪ್ರಮುಖ ವಿಭಾಗದಲ್ಲಿ ಜವಾಬ್ದಾರಿ ಹೊತ್ತು ಕೆಲಸ ನಿರ್ವಹಿಸುವುದು ಸಂತಸದ ವಿಚಾರವಾಗಿದೆ.
-ಎನ್.ವಿ.ಗಂಗಾಧರಪ್ಪ, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷರು
ಚಂದ್ರಯಾನ-3 ಉಡಾವಣೆ ಕಾರ್ಯದಲ್ಲಿ ಮಹತ್ವ ಪಾತ್ರವನ್ನು ವಹಿಸಿದ ನನ್ನ ಕ್ಷೇತ್ರದ ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ರವರಿಗೆ ಧನ್ಯವಾದಗಳು.
-ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು, ಬಾಗೇಪಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.