ಬಿಜೆಪಿ ಸಭೆಯಲ್ಲಿ ಗದ್ದಲ
Team Udayavani, Apr 1, 2023, 2:58 PM IST
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು ಪಕ್ಷದ ವರಿಷ್ಟರ ಮುಂದೆಯೇ ಭಿನ್ನಮತ ಭುಗಿಲೆ ದ್ದಿದ್ದು ಪದಾಧಿಕಾರಿಗಳನ್ನು ಹೊರ ತುಪಡಿಸಿ ಬೇರೆಯವರಿಗೆ ಅವಕಾಶವನ್ನು ಕಲ್ಪಿಸಲಾಗು ತ್ತಿದೆ ಎಂದು ಮಾಜಿ ಶಾಸಕ ಎಂ.ರಾಜಣ್ಣ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶ್ರೀ ದೇವಿ ಪ್ಯಾಲೇಸ್‌ನಲ್ಲಿ ಬಿಜೆಪಿ ಪಕ್ಷದದಿಂದ ನಡೆದ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹ ಸಭೆಯು ಗದ್ದಲಕ್ಕೆ ಸಾಕ್ಷಿಯಾಯಿತು. ಟಿಕೆಟ್ ನೀಡುವ ವಿಚಾರವಾಗಿ ಪಕ್ಷದಿಂದ ಕರೆದಿದ್ದ ಸ್ಥಳೀಯ ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಗೆ ಕೆಲವರಿಗೆ ಒಳಹೋಗಲು ಅವಕಾಶ ನೀಡಿ, ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು 4 ವರ್ಷಗಳಿಂದ ಶ್ರಮಿಸುತ್ತಿರುವ ರಾಜಣ್ಣ ಅವರ ಬೆಂಬಲಿಗ ಪದಾಧಿಕಾರಿಗಳನ್ನು ಕಲ್ಯಾಣ ಮಂಟಪದ ಒಳಗೆ ಬಿಡದೆ ತಡೆವ ಪ್ರಯತ್ನ ನಡೆಸಲಾಯಿತು. ಇದರಿಂದ ಸಿಟ್ಟಾದ ರಾಜಣ್ಣ ಪರ ಕಾರ್ಯಕರ್ತರು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮತ್ತು ಇತರೆ ಪದಾಧಿಕಾರಿಗಳ ಜತೆ ವಾಗ್ವಾದ ನಡೆಸಿದರು.
ಈ ವೇಳೆ ಗದ್ದಲದ ವಾತಾವರಣ ನಿರ್ಮಾಣವಾಗಿ ತಳ್ಳಾಟ ನೂಕಾಟವೂ ನಡೆಯಿತು.
ಗದ್ದಲಕ್ಕೆ ಕಾರಣವೇನು?: ಬಿಜೆಪಿ ಕೇಂದ್ರದ ನಾಯಕರ ಸೂಚನೆ ಮೇರೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಯನ್ನು ಸ್ಥಳೀಯ ಪದಾಧಿಕಾರಿಗಳ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಗೆ ಜಿಲ್ಲೆಯಲ್ಲಿ ಸಹ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ವಸತಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಇಲ್ಲೂ ಮುಂದಾಗಿತ್ತು. ಆದರೆ ಶಿಡ್ಲಘಟ್ಟ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಮಾಜಿ ಶಾಸಕ ಎಂ ರಾಜಣ್ಣ ಮತ್ತು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆ ಗೊಂಡ ಸೀಕಲ್ ರಾಮ ಚಂದ್ರಗೌಡ ಸ್ಪರ್ಧೆ ಯಲ್ಲಿದ್ದಾರೆ ಎರಡು ಬಣಗಳ ಅಭಿಮಾನಿಗಳು ಕಾರ್ಯಕರ್ತರು ಮುಖಂಡರು ಶ್ರೀದೇವಿ ಪ್ಯಾಲೇಸ್ ಮುಂದೆ ಜಮಾಯಿಸಿದ್ದರು. ಕಾರ್ಯ ಕರ್ತರ ಅಭಿಪ್ರಾಯ ಸಂಗ್ರಹವನ್ನು ಮತದಾನ ದ ಮೂಲಕ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಇರುವ ಪದಾಧಿಕಾರಿಗಳನ್ನು ಹೊರತುಪಡಿಸಿ ಹೊಸ ಪದಾಧಿಕಾರಿಗಳನ್ನು ಸೃಷ್ಟಿಸಿ ಮತದಾನ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿಯಿಂದಾಗಿ ಗದ್ದಲ ಶುರುವಾಯಿತು. ರಾಜಣ್ಣ ಬೆಂಬಲಿ ಗರು ಹೊಸಬರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಪಟ್ಟುಹಿಡಿದರು.
ಸ್ವತಃ ಜಿಲ್ಲಾಧ್ಯಕ್ಷ ರಾಮಲಿಂಗ ಪ್ಪರವರೇ ಗದ್ದಲ ಗಲಾಟೆ ನಿಲ್ಲಿಸಲು ಮುಂದಾ ದರೂ ತಳ್ಳಾಟ ನೂಕಾಟ ನಡೆಯಿತು. ಪದಾಧಿ ಕಾರಿಗಳಿಗೆ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಎಂದಾಗ ಗಲಾಟೆ ಕಮ್ಮಿಯಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.