Janata darshan: ಜನತಾ ದರ್ಶನಕ್ಕೆ ಕೈ ಕೊಟ್ಟ ಪ್ರದೀಪ್ ಈಶ್ವರ್
Team Udayavani, Dec 28, 2023, 2:47 PM IST
ಚಿಕ್ಕಬಳ್ಳಾಪುರ: ಜನತಾ ದರ್ಶನದಲ್ಲಿ ಕೈಗೆ ಶಾಸಕರು ಸಿಗುತ್ತಾರೆ. ಹತ್ತಿರದಿಂದ ನಮ್ಮ ಕಷ್ಟಸುಖ ಕೇಳಬಹು ದೆಂದು ಕ್ಷೇತ್ರದ ಗ್ರಾಮೀಣ ಭಾಗದಿಂದ ಸಮಸ್ಯೆ ಗಳ ಭಾರದೊಂದಿಗೆ ಆಗಮಿಸಿದ್ದ ವಯೋವೃದ್ಧರಿಗೆ, ರೈತರಿಗೆ, ಸಾರ್ವಜನಿಕರಿಗೆ, ಮಹಿಳೆಯರಿಗೆ ಶಾಸಕರ ದರ್ಶನ ಆಗದೇ ತೀವ್ರ ನಿರಾಸೆ ಮೂಡಿಸಿತು.
ಹೌದು, ಕ್ಷೇತ್ರದ ವಿವಿಧ ಗ್ರಾಮಗಳಿಂದ ತಮ್ಮ ಸಮಸ್ಯೆಗಳನ್ನು ಹೊತ್ತು ಜನತಾ ದರ್ಶನಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಜಿಲ್ಲಾ ಕೇಂದ್ರದಲ್ಲಿ ನಡೆದ ಮೊದಲ ಜನತಾ ದರ್ಶನದಲ್ಲಿಯೆ ಕ್ಷೇತ್ರದ ಶಾಸಕರ ದರ್ಶನ ಆಗದೇ, ಅವರ ವೈಖರಿ ಬಗ್ಗೆ ಸಾರ್ವಜನಿಕರಲ್ಲಿ ಬೇಸರ, ಅಸಮಾಧಾನ, ಸಿಟ್ಟು, ಆಕ್ರೋಶ ಪ್ರದರ್ಶನಗೊಳ್ಳುವಂತಾಯಿತು.
ಜನತಾ ದರ್ಶನದಲ್ಲಿ ಆಗಿದ್ದೇನು?: ಬೆಳಗ್ಗೆ 10 ಗಂಟೆಗೆ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕರ ಕಾರ್ಯಕ್ರಮ ಆಗಿದ್ದರಿಂದ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಬೃಹತ್ ಪೆಂಡಾಲ್ ಹಾಕಿ ಸಾರ್ವಜನಿಕರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಇನ್ನೇನು ಶಾಸಕರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಇನ್ನೇನು ಶಾಸಕರು ಬರುವುದಿಲ್ಲ ಎಂಬ ಮಾಹಿತಿ ಅರಿತು, ತಾವೇ ವೇದಿಕೆ ಮೇಲೆ ಕೂತು ಉಪ ವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ಅನಿಲ್, ತಾಪಂ ಇಒ ಮಂಜುನಾಥ, ನಗರಸಭೆ ಆಯುಕ್ತರಾದ ಮಂಜುನಾಥ ಮತ್ತಿತರ ಅಧಿಕಾರಿಗಳು ಜನತಾ ದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಒಬ್ಬರನ್ನಾಗಿ ಕಳುಹಿಸಿಕೊಟ್ಟರು.
ವೇದಿಕೆಯಲ್ಲಿ ಅಧಿಕಾರಿಗಳು ಭರ್ತಿ: ಶಾಸಕರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಆಯೋಜನೆ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಬಹುತೇಕ ಇಲಾಖೆಗಳ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್‌ಐ ನಂಜುಂಡಯ್ಯ, ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಶಾಸಕರ ಕಾರ್ಯವೈಖರಿ ವಿರುದ್ಧ ಅಸಮಾಧಾನ!:
ಕೆಲವರು ಶಾಸಕರ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿಯೆ ಜನತಾ ದರ್ಶನದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರಿಗೆ ಮನವಿ ಕೊಡಲಿಕ್ಕೆ ಬಂದೆವು. ಶಾಸಕರೇ ಇಲ್ಲ ಅಂದ ಮೇಲೆ ಅಧಿಕಾರಿಗಳಿಗೆ ಮನವಿ ಕೊಟ್ಟರೆ ಏನು ಪ್ರಯೋಜನ ಎಂದು ವಯೋ ವೃದ್ಧರೊಬ್ಬರು ಶಾಸಕರ ಗೈರು ಹಾಜರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟು ನಮಗೆ ಸಾಕಾಗಿದೆ. ಉತ್ಸಾಹಿ ಶಾಸಕರು ಎಲ್ಲರಿಗೂ ಸ್ಪಂದಿಸುತ್ತಾರೆಂದು ಎಲ್ಲರೂ ಮಾತನಾಡುತ್ತಾರೆ. ಆದ್ದರಿಂದ ಶಾಸಕರಿಗೆ ನೇರವಾಗಿ ಬಂದು ನಮ್ಮ ಸಮಸ್ಯೆ ಹೇಳೋಣ ಅಂತ ಬಂದೆವು. ಆದರೆ ಶಾಸಕರೇ ಬಂದಿಲ್ಲ ಎಂದು ಖಾತೆ ವಿಚಾರದಲ್ಲಿ ತಹಶೀಲ್ದಾರ್ ಕಚೇರಿಗೆ ಸುತ್ತಾಡಿ ಸುಸ್ತಾದ ವೃದ್ಧರೊಬ್ಬರು ಬೇಸರ ವ್ಯಕ್ತಪಡಿಸಿದರು.
ಅರ್ಜಿ ಕೊಟ್ಟು ಹೋಗಿ ನೋಡೋಣ ಎಂಬ ಸಿದ್ಧ ಉತ್ತರ :
ಸಮಸ್ಯೆಯ ಸಂಕಟಗಳನ್ನು ಹೇಳಿಕೊಂಡವರಿಗೆ ಜನತಾ ದರ್ಶನದಲ್ಲಿ ಪರಿಹಾರ ಸಿಕ್ಕಿದ್ದು ಬೆರಳಣಿಕೆಯಷ್ಟು ಮಾತ್ರ, ಸಿಎಂ ಆದೇಶದಲ್ಲಿ ಜನತಾ ದರ್ಶನದಲ್ಲಿ ಸಲ್ಲಿಕೆ ಆಗುವ ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಆಗಬೇಕು. ಆದರೆ, ನೂರಾರು ಅರ್ಜಿಗಳು ಸಲ್ಲಿಕೆಯಾದರೂ ಅಧಿಕಾರಿಗಳು ನಾಲ್ಕೈದು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಸೂಚಿಸಿದರು. ಉಳಿದಂತೆ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೀಡುವ ಸಿದ್ಧ ಉತ್ತರದಂತೆ ಆಯ್ತು ಬೇಗ ಬಗೆಹರಿಸುತ್ತೇವೆ. ಕಚೇರಿಗೆ ಬಂದು ಭೇಟಿ ಆಗಿ ಎಂಬ ಉತ್ತರ ಸಾರ್ವಜನಿಕರಿಗೆ ಎದುರಾಯಿತು. ಶಾಸಕರು ಇದ್ದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತೋ ಏನು ಎಂಬ ಭರವಸೆಯಲ್ಲಿಯೆ ಜನತಾ ದರ್ಶನದಿಂದ ಸಾರ್ವಜನಿಕರು ನಿರ್ಗಮಿಸಿದರು. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು.
ಜನತಾ ದರ್ಶನದಲ್ಲಿ ಸಮಸ್ಯೆಗಳ ಸ್ಫೋಟ:
ಶಾಸಕರ ಗೈರು ಹಾಜರಿ ನಡುವೆಯು ನಡೆದ ಜನತಾ ದರ್ಶನದಲ್ಲಿ ಸಮಸ್ಯೆಗಳ ಸ್ಫೋಟ ಎದ್ದು ಕಂಡಿತು. ವಸತಿ, ನಿವೇಶನ, ಹೊಸ ಪಡಿತರ ಚೀಟಿ, ಪೌತಿ ಖಾತೆ, ಬೀದಿ ದೀಪ, ರಸ್ತೆ ಒತ್ತುವರಿ, ಪಿಂಚಣಿ ಬರುತ್ತಿಲ್ಲ. ಗೃಹಲಕ್ಷ್ಮೀ ಹಣ ಬರುತ್ತಿಲ್ಲ, ಎಂದು ಹೀಗೆ ಅನೇಕ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಗೆಹರಿಸುವಂತೆ ಮನವಿ ಮಾಡಿದರು. ವಯೋ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಆ್ಯಂಬುಲೆನ್ಸ್‌ಗಳನ್ನು ನಿಲ್ಲಿಸಿದ್ದು ಏಕೆ?:
ಜನತಾ ದರ್ಶನ ಕಾರ್ಯಕ್ರಮದ ಸ್ಥಳದಲ್ಲಿ ಶಾಸಕರ ಮಾಲೀಕತ್ವದ ಆ್ಯಂಬುಲೆನ್ಸ್‌ಗಳನ್ನು ತಂದು ನಿಲ್ಲಿಸಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಯಿತು. ಜನತಾ ದರ್ಶನದಲ್ಲಿ ಆ್ಯಂಬುಲೆನ್ Õ ಗಳನ್ನು ತಂದು ನಿಲ್ಲಿಸುವ ಅವಶ್ಯಕತೆ ಏನಿತ್ತು ಎಂದು ಮುಖಂಡರೊಬ್ಬರು ಪ್ರಶ್ನಿಸಿದರು. ಶಾಸಕರು ಹಿಂದಿನ ಸುಧಾಕರ್ ರೀತಿ ಶೋ ಅಷ್ಟೇ ಎಂದು ವ್ಯಂಗ್ಯವಾಡಿದರು.
ಶಾಸಕರ ಗೈರು ಹಾಜರಿ ನಡುವೆಯು ನಡೆದ ಜನತಾ ದರ್ಶನದಲ್ಲಿ ಸಮಸ್ಯೆಗಳ ಸ್ಫೋಟ ಎದ್ದು ಕಂಡಿತು. ವಸತಿ, ನಿವೇಶನ, ಹೊಸ ಪಡಿತರ ಚೀಟಿ, ಪೌತಿ ಖಾತೆ, ಬೀದಿ ದೀಪ, ರಸ್ತೆ ಒತ್ತುವರಿ, ಪಿಂಚಣಿ ಬರುತ್ತಿಲ್ಲ. ಗೃಹಲಕ್ಷ್ಮೀ ಹಣ ಬರುತ್ತಿಲ್ಲ, ಎಂದು ಹೀಗೆ ಅನೇಕ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಗೆಹರಿಸುವಂತೆ ಮನವಿ ಮಾಡಿದರು. ವಯೋ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
– ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.