ಬಟ್ಟೆ ವ್ಯಾಪಾರದ ನೆಪದಲ್ಲಿ ಅಫೀಮು ಮಾರಾಟ
ರಾಜಸ್ಥಾನ ಮೂಲದ ಇಬ್ಬರ ಸೆರೆ ! 3 ಲಕ್ಷ ರೂ.ಮೌಲ್ಯದ ಅಫೀಮು ವಶ ! ಆತಂಕಕ್ಕೊಳಗಾದ ಜನ
Team Udayavani, Apr 3, 2021, 7:01 PM IST
ಚಿಕ್ಕಬಳ್ಳಾಪುರ: ಬಟ್ಟೆ ವ್ಯಾಪಾರ ಮಾಡಲು ಚಿಕ್ಕಬಳ್ಳಾಪುರ ನಗರದಲ್ಲಿ ನೆಲೆಸಿ ಅಕ್ರಮವಾಗಿ ಮಾದಕ ವಸ್ತು ಅಫೀಮು ಸೇವನೆ, ಮಾರಾಟ ಮಾಡುತ್ತಿದ್ದ ಇಬ್ಬರನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಜಸ್ಥಾನದ ರಾಣಾಸಿಂಗ್ ಹಾಗೂ ಜೋಧುಸಿಂಗ್ ಬಂಧಿತರು. ರೂಮ್ ಬಾಡಿಗೆ ಪಡೆದಿದ್ದರು: ನಗರದ ಪ್ರಶಾಂತ ನಗರದಲ್ಲಿ ನೆಲೆಸಿದ್ದ ರಾಣಾಸಿಂಗ್ ಬಟ್ಟೆ ಅಂಗಡಿ ಇಟ್ಟುಕೊಂಡು ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್ ಪೇಪರ್, ತಟ್ಟೆ ಪರಿಕರಿಗಳ ಅಂಗಡಿ ಇಟ್ಟುಕೊಂಡಿದ್ದನು.
ಸುಮಾರು ವರ್ಷಗಳಿಂದ ಚಿಕ್ಕಬಳ್ಳಾಪುರ ನಗರದಲ್ಲಿ ನೆಲೆಸಿರುವ ಆರೋಪಿಗಳಿಬ್ಬರು ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ರೂಮ್ ಬಾಡಿಗೆ ಪಡೆದುಕೊಂಡಿದ್ದರು. ಇಲ್ಲಿ ಪ್ರತಿನಿತ್ಯ ಅಫೀಮು ಸೇವನೆ ಮಾಡಿ ಅದನ್ನು ಕೆಲವರಿಗೆ ಮಾರಾಟ ಮಾಡುತ್ತಿದ್ದರು.
ಪೊಲೀಸರಿಂದ ತನಿಖೆ: ಈ ಕುರಿತು ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಡಿವೈಎಸ್‌ಪಿ ಕೆ.ರವಿಶಂಕರ್ ನೇತೃತ್ವದ ತಂಡ ಬಟ್ಟೆ ಅಂಗಡಿ ಮತ್ತು ರೂಮ್ ಮೇಲೆ ದಾಳಿ ನಡೆಸಿ ಸುಮಾರು 3 ಲಕ್ಷ ರೂ.ಮೌಲ್ಯದ 388 ಗ್ರಾಂ. ಆಫೀಮನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. t
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.