![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, May 26, 2023, 10:41 AM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬೇಸಿಗೆಯಲ್ಲಿ ಹಾಲು ಉತ್ಪಾದನೆಯಲ್ಲಿ ಈಗ ಮಳೆಗಾಲ ಶುರುವಾದಂತೆ ಚೇತರಿಕೆ ಕಂಡಿದ್ದು, ಸರಾಸರಿ ನಿತ್ಯ ಜಿಲ್ಲೆಯಲ್ಲಿ 50 ಸಾವಿರ ಲೀ.ಗೂ ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆ ಹೆಚ್ಚಳ ಕಂಡಿದೆ. ಹೈನೋದ್ಯಮದಲ್ಲಿ ರಾಜ್ಯದ ಗಮನ ಸೆಳೆದಿರುವ ಅಖಂಡ ಕೋಲಾರ ಚಿಕ್ಕ ಬಳ್ಳಾಪುರ ಜಿಲ್ಲೆಗಳ ರೈತರ ಪಾಲಿಗೆ ಹೈನುಗಾರಿಕೆ ಜೀವನಾಡಿ ಆಗಿದೆ. ಆದರೆ ಬೇಸಿಗೆ ಅವಧಿಯಲ್ಲಿ ಹಸಿರು ಮೇವಿನ ಕೊರತೆ ಪರಿಣಾಮ ಹಾಲು ದಿಢೀರ್ ಕುಸಿತ ಕಂಡು ಹಾಲು ಉತ್ಪಾದಕರು ಕಂಗಾಲಾಗಿದ್ದರು.
ಹಾಲು ಉತ್ಪಾದನೆಯಲ್ಲಿ ಚೇತರಿಕೆ: ಸದ್ಯ ಮಳೆಗಾಲ ಶುರುವಾಗುತ್ತಿದ್ದಂತೆ ಹಾಲು ಉತ್ಪಾದನೆಯಲ್ಲಿ ಚೇತರಿಕೆ ಕಂಡು
ಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ. ಬೇಸಿ ಗೆಯಲ್ಲಿ ಜಿಲ್ಲೆಯ ಹಾಲಿನ ಉತ್ಪಾ ದನೆ ಪ್ರತಿ ನಿತ್ಯ ಸರಾಸರಿ 3.40 ಲಕ್ಷ ಲೀ.ಗೆ ಕುಸಿದಿತ್ತು. ಇದು ಪರೋಕ್ಷ ವಾಗಿ ರೈತರ ಆದಾಯದ ಮೇಲೆ ದುಷ್ಪರಿಣಾಮ ಬೀರಿತ್ತು. ಹೈನು ದ್ಯೋವನ್ನೆ ನಂಬಿ ಜೀವನ ನಡೆಸುವ ರೈತರಿಗೆ ಹಾಲು ಉತ್ಪಾದನೆ ಕುಸಿತದಿಂದ ಬೇಸಿಗೆ ಕಳೆಯು ವವರೆಗೂ ಸಂಕಷ್ಟದಲ್ಲಿ ಜೀವನ ನಡೆಸಬೇಕಿತ್ತು.
ಆದರೆ, ಈಗ ಮಳೆಗಾಲ ಶುರುವಾಗಿರುವ ಹಿನ್ನೆಲೆ ಯಲ್ಲಿ ಹಾಲಿನ ಉತ್ಪಾದನೆ ಜಿಲ್ಲೆಯಲ್ಲಿ 50 ಸಾವಿರ ಲೀ. ಹೆಚ್ಚಾಗಿದ್ದು, ಸದ್ಯ ಚಿಮೂಲ್‌ಗೆ ಪ್ರತಿ ನಿತ್ಯ 3.90 ಲಕ್ಷ ಲೀ. ಹಾಲು ಪೂರೈಕೆ ಆಗುತ್ತಿದೆ. ಮುಂಗಾರು ಹಂಗಾಮು ಶುರುವಾಗಿ ಬಿತ್ತನೆ ವೇಳೆಗೆ ಜಿಲ್ಲೆಯ ಹಾಲಿನ ಉತ್ಪಾದನೆ 4 ಲಕ್ಷ ಲೀ.ಮೀರಿದರೂ ಅಚ್ಚರಿ ಇಲ್ಲ ಎಂದು ಚಿಮೂಲ್ ಅಧಿಕಾರಿಗಳು ಹೇಳುತ್ತಿದ್ದಾರೆ.
ವಿಶೇಷವಾಗಿ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದ್ದು ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅಷ್ಟೇ ಹಾಲು ಉತ್ಪಾದನೆಯಲ್ಲಿ ಏರಿಕೆ ಕಂಡಿದೆ.ಸದ್ಯ ಇಡೀ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕುಗಳಲ್ಲಿ ಹಾಲು ಉತ್ಪಾದನೆ ಅಧಿಕವಾಗಿದೆ.
ಪ್ರತಿ ಲೀ. ಹಾಲಿಗೆ ಸಿಗುತ್ತದೆ 33.90 ರೂ.
ಕೋಚಿಮುಲ್ ವತಿಯಿಂದ ಶೇ. 4 ಪ್ಯಾಟ್, 8.5 ಎಸ್‌ಎನ್‌ಎಫ್ ಇದ್ದರೆ ರೈತರು ಪೂರೈಸುವ ಪ್ರತಿ ಲೀ.ಹಾಲಿಗೆ 33.90 ರೂ. ದರ ನೀಡಲಾಗುತ್ತಿದೆ. ಶೇ.4ಕ್ಕಿಂತ ಅಧಿಕ ಪ್ಯಾಟ್ ಇರುವ ಪ್ರತಿ ಲೀ.ಹಾಲಿಗೆ ಇನ್ನೂ ಹೆಚ್ಚಿನ ದರ ಸಿಗುತ್ತದೆ. ಕಡಿಮೆ ಇದ್ದರೆ ದರ ಕೂಡ ಕಡಿಮೆ ಆಗುತ್ತದೆ. ಒಟ್ಟಾರೆ ಜಿಲ್ಲೆಯ ರೈತರಿಗೆ ಸರ್ಕಾರದ ಪ್ರೋತ್ಸಾಹ ಹೊರತುಪಡಿಸಿ ಪ್ರತಿ ಲೀ.ಹಾಲಿಗೆ 33.90 ರೂ. ನೀಡಲಾಗುತ್ತಿದೆ.
ಪ್ರತಿ ಲೀ.ಗೆ ಕನಿಷ್ಠ 50 ರೂ. ಕೊಡಬೇಕು
ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿದಿತ್ತು. ಆದರೆ ಈಗ ಮಳೆಗಾಲ ಆರಂಭವಾಗಿ ರುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ರೈತರಿಗೆ ಪ್ರತಿ ಲೀ.ಹಾಲಿಗೆ ಕನಿಷ್ಠ 50 ರೂ. ನಿಗದಿಪಡಿಸಬೇಕು. ಬೂಸು, ಚಕ್ಕೆ ಮತ್ತಿತರ ಪಶು ಆಹಾರ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ.
ಬೇಸಿಗೆಯಲ್ಲಿ ಕೇವಲ 3.40 ಲಕ್ಷ ಲೀ. ಹಾಲು ಮಾತ್ರ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತಿತ್ತು. ಮಳೆಗಾಲ ಶುರುವಾದ ಬಳಿಕ ಹಾಲಿನ
ಉತ್ಪಾದನೆಯಲ್ಲಿ ಏರಿಕೆ ಕಂಡಿದ್ದು ನಿತ್ಯ ಸರಾಸರಿ 3.90 ಲಕ್ಷ ಲೀ.ಹಾಲು ಚಿಮೂಲ್‌ಗೆ ಸರಬರಾಜು ಆಗುತ್ತಿದೆ.
●ಗುರುಮೂರ್ತಿ, ಪ್ರಭಾರಿ ಎಂಡಿ,
ಚಿಮೂಲ್ ಚಿಕ್ಕಬಳ್ಳಾಪುರ
Govt Schools: ಈ ಬಾರಿಯೂ ಬೇಸಗೆಯಲ್ಲಿ ಮಕ್ಕಳಿಗೆ ಭರಪೂರ ಬಿಸಿಯೂಟ
MLA Pradeep Eshwar : ಎತ್ತಿನಹೊಳೆ ಕಾಮಗಾರಿಗೆ 500 ಕೋಟಿ ನೀಡಿ; ಪ್ರದೀಪ್
Chintamani: ಹಿಂಬಾಲಿಸಿ ಬಂದು ವ್ಯಕ್ತಿಯೊಬ್ಬರ ಹ*ತ್ಯೆಗೈದ ದುಷ್ಕರ್ಮಿಗಳು!
Gudibanda: ವಿವಿಧ ಪ್ರಕರಣಗಳ ಕಳ್ಳನ ಬಂಧನ, 152 ಗ್ರಾಂ ಬಂಗಾರ ವಶ
BJP Rift: ಸಂಸದ ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ: ಸಂದೀಪ ರೆಡ್ಡಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.