ಕೆಲಸಗಾರ ಬೇಕೇ ಹೊರತು ಮಾತುಗಾರನಲ್ಲ: ಸಚಿವ ಡಾ| ಸುಧಾಕರ್
ಹುಟ್ಟೂರಿನಿಂದಲೇ ಚುನಾವಣ ಪ್ರಚಾರಕ್ಕೆ ಚಾಲನೆ
Team Udayavani, Apr 25, 2023, 5:51 AM IST
ಚಿಕ್ಕಬಳ್ಳಾಪುರ: ಕ್ಷೇತ್ರಕ್ಕೆ ಅಗತ್ಯವಿರುವುದು ಕೆಲಸಗಾರನೇ ಹೊರತು ಮಾತುಗಾರನಲ್ಲ. ನಾವು ಆಡುವ ಮಾತೇ ಸಾಧನೆಯಾಗಬಾರದು, ಬದಲಿಗೆ ನಾವು ಮಾಡುವ ಕೆಲಸ ಸಾಧನೆಯಾಗಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸಚಿವ ಡಾ| ಕೆ. ಸುಧಾಕರ್ ವಾಗ್ಧಾಳಿ ನಡೆಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಮ್ಮ ತವರೂರು ಪೆರೇಸಂದ್ರದಲ್ಲಿ ಸೋಮವಾರ ಗ್ರಾಮ ದೇವತೆ ರಾಜರಾಜೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಪೆರೇಸಂದ್ರ ಕ್ರಾಸ್‌ನಲ್ಲಿ ಚುನಾವಣ ಪ್ರಚಾರಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕೆಲವರು ತಮ್ಮನ್ನು ಸುನಾಮಿ ಅಂತ ಬಿಂಬಿಸಿಕೊಂಡಿದ್ದಾರೆ. ಸುನಾಮಿ ಬಂದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬರೀ ಡೈಲಾಗ್, ಸ್ಲೋಗನ್‌ಗಳಿಂದ ಹೊಟ್ಟೆ ತುಂಬದು ಎಂದರು.
ಕೈಗಾರಿಕೆ ಸ್ಥಾಪನೆ ಭರವಸೆ
ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆಂದು ಶಾಸಕ ಸ್ಥಾನವನ್ನು ಪಣಕ್ಕಿಟ್ಟು ರಾಜೀನಾಮೆ ನೀಡಿ ವೈದ್ಯಕೀಯ ಕಾಲೇಜು ತಂದೆ. ನನಗೆ ಜನರ ಬದುಕು ಮುಖ್ಯ. ನನ್ನ ಜನರ ಹಾಗೂ ಕ್ಷೇತ್ರದ ಮಕ್ಕಳ ಭವಿಷ್ಯ ಮುಖ್ಯ. ಮುಂದಿನ ಐದು ವರ್ಷಗಳಲ್ಲಿ ಪ್ರತಿ ಮನೆಗೂ ಉದ್ಯೋಗ ನೀಡುವ ಕೆಲಸ ಮಾಡುತ್ತೇನೆ. ಅನೇಕ ಕೈಗಾರಿಕೆಗಳನ್ನು ಚಿಕ್ಕಬಳ್ಳಾಪುರಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ಶಿಕ್ಷಕನ ಕುಟುಂಬದಿಂದ ಬಂದವನು ನಾನು, ರೈತ ಹಿನ್ನೆಲೆಯಿಂದ ಬಂದು ಅಕ್ಷರ ನೀಡುವವರ ಮಗನಾಗಿ ಇಂದು ಸಚಿವನಾಗಿದ್ದೇನೆ. ನಾನು ಬಡವರಿಗೆ ಅನ್ನ ನೀಡುವ, ನೊಂದವರಿಗೆ ಆರೋಗ್ಯ ನೀಡುವ, ಬಡವರಿಗೆ ಆಶ್ರಯ ನೀಡುವ ಮಗನಾಗಬೇಕು ಎಂದು ಬಯಸಿದ್ದೇನೆ. ಇವುಗಳೆಲ್ಲವನ್ನೂ ಮಾಡುವ ಚೈತನ್ಯ ಮತ್ತು ಶಕ್ತಿ ನನಗಿದೆ. ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಕೋರಿದರು.
ಕೋವಿಡ್ ಬಂದಾಗ ಎಲ್ಲಿದ್ದಿರಿ?
ಕೋವಿಡ್ ಸಂದರ್ಭದಲ್ಲಿ ಇವರೆಲ್ಲರೂ ಎಲ್ಲಿದ್ದರು? ಈಗ ಮನೆ ಮನೆಗೆ ಬಂದು ಕಾಲಿಗೆ ಬೀಳುತ್ತಿ¨ªಾರೆ. ಕಷ್ಟದ ಸಂದರ್ಭದಲ್ಲಿ ಜನರಿಗೆ ಅನ್ನ ಕೊಟ್ಟ ಉದಾಹರಣೆ ಇವರಿಗಿದೆಯೇ? ಕಳೆದ 10 ವರ್ಷಗಳಿಂದ ಮನೆಯಲ್ಲಿದ್ದ ವ್ಯಕ್ತಿ ಈಗ ವಾಕಿಂಗ್ ಮಾಡಿದ್ದೇ ಮಾಡಿದ್ದು. ಅವರು ಎರಡನೇ ಸ್ಥಾನಕ್ಕೆ ಬರಲು ಬಹಳ ಪ್ರಯತ್ನ ಮಾಡುತ್ತಿ¨ªಾರೆ ಎಂದು ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ಲೇವಡಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.