Chikkaballapur: ಕಾಣದ ಸುವರ್ಣ ಮಹೋತ್ಸವ ಸಂಭ್ರಮ


Team Udayavani, Nov 27, 2023, 1:58 PM IST

Chikkaballapur: ಕಾಣದ ಸುವರ್ಣ ಮಹೋತ್ಸವ ಸಂಭ್ರಮ

ಚಿಕ್ಕಬಳ್ಳಾಪುರ: ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕಾರಣವಾಗಿ 50 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಷವಿಡೀ ಸುವರ್ಣ ಮಹೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳ ಆಯೋಜನೆಗೆ ನಿರ್ಧರಿಸಿದರೂ ಜಿಲ್ಲೆಯ ಪಾಲಿಗೆ ಸುವರ್ಣ ಮಹೋತ್ಸವ ಸಂಭ್ರಮವೇ ಕಾಣುತ್ತಿಲ್ಲ.

ಜಿಲ್ಲಾಡಳಿತ ನ.1 ರಂದು ರಾಜ್ಯೋತ್ಸವ ಕಾರ್ಯ ಕ್ರಮವನ್ನು ಆಚರಿಸಿದ್ದು, ಬಿಟ್ಟರೆ ಬಳಿಕ ಸುವರ್ಣ ಮಹೋತ್ಸವಕ್ಕೆ ಸಂಬಂಧಿ ಸಿದ ಯಾವ ವಿಶೇಷ ಕಾರ್ಯ ಕ್ರಮಗಳ ಆಯೋಜನೆಯ ಸಿದ್ಧತೆ ಗಳ ಕಡೆಗೆ ಕನಿಷ್ಠವೂ ಜಿಲ್ಲಾಡಳಿತ ತಲೆ ಹಾಕದೇ ಇರುವುದು ಜಿಲ್ಲೆಯ ಸಾರ್ವಜನಿಕ ವಲಯ ದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

1973 ರ ಅ.20 ರಂದು ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕಾರಣಗೊಂಡಿದ್ದಕ್ಕೆ 50 ವರ್ಷ ಸಂದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವರ್ಷವೀಡಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡು ವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಘೋಷಣೆ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ವಿಶೇಷ ಲಾಂಛನ ಕೂಡ ಬಿಡುಗಡೆ ಮಾಡಿದ್ದರು. ಆದರೆ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನವೆಂಬರ್‌ ಮುಗಿದು ಡಿಸೆಂಬರ್‌ಗೆ ಕಾಲಿಡುತ್ತಿದ್ದರೂ, ಸುವರ್ಣ ಮಹೋ ತ್ಸವ ಸಂಭ್ರಮ ಜಿಲ್ಲೆಯ ಪಾಲಿಗೆ ಮಂಕಾಗಿದೆ.

ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯು ಆಂಧ್ರದ ಗಡಿಯಲ್ಲಿದೆ. ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಚೇಳೂರು ಮತ್ತಿತರ ತಾಲೂಕುಗಳಲ್ಲಿ ತೆಲುಗು ಪ್ರಾಬಲ್ಯ ಜೋರಾಗಿಯೆ ಇದೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಒಂದಂಕಿ ದಾಟುವುದು ಕಟ್ಟವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಸಿಗುತ್ತಿವೆ. ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಆದರೂ ಜಿಲ್ಲೆಯಲ್ಲಿ ಕನ್ನಡಪರವಾದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡದೇ ಇರುವುದು ಎದ್ದು ಕಾಣುತ್ತಿದ್ದು, ಸುವರ್ಣ ಮಹೋತ್ಸವ ನವೆಂಬರ್‌ 1ಕ್ಕೆ ಸೀಮಿತವಾಯಿತೇ ಎನ್ನುವ ಮಾತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಯಾವ ಕಾರ್ಯಕ್ರಮವೂ ಇಲ್ಲ: ರಾಜ್ಯದ ಉದ್ದಗಲಕ್ಕೂ ಸುವರ್ಣ ಮಹೋತ್ಸವ ಆಚರಣೆಗೆ ಸರ್ಕಾರ ನಿರ್ಧರಿಸಿದರೂ ಆಯಾ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಅಥವಾ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಪಟ್ಟಿ ಕೂಡ ಜಿಲ್ಲಾಡಳಿತಗಳಿಗೆ ತಲುಪಿಲ್ಲ ಎನ್ನುವ ಮಾತು ಒಂದು ಕಡೆ ಕೇಳಿ ಬರುತ್ತಿದೆ. ಜಿಲ್ಲೆಯು ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ತನ್ನದೇ ಆದ ಇತಿಹಾಸ, ಪರಂಪರೆಯನ್ನು ಹೊಂದಿದೆ.

ಭಾರತ ರತ್ನ ಸರ್‌. ಎಂ.ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ನಾಡೋಜ ಮುನಿವೆಂಕಟಪ್ಪನತನಂಹ ಸಾಧಕರು ಹುಟ್ಟಿ ಬೆಳೆದಿರುವ ಜಿಲ್ಲೆಯಲ್ಲಿ ಗೋಕಾಕ್‌ ಚಳವಳಿಗೆ ಕೊಡುಗೆ ನೀಡಿದೆ. ರಾಜ್‌ ಕುಮಾರ್‌, ಹಿರಿಯ ನಟ ದಿ.ಅಂಬರೀಶ್‌ ಜಿಲ್ಲೆಯಲ್ಲಿ ಕನ್ನಡ ಪರ ಹೋರಾಟಕ್ಕೆ ಆಗಮಿಸಿದ್ದಾರೆ.  ಜೊತೆಗೆ ಅನೇಕ ಸಾಹಿತ್ಯ ದಿಗ್ಗಜರು, ಚಿಂತಕರು, ಹೋರಾಟಗಾರರ ಬೀಡಾಗಿರುವ ಜಿಲ್ಲೆಯಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ ಕಾಣದೇ ತೀವ್ರ ನಿರಾಸೆಯ ಕಾರ್ಮೋಡ ಕವಿದಿದೆ.

ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಕಲಾ ಪ್ರಕಾರಗಳ ದರ್ಶನ ಮಾಡಿಸಬಹುದು: ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದಿಕ್ಕಿನಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ, ಭಾಷೆಯ ಕುರಿತು ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಕಾವ್ಯ ಕಮ್ಮಟ, ಜಿಲ್ಲೆಯ ನಾಡು ನುಡಿಗೆ ಶ್ರಮಿಸಿದ ಸಾಧಕರನ್ನು ಗರುತಿಸಿ ಪ್ರೋತ್ಸಾಹಿಸುವುದು, ಕನ್ನಡ ರಾಜ್ಯೋತ್ಸವ ಪಡೆದ ಸಾಧಕರನ್ನು ಸನ್ಮಾನಿಸುವುದು, ಕನ್ನಡ ಕವಿಗಳ ಪುಸ್ತಕಗಳ ಸಂತೆ ಅಥವ ಪ್ರದರ್ಶನ ಏರ್ಪಡಿಸುವುದು, ಜಿಲ್ಲೆಯ ಸಾಂಸ್ಕೃತಿಕ ಕಲಾವಿದರ ಮೂಲಕ ಜಿಲ್ಲೆಯ ಪರಂಪರೆಯಿಂದ ಬಂದಿರುವ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಜಿಲ್ಲೆಯ ಇತಿಹಾಸ, ಪರಂಪರೆ ಸಾರುವ ಸ್ತಬ್ಧಚಿತ್ರಗಳು ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಸುವರ್ಣ ಕರ್ನಾಟಕ ಮಹೋತ್ಸವ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಅವಕಾಶ ಇದ್ದರೂ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಸಿದ್ಧತೆಗಳ ಕಡೆಗೆ ಗಮನ ಹರಿಸದೇ ಇರುವುದು ಅನುದಾನದ ಕೊರತೆಯೋ ಅಥವ ಇಚ್ಛಾಶಕ್ತಿ ಕೊರತೆಯೋ ಎಂಬುದಕ್ಕೆ ಜಿಲ್ಲಾಡಳಿತವೇ ಉತ್ತರಿಸಬೇಕಿದೆ.

ಚಾಲಕರಿಗಿರುವ ಕನ್ನಡ ಪ್ರೀತಿ ಸಂಘಟಗಳಿಗಿಲ್ಲ!: ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಕಣ್ಮರೆ ಆಗುತ್ತಿವೆ. ಅಲಲ್ಲಿ ಕನ್ನಡಪರ ಸಂಘಟನೆಗಳಗಿಂತ ತಿಂಗಳ ಪೂರ್ತಿ ಆಟೋ ಚಾಲಕರ ಸಂಘಗಳು ರಾಜ್ಯೋತ್ಸವವನ್ನು ಆಚರಿಸಿ ಕನ್ನಡಾಭಿಮಾನ ತೋರಿಸುತ್ತಿದ್ದಾರೆ. ಆದರೆ ಆಗಾಗ ಅಪರೂಪಕ್ಕೆ ಕನ್ನಡ ಧ್ವಜ ಹಿಡಿದು ಬರುವ ಕನ್ನಡಪರ ಸಂಘಟನೆಗಳು ಕನಿಷ್ಠ ನವೆಂಬರ್‌ ತಿಂಗಳ ರಾಜ್ಯೋತ್ಸದಂದು ಕೂಡ ಕಾರ್ಯಕ್ರಮಗಳ ನಡೆಸಲು ಶಕ್ತಿ ಕಳೆದುಕೊಂಡಿವೆ. ಸುವರ್ಣ ಕರ್ನಾಟಕ ಮಹೋತ್ಸವ ಆಚರಣೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ತರುವಲ್ಲಿ ಕೂಡ ಕನ್ನಡಪರ ಸಂಘಟನೆಗಳ ಬದ್ಧತೆಯನ್ನು ಕಳೆದುಕೊಂಡಿವೆ.

ಜಿಲ್ಲಾಡಳಿತ ಸಮಿತಿ ರಚಿಸಬಹುದಿತ್ತು: ಕೋಡಿರಂಗಪ್ಪ : ಜಿಲ್ಲೆಯಲ್ಲಿ ಸುವರ್ಣ ಕರ್ನಾಟಕ ಮಹೋತ್ಸವ ಆಚರಣೆಗೆ ಸರ್ಕಾರ ವರ್ಷಪೂರ್ತಿ ಕಾರ್ಯ ಕ್ರಮಗಳ ಆಯೋಜನೆ ಸೂಚಿಸಿದೆ. ಆದರೆ ಇದುವರೆಗೂ ನಮ್ಮ ಗಮನಕ್ಕೆ ಬಂದ ರೀತಿ ಯಲ್ಲಿ ಯಾವ ಕಾರ್ಯಕ್ರಮಗಳ ರೂಪರೇಷ ಆಗಿಲ್ಲ. ಜಿಲ್ಲಾಡಳಿತ ಜಿಲ್ಲೆಯಲ್ಲಿ ಸುವರ್ಣ ಮಹೋ ತ್ಸವ ಕಾರ್ಯಕ್ರಮ ಭಾಗವಾಗಿ ಸಾಹಿತಿಗಳು, ಚಿಂತಕರು, ಕನ್ನಡಪ್ರೇಮಿಗಳನ್ನು ಒಳಗೊಂಡ ಸಮಿತಿ ರಚಿಸಿ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಾಲೆಗಳಲ್ಲಿ ಸುವರ್ಣ ಮಹೋ ತ್ಸವ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆಂದು ಕಸಾಪ ಜಿಲ್ಲಾಧ್ಯಕ್ಷರಾದ ಶಿಕ್ಷಣ ತಜ್ಞ ಡಾ.ಕೋಡಿರಂಗಪ್ಪ ಭಾನುವಾರ ಉದಯವಾಣಿಗೆ ತಿಳಿಸಿದರು.

ಜಿಲ್ಲೆಗೆ ಉಸ್ತುವಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ! : ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎನ್‌.ಮಂಜುಳಾ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮವಾಗಿ ಆಚರಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಿಲ್ಲೆಗೆ ಕೊಡಬಹುದಿತ್ತು. ಆ ಮೂಲಕ ವರ್ಷಪೂರ್ತಿ ಆಚರಿಸಿ ಇಂದಿನ ವಿದ್ಯಾರ್ಥಿ ಯುವ ಪೀಳಿಗೆಗೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಸಾಹಿತ್ಯವನ್ನು ಪರಿಚಯಿಸುವ ದಿಕ್ಕಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬಹುದಿತ್ತು. ಆದರೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವವನ್ನು ಸಮಪರ್ಕವಾಗಿ ಆಚರಿಸದೇ ಶಿಷ್ಟಚಾರಕ್ಕೆ ಆಚರಿಸಿ ಕೈ ತೊಳೆದುಕೊಂಡಿದ್ದು, ಇನ್ನೂ ಸುವರ್ಣ ಮಹೋತ್ಸವ ಆಚರಣೆ ವರ್ಷವೀಡಿ ಆಚರಿಸುತ್ತಾ ಎಂಬುದು ಕೆಲ ಕನ್ನಡ ಪ್ರೇಮಿಗಳು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತಾಗಿದೆ.

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.