ದಿವ್ಯಾಂಗ ಮಕ್ಕಳಿಗೆ ಕಲಿಕಾ, ಆಹಾರ ಸಾಮಗ್ರಿ ವಿತರಣೆ
Team Udayavani, Jul 10, 2021, 8:18 PM IST
ಗೌರಿಬಿದನೂರು: ದಿವ್ಯಾಂಗರಿಗೆವಿಶೇಷ ಸೌಲಭ್ಯ, ಕಾಳಜಿ, ಅಕ್ಕರೆನೀಡಬೇಕು ಎಂದು ನಗರಸಭೆ ಅಧ್ಯಕ್ಷೆಗಾಯತ್ರಿ ತಿಳಿಸಿದರು.ನಗರದ ಅರುಣೋದಯ ವಿಶೇಷಶಾಲಾ ಮಕ್ಕಳಿಗೆ ಕೇಂದ್ರ ಸರ್ಕಾರದನ್ಯಾಷನಲ್ ಟ್ರಸ್ಟ್‌ನಿಂದ ನೀಡಿದಕಲಿಕಾ ಸಾಮಗ್ರಿ, ಪ್ರಜ್ಞಾ ಟ್ರಸ್ಟ್‌ನಿಂದನೀಡಿರುವ ಆಹಾರದ ಸಾಮಗ್ರಿವಿತರಿಸಿ ಮಾತನಾಡಿದರು.
ದಿವ್ಯಾಂಗರಿಗೆ ಸಾಮಾನ್ಯ ಮಕ್ಕಳಿಗಿಂತಭಿನ್ನವಾದ ಆಟ, ಪಾಠಕ್ಕೆ ಸಂಬಂಧಿಸಿದಚಟುವಟಿಕೆ ಕೈಗೊಳ್ಳಬೇಕಾಗಿದೆಎಂದು ವಿವರಿಸಿದರು.ನಗರಸಭೆ ಆಯುಕ್ತ ಸತ್ಯನಾರಾಯಣ ಮಾತನಾಡಿ, ಇಂತಹ ಮಕ್ಕಳಆರೈಕೆ ತುಂಬಾ ಕಷ್ಟ, ಈ ಕಾರ್ಯಮಾಡುವ ಸ್ಥಳೀಯ ಸಂಸ್ಥೆಗಳಲ್ಲದೆ,ಸಮುದಾಯವೂಕೈ ಜೋಡಿಸಬೇಕು.
ನಗರಸಭೆಯಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ನೀಡಲುಪ್ರಯತ್ನಿಸುವುದಾಗಿ ತಿಳಿಸಿದರು.ಪ್ರಜ್ಞಾ ಟ್ರಸ್ಟಿನ ಸಂಸ್ಥಾಪಕಯೋಜನಾ ನಿರ್ದೇಶಕ ಎನ್.ನಾಗರಾಜ್ ಮಾತನಾಡಿ, 1 ರಿಂದ10 ವರ್ಷದ ಮಕ್ಕಳಿಗೆ, ಅವರವಯೋಗುಣದ ಆಧಾರದಲ್ಲಿ ವಿವಿಧರೀತಿಯ ಕಲಿಕಾ ಸಾಮಗ್ರಿಗಳನ್ನುವಿತರಿಸಲಾಗಿದೆ.
ಕೋವಿಡ್-19ನಕ್ಲಿಷ್ಟ ಸಂದರ್ಭದಲ್ಲಿ ಮಕ್ಕಳು ವಿಶೇಷಶಾಲೆಗೆ ಬರಲು ಸಾಧ್ಯವಿಲ್ಲದ ಈಸಂದರ್ಭದಲ್ಲಿ ಅವರ ಮನೆಗಳಲ್ಲಿಯೇ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಮಗ್ರಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.ಆಗಿಂದಾಗ್ಗೆ ಮಕ್ಕಳ ಮನೆಗಳಿಗೆನಮ್ಮ ಸಿಬ್ಬಂದಿ ಭೇಟಿ ನೀಡಿ ಸಾಮಗ್ರಿಯನ್ನು ಬಳಸುವ ವಿಧಾನ ಮತ್ತುಅದರಿಂದಾಗುವಉಪಯೋಗಗಳನ್ನುತಿಳಿಸುವುದರ ಜೊತೆಗೆ ಫಿಸಿಯೋಥೆರಪಿ, ಆಪ್ತ ಸಮಾಲೋಚನೆ ಸೇವೆನೀಡುವುದಾಗಿ ತಿಳಿಸಿದರು.
ವೀರಂಡಹಳ್ಳಿ ವಾಪ್ತಿಯನಗರಸಭಾ ಸದಸ್ಯೆ ರಂಗಮ್ಮ ಮಕ್ಕಳಿಗೆಹಿತವಚನ ತಿಳಿಸಿದರು.ನಗರಸಭೆ ಕಂದಾಯ ನಿರೀಕ್ಷಕಸಂತೋಷ್, ಆರೋಗ್ಯ ನಿರೀಕ್ಷಕಸುರೇಶ್, ಮುಖಂಡರಾದ ಸುನಿಲ್,ಮಹೇಶ್, ಶಾಲೆಯ ಸಿಬ್ಬಂದಿಪೂಜಾ,ನವೀನಾ, ಶಾಂತಮ್ಮ, ಪೋಷಕರುಹಾಜರಿದ್ದರು. ಪ್ರಜ್ಞಾ ಟ್ರಸ್ಟಿನ ಅಧ್ಯಕ್ಷೆಎಸ್.ವಿಜಯಲಕ್ಷಿ ¾à ಅತಿಥಿಗಳಿಗೆವಂದನೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.