ಪ್ರಾದೇಶಿಕ ಪಕ್ಷಗಳನ್ನು ಬಲಿಷ್ಠಗೊಳಿಸಲು ಶ್ರಮ ವಹಿಸಿ
Team Udayavani, Jul 22, 2021, 6:37 PM IST
ಚಿಕ್ಕಬಳ್ಳಾಪುರ: ಮುಂಬರುವ ಜಿಲ್ಲಾ ಹಾಗೂತಾಪಂಗಳ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷದಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಕರೆ ನೀಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಇತ್ತೀಚೆಗೆಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರುಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು,ಪಕ್ಷದ ಮುಖಂಡರೊಂದಿಗೆ ಜಿಪಂ ತಾಪಂಚುನಾವಣೆಯ ಹಿನ್ನೆಲೆಯಲ್ಲಿ ಏರ್ಪಡಿಸಿದ್ದಸಭೆಯಲ್ಲಿ ಮಾತನಾಡಿ, ಬರುವ ಜಿಪಂ ಮತ್ತುತಾಪಂಚುನಾವಣೆವಿಧಾನಸಭೆಯಚುನಾವಣೆಗೆಸೆಮೀಫೆ„ನಲ್ ಆಗಿದ್ದು ಪಕ್ಷ ಮುಖಂಡರುಮತ್ತು ಕಾರ್ಯಕರ್ತರು ಚುನಾವಣೆಯನ್ನುಸವಾಲಾಗಿ ಸ್ವೀಕರಿಸಿ ಹೆಚ್ಚಿನ ಅಭ್ಯರ್ಥಿಗಳನ್ನುಗೆಲ್ಲಿಸಲು ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕಪ್ರಯತ್ನ ಮಾಡಬೇಕೆಂದು ತಾಕೀತು ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳುಜನರ ಹಿತವನ್ನು ಕಡೆಗಣಿಸಿದ್ದು, ಪ್ರಾದೇಶಿಕಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿಸಾಧ್ಯವಾಗಲಿದೆ ಎಂಬುದು ಈಗಾಗಲೇಸಾಬೀತಾಗಿದೆ ಪಶ್ಚಿಮ ಬಂಗಾಳ ಮತ್ತುತಮಿಳುನಾಡಿನ ಮಾದರಿಯಲ್ಲಿ ರಾಜ್ಯದಲ್ಲಿ ಸಹಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವಸಲುವಾಗಿ ಮುಂದಿನ ತಿಂಗಳು ರಾಜ್ಯಾದ್ಯಂತಪ್ರವಾಸವನ್ನು ಕೈಗೊಂಡು ಸಂಘಟನೆಮಾಡುವುದಾಗಿ ತಿಳಿಸಿದರು.
130 ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಕಲ್ಪಮಾಡಿ: ಮುಂಬರುವ ವಿಧಾನಸಭೆಯಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರ್ಯವಾಗಿಅಧಿಕಾರವನ್ನು ನಡೆಸಲು 130 ಅಭ್ಯರ್ಥಿಗಳನ್ನುಗೆಲ್ಲಿಸುವ ನಿಟ್ಟಿನಲ್ಲಿ ಧೃಢಸಂಕಲ್ಪ ಮಾಡಿದ್ದು,ಜೆಡಿಎಸ್ ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದೆ.ಅವರ ಹಿತಕಾಯಲು ಆದ್ಯತೆ ನೀಡಲಾಗುವುದು.ಬರುವ ಚುನಾವಣೆಗಳಲ್ಲಿ ಪಕ್ಷದ ಶಕ್ತಿಯನ್ನುತೋರಿಸಿ ರಾಜ್ಯ ವಿಧಾನಸಭೆಯಲ್ಲಿ 130ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯನ್ನು ಸಾಧಿಸಲು ಸಂಕಲ್ಪ ಮಾಡಬೇಕೆಂದರು.
ಸಭೆಯಲ್ಲಿ ಜಿಪಂ ಚುನಾವಣೆಗಳಲ್ಲಿ ಸ್ಥಳೀಯಮಟ್ಟದಲ್ಲಿ ಜನಸಾಮಾನ್ಯರೊಂದಿಗೆ ಉತ್ತಮವಾಗಿ ಸಂಬಂಧವನ್ನು ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಮುಖಂಡರುಒತ್ತಾಯಿಸಿದರು.ರಾಜ್ಯ ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕಕೆ.ಪಿ. ಬಚ್ಚೇಗೌಡ, ಅಜ್ಜವಾರ್ ರೆಡ್ಡಿ,ಜಿಪಂ ಸ್ಥಾಯಿಸಮಿತಿಯ ಮಾಜಿ ಅಧ್ಯಕ್ಷ ರಾಜಕಾಂತ್,ಜಿಲ್ಲಾಧ್ಯಕ್ಷ ವಕೀಲ ಮುನೇಗೌಡ, ವಿಧಾನಪರಿಷತ್ ಸದಸ್ಯರಾದ ಸ್ವಾಮಿ, ಬೋಜೇಗೌಡ,ಅಪ್ಪಾಜಿ ಗೌಡ, ಇಂಚರ ಗೋವಿಂದರಾಜು,ಮಾಜಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿಚೌಡರೆಡ್ಡಿ, ಚಿಕ್ಕಬಳ್ಳಾಪುರ ಜಿಪಂ ಮಾಜಿ ಅಧ್ಯಕ್ಷನರಸಿಂಹಮೂರ್ತಿ, ಮುಷ್ಟೂರು ಶ್ರೀಧರ್,ಕಣಜೇನಹಳ್ಳಿ ರಾಮಣ್ಣ, ಜಾತವಾರಹೊಸಹಳ್ಳಿಜಗ್ಗಿ,ಮುಕ್ತ ಮುನಿಯಪ್ಪ, ಕೊಲುವನಹಳ್ಳಿಮುನಿರಾಜು, ಗುಡಿಬಂಡೆಯ ಅಪ್ಸರ್,ಮಂಜುನಾಥರೆಡ್ಡಿ, ಬಾಗೇಪಲ್ಲಿ ತಾಲೂಕಿನಜೆಡಿಎಸ್ ಅಧ್ಯಕ್ಷ ಸೂರ್ಯನಾರಾಯಣರೆಡ್ಡಿಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.