ವೃದ್ಧಾಪ್ಯ ವೇತನ ಬೇಡವೆಂದ ವೃದ್ದೆ
ಸರ್ಕಾರದ ಮಾಸಿಕ ಪಿಂಚಣಿ ತಿರಸ್ಕರಿಸಿದ ಗುಡಿಬಂಡೆ ಪಟ್ಟಣದ ನಿವಾಸಿ ವೃದ್ದೆ ರಾಜಮ್ಮ
Team Udayavani, Aug 6, 2021, 5:26 PM IST
ಗುಡಿಬಂಡೆ : ಸರ್ಕಾರದಿಂದ ಯಾವುದೇ ಸೌಲಭ್ಯ ಬಂದರೂ ಅದರಲ್ಲಿ ಒಂದು ರೂಪಾಯಿ ಬಿಡದೆ ಪಡೆಯುವಂತವರು ಇರುವ ಈ ಕಾಲದಲ್ಲಿ ಪಟ್ಟಣದ ವೃದ್ಧೆ ರಾಜಮ್ಮ ನನಗೆ ಮಾಸಿಕ ವೃದ್ಧಾಪ್ಯ ಪಿಂಚಣಿ ಬೇಡವೆಂದು ತಿರಸ್ಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪಟ್ಟಣದ ಸೊಪ್ಪಿನಪೇಟೆ ನಿವಾಸಿಯಾದ ರಾಜಮ್ಮ ಕೋಂ ಕದಿರಪ್ಪ ಎಂಬುವರ ಮನೆಯ ಬಳಿಗೆ ಕಂದಾಯ ಇಲಾಖೆಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ, ಆಕೆಯನ್ನು ಇನ್ನೂ ಏಕೆ ನೀವು ವೃದ್ಧಾಪ್ಯ ವೇತನ ಮಾಡಿಸಿಕೊಂಡಿರುವುದಿಲ್ಲ, ಈಗ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇವೆ, ದಾಖಲೆಗಳನ್ನು ನೀಡಿ, ನಿಮಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುತ್ತೇವೆ ಎಂದು ಕೇಳಿದಾಗ, 80 ವರ್ಷದ ರಾಜಮ್ಮ ನನಗೆ ಸರ್ಕಾರದ ಪಿಂಚಣಿ ಬೇಕಾಗಿಲ್ಲ, ನನ್ನನ್ನು ದೇವರು ಇನ್ನೂ ಗಟ್ಟಿಯಾಗೇ ಇಟ್ಟಿದ್ದಾನೆ, ನನಗೆ ಏನಾದರೂ ಹಣದ ಅವಶ್ಯಕತೆ ಬಂದಲ್ಲಿ ನನ್ನ ಮಕ್ಕಳು ನೀಡುತ್ತಾರೆ, ಇನ್ನೂ ನನಗೆ ಇರುವ ಜಮೀನಿನಲ್ಲಿ ಅಲ್ಪ ಸ್ವಲ್ಪ ಬರುತ್ತದೆ, ಇನ್ನೂ ಏಕೆ ಬೇಕೆ ನನಗೆ ಸರ್ಕಾರದ ಪಿಂಚಣಿ, ಅದನ್ನು ಬೇರೆ ಬಡ ಕುಟುಂಬದವರಿಗೆ ನೀಡಿ ಎಂದು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೆಚ್ಚುಗೆ
ಈಕೆ ಪಿಂಚಣಿಯನ್ನು ತಿರಸ್ಕರಿಸುತ್ತಿರುವಾಗ ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ, ಎಷ್ಟೋ ಜನ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅಧಿಕಾರಿಗಳ ಕಣ್ಣನ್ನು ಮರೆ ಮಾಚಿ, ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವವರು ಒಂದೆಡೆಯಾದರೇ, ಇನ್ನು ಎಷ್ಟೋ ಜನ ಶ್ರೀಮಂತ ವರ್ಗದವರೇ ಎಲ್ಲರಿಗೂ ಬರುವ ಸೌಲಭ್ಯ ನನಗೂ ಸಹ ಬರಲಿ ಎಂದು ಅಧಿಕಾರಿಗಳಿಂದ ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು, ಪಿಂಚಣಿ ಪಡೆಯುತ್ತಿರುವ ಈ ಕಾಲದಲ್ಲಿ ಪಟ್ಟಣದ ರಾಜಮ್ಮ ನನಗೆ ಸರ್ಕಾರದಿಂದ ಬರುವ ಪಿಂಚಣಿ ಸೌಲಭ್ಯ ನನಗೆ ಬೇಡ ವೆಂದು ಸುದ್ಧಿಯಾಗಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಸಿಗ್ಬತುಲ್ಲಾ, ಗುಡಿಬಂಡೆ ಪಟ್ಟಣದ ರಾಜಮ್ಮ ಮಾದರಿಯಾಗಿರುವುದು ಸಂತಸ ಎಂದರು.
ಇದನ್ನೂ ಓದಿ : ಪ್ರವಾಹ ಸಂತೃಸ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ಹಂಚಿ: ಗೋವಿಂದ ಕಾರಜೋಳ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.