ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ
Team Udayavani, Sep 6, 2021, 4:29 PM IST
ಚಿಕ್ಕಬಳ್ಳಾಪುರ: ಶಿಕ್ಷಣ ಅಂದರೆ ವಿದ್ಯಾಭ್ಯಾಸ ಮಾತ್ರಅಲ್ಲ, ಹೆಚ್ಚು ಅಂಕ ಪಡೆದವರಷ್ಟೇ ಜೀವನದಲ್ಲಿ ಸಫಲರಾಗುತ್ತಾರೆ ಎಂದೂ ಅಲ್ಲ, ವಿದ್ಯಾರ್ಥಿಗಳಲ್ಲಿರುವ ಅಭಿರುಚಿ ಮತ್ತು ಸೂಕ್ತ ಗುಣ ಗುರುತಿಸಿ ಮಾರ್ಗದರ್ಶನನೀಡುವುದೇ ನಿಜವಾದ ಶಿಕ್ಷಣ ಎಂದು ಆರೋಗ್ಯಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ,ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯು ಭಾರತ ರತ್ನಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಉದ್ಘಾಟಿಸಿ ಮಾತನಾಡಿದರು.
ಜನ್ಮ ನೀಡುವುದು ತಂದೆ ತಾಯಿ, ಜೀವನ ನೀಡುವುದು ಶಿಕ್ಷಕರು. ನಮ್ಮದು ಗುರು ಪರಂಪರೆಯ ದೇಶ,ಶಿಕ್ಷಣ ವ್ಯವಸ್ಥೆ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣದಿಂದ ಆಗಲ್ಲ, ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು,ಶಿಕ್ಷಕರು ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡಲುಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದುವಿವರಿಸಿದರು.ಸಮ ಸಮಾಜದ ಕಲ್ಪನೆ, ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ಶಾಂತಿ ತೋಟದ ಕಲ್ಪನೆಯವಿಚಾರ ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನ ಆಗುವಂತಹ ಶಿಕ್ಷಣ ನೀಡಬೇಕು ಎಂದುವಿವರಿಸಿದರು.
ಜ್ಞಾನದಿಂದ ಮಾತ್ರ ನೆಮ್ಮದಿ: ಕೇವಲ ಹಣದಿಂದನೆಮ್ಮದಿ, ಸಂತೋಷ ಸಿಗುವುದಿಲ್ಲ, ಅದಕ್ಕೆ ಜ್ಞಾನದಅವಶ್ಯಕತೆ ಇದೆ. ಅಂತಹ ಜ್ಞಾನವನ್ನು ನೀಡುವವರುಶಿಕ್ಷಕರು, ವೈದ್ಯ ವೃತ್ತಿಯಂತೆ ಶಿಕ್ಷಕ ವೃತ್ತಿಯೂ ಅತಿಮುಖ್ಯವಾದದ್ದು. ಆದ್ದರಿಂದ ವೃತ್ತಿ ಮತ್ತು ಪ್ರವೃತ್ತಿಎÇÉಾ ಶಿಕ್ಷಣವೇ ಎಂದು ನಂಬಿದ್ದ ಮಾಜಿ ರಾಷ್ಟ್ರಪತಿ,ಭಾರತ ರತ್ನ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನ ಆಚರಿಸುತ್ತಿರುವುದುಅರ್ಥಪೂರ್ಣವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಕರನ್ನು ನೋಡಿನಾವು ಹೀಗೇ ಆಗಬೇಕು ಎನ್ನುವ ಭಾವನೆ ಮಕ್ಕಳಲ್ಲಿಮೂಡಬೇಕು, ಅಂತಹವರು ಶ್ರೇಷ್ಠ ಶಿಕ್ಷಕರಾಗುತ್ತಾರೆ.ಶಿಕ್ಷಣ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾವಣೆ ಆಗಬೇಕು ಎನ್ನುವ ನಿಟ್ಟಿನಲ್ಲಿ 2020ರ ರಾಷ್ಟ್ರೀಯ ಶಿಕ್ಷಣನೀತಿ ಜಾರಿಯಾಗುತ್ತಿದೆ.
ಎಲ್ಲರಿಗೂ ಸಮಾನ ಅವಕಾಶನೀಡುವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿನ ಹೊಸ ಕಲಿಕಾ ವಿಧಾನಗಳಿಗೆ ಹತ್ತಿರವಾಗಿರುವಶಿಕ್ಷಣ ನೀತಿಯಾಗಲಿದೆ ಎಂದು ಹೇಳಿದರು.
ಎಲ್ಲಾ ತರಗತಿ ಶುರುವಾಗುವಂತಾಗಲಿ: ಸೆ.6 ರಿಂದಆರನೇ ತರಗತಿಗೂ ಮೇಲ್ಪಟ್ಟ ಶಾಲೆಗಳು ಆರಂಭವಾಗುತ್ತಿವೆ, ತಮ್ಮ ಸ್ವಂತಮಕ್ಕಳನ್ನು ನೋಡಿಕೊಳ್ಳುವಂತೆಶಿಕ್ಷಕರು ಜಾಗೃತಿ ವಹಿಸಬೇಕು, ಎಲ್ಲಾ ಮಕ್ಕಳುಕೋವಿಡ್ ಮಾರ್ಗಸೂಚಿ ಪಾಲಿಸುವಂತೆನೋಡಿಕೊಳ್ಳಬೇಕು, ಆನ್‌ಲೈನ್‌ಗಿಂತ ಭೌತಿಕತರಗತಿಗಳೇ ಕಲಿಕೆಗೆ ಹೆಚ್ಚು ಪರಿಣಾಮಕಾರಿ, ಎಲ್ಲಾತರಗತಿಗಳು ಭೌತಿಕವಾಗಿ ನಡೆಯುವಂತಹವಾತಾವರಣ ಬೇಗ ಬರಲಿ ಎಂದು ಹಾರೈಸಿದರು.
ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವುಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಪಂಸಿಇಒ ಪಿ.ಶಿವಶಂಕರ್, ಎಡೀಸಿ ಎಚ್.ಅಮರೇಶ್,ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ತಹಶೀಲ್ದಾರ್‌ಗಣಪತಿಶಾಸ್ತ್ರಿ, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷಡಿ.ಎಸ್.ಆನಂದರೆಡ್ಡಿ, ಪಟ್ರೇನಹಳ್ಳಿ ಗ್ರಾಪಂ ಅಧ್ಯಕ್ಷಟಿ.ಎಸ್ ಜಯಚಂದ್ರ, ಸರ್ಕಾರಿ ನೌಕರರ ಸಂಘದಅಧ್ಯಕ್ಷ ಜಿ.ಹರೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಜಿÇÉಾಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷನಾರಾಯಣಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದಅಧ್ಯಕ್ಷಕೆಂಪಣ್ಣ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.