ಜೀತದಾಳುಗಳ ಮಕ್ಕಳಿಗೆ ಶಿಕ್ಷಣ ಅಗತ್ಯ
Team Udayavani, Mar 8, 2019, 7:16 AM IST
ಬಾಗೇಪಲ್ಲಿ: ತಾಲೂಕು ಹೋರಾಟಗಳ ಕ್ರಾಂತಿಯ ನೆಲೆಯಾಗಿರುವುದರಿಂದ ಹೆಚ್ಚು ಜೀತದಾಳುಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಹಾಗೂ ಜೀವಿಕ ಸಂಸ್ಥಾಪಕ ಕಿರಣ್ ಕಮಲ್ ಪ್ರಸಾದ್ ತಿಳಿಸಿದರು.
ಪಟ್ಟಣದ ತಾಪಂ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ ಜೀವಿಕ, ಸಂಘಟನೆಯ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕಿನ 444 ಜನ ಜೀತದಾಳುಗಳಿಗೆ ಜೀತ ವಿಮುಕ್ತಿ ಬಿಡುಗಡೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಅನೇಕ ದಲಿತ ಚಳುವಳಿ, ಕಮ್ಯೂನಿಸ್ಟ್ ಚಳಿವಳಿ, ರೈತ ಚಳುವಳಿ ಮುಂತಾದ ಹೋರಾಟಗಳ ನೆಲೆ ಬೀಡಾಗಿದೆ. ಇಲ್ಲಿ ಅನೇಕ ರಾಷ್ಟ್ರ ಮಟ್ಟದ ನಾಯಕರು ಜನ್ಮ ತಾಳಿರುವುದು ವಿಶೇಷ.
1500ಕ್ಕೂ ಹೆಚ್ಚು ಬಿಡುಗಡೆ ಪತ್ರ: ಕ್ರಾಂತಿಯ ನೆಲೆಯಲ್ಲಿ ರಾಜ್ಯದಲ್ಲಿಯೇ ದೊಡ್ಡ ಮಟ್ಟದಲ್ಲಿ ಜೀತದಾಳುಗಳನ್ನು ಗುರುತಿಸಿ ಅವರಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಣೆ ಮಾಡಲು ಕಾರಣರಾದ ಉಪ ವಿಭಾಗಾಧಿಕಾರಿಗಳ ಸತತ ಪರಿಶ್ರಮ ಮತ್ತು ಇಲ್ಲಿನ ಸ್ಥಳೀಯ ಶಾಸಕರ ಬೆಂಬಲದಿಂದ 1500 ಕ್ಕೂ ಹೆಚ್ಚು ಜೀತದಾಳುಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಲು ಸಾಧ್ಯವಾಯಿತು.
ನಿಮ್ಮಂತೆ ನಿಮ್ಮ ಮಕ್ಕಳು ಆಗದಿರಲಿ: ಯಾರೂ ಜೀತಕ್ಕೆ ಇರಕೂಡದು ಎಂದು ಕಾನೂನಿನಲ್ಲಿ ಸ್ಪಷ್ಟ ಆದೇಶವಿದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜೀತದಾಳಿಗಳಿದ್ದಾರೆ. ಆದರೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ಕಾಯ್ದೆ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿ ಆಗದ ಕಾರಣ ಇನ್ನು ಜೀತದಾಳುಗಳಿದ್ದಾರೆ.
ಈಗ ನೀವು ಪ್ರಮಾಣ ಪತ್ರ ಪಡೆಯುತ್ತಿದ್ದೀರಿ, ಸರ್ಕಾರಿ ಸೌಲಭ್ಯಗಳು ಸಿಗಬೇಕಾದರೆ ಸಂಘಟನೆ ಬಲಿಷ್ಠ ರೀತಿಯಲ್ಲಿ ಕಟ್ಟಬೇಕಾಗಿದೆ. ನಿಮ್ಮ ತರಹ ನಿಮ್ಮ ಮಕ್ಕಳು ಆಗಬಾರದು. ಕನಿಷ್ಟ 10- 12 ನೇ ತರಗತಿಯವರೆ ಶಿಕ್ಷಣ ಕೊಡಿಸಿದಾಗ ಆಗ ಮಾತ್ರ ಜೀತ ಪದ್ಧತಿ ನಿರ್ಮೂಲನೆ ಸಾಧ್ಯ ಎಂದರು.
ಚಿಕ್ಕಬಳ್ಳಾಪುರದ ಉಪವಿಭಾಗಾಧಿಕಾರಿ ಶಿವಸ್ವಾಮಿ ಮಾತನಾಡಿ, ಜೀತ ಪದ್ಧತಿ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರ 1975ರಲ್ಲಿ ಕಾನೂನು ಜಾರಿ ಮಾಡಿದರೂ ಇನ್ನೂ ಹಲವು ಕಡೆ ಜೀತ ಪದ್ಧತಿ ಜೀವಂತವಾಗಿರುವುದು ಬೇಸರದ ಸಂಗತಿ ಎಂದರು.
ಇಂತಹ ಅನಿಷ್ಠ ಜೀತ ಪದ್ಧತಿ ತೊಲಗಿಸಬೇಕಾದರೆ ನಿಮ್ಮಲ್ಲಿ ಮೊದಲು ಜಾಗೃತಿ ಮೂಡಿಸಬೇಕು. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಆಗಬೇಕು. ಆಗ ಸ್ವಲ್ಪ ಪ್ರಮಾಣದಲ್ಲಿ ತಡೆಯಬಹುದು. ಜೀತದಾಳುಗಳಿಗೆ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸಿನನ್ನ ಮನೆಯಿಂದ ನೀಡುವುದಿಲ್ಲ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಿದ್ದೇನೆ ಎಂದರು.
ತಹಶೀಲ್ದಾರ್ ವಿ.ನಾಗರಾಜ, ಗ್ರೇಡ್-2 ತಹಶೀಲ್ದಾರ್ ಸಿಬ್ದತುಲ್ಲಾ, ಜೀವಿಕ ಸಂಘಟನೆಯ ರಾಜ್ಯ ಸಂಘಟನೆ ಸಂಚಾಲಕ ವಿ.ಗೋಪಾಲ್, ಜಿಲ್ಲಾ ಸಂಚಾಲಕ ಬೀಚಗಾನಹಳ್ಳಿ ನಾರಾಯಣಸ್ವಾಮಿ, ತಾಲೂಕು ಸಂಚಾಲಕ ನಾರಾಯಣಸ್ವಾಮಿ, ಒಕ್ಕೂಟದ ಅಧ್ಯಕ್ಷ ಅಂಜಿನಪ್ಪ, ಪದಾಧಿಕಾರಿಗಳಾದ ರತ್ನಮ್ಮ, ಲಕ್ಷ್ಮೀ, ಹೊಸಹುಡ್ಯ ನಾರಾಯಣಸ್ವಾಮಿ, ಗೂಳೂರು ಅಂಜಿನಪ್ಪ ಹನುಮಂತು, ಅಮರಾವತಿ, ಚೆನ್ನರಾಯಪ್ಪ, ಗಂಗಹನುಮಯ್ಯ, ಶಿವಣ್ಣ, ಮಂಜುಳಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.