ಸಾಮಾನ್ಯ ಸಭೆ ಮುಂದೂಡಿದ ನಗರಸಭಾಧ್ಯಕ್ಷೆ
Team Udayavani, Feb 25, 2023, 3:08 PM IST
ಶಿಡ್ಲಘಟ್ಟ: ನಗರಸಭೆಯಲ್ಲಿ ಸಾಮಾನ್ಯ ಸಭೆ ಆಯೋಜನೆ ಮಾಡುವ ವಿಚಾರದಲ್ಲಿ ಹೈಡ್ರಾಮಾ ನಡೆದು ನಗರಸಭೆಯ ಉಪಾಧ್ಯಕ್ಷರು-ಸದಸ್ಯರು ಪೌರಾಯುಕ್ತರ ಮೇಲೆ ವಾಗ್ಧಾಳಿ ನಡೆಸುವ ವೇಳೆಯಲ್ಲಿ ಸದಸ್ಯರೊಬ್ಬರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪೌರಾಯುಕ್ತ ತಿರುಗಿ ಬಿದ್ದ ಘಟನೆ ನಡೆಯಿತು.
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಮಧ್ಯಾಹ್ನ 12:15 ಗಂಟೆಗೆ ಕರೆಯಲಾಗಿತ್ತು. ಆದರೆ, ನಗರಸಭೆ ಸದಸ್ಯರು ತಮ್ಮ ಕಚೇರಿಯಲ್ಲಿ ಠರಾವು ಪುಸ್ತಕವನ್ನು ತರಿಸಿಕೊಂಡು ಬೆಳಿಗ್ಗೆ ನಡೆದ ಆಯವ್ಯಯ ಸಭೆಯಲ್ಲಿ ಅನೇಕ ಸದಸ್ಯರು ಭಾಗವಹಿಸಿಲ್ಲ. ನಗರಸಭಾ ಸದಸ್ಯರ ಆರೋಗ್ಯ ಸರಿಯಿಲ್ಲದ ಕಾರಣದಿಂದ ಸಭೆಯನ್ನು ಮುಂದೂಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ನಗರಸಭೆಯ ಸಭಾಂಗಣದಲ್ಲಿ ಸೇರಿದ್ದ 19 ಜನ ಸದಸ್ಯರು ಹಾಗೂ ಶಾಸಕ ವಿ.ಮುನಿಯಪ್ಪ ಅವರು ಸಾಮಾನ್ಯಸಭೆಯಲ್ಲಿ ಭಾಗಿಯಾಗಲು ಬಂದಿದ್ದರು. ನಿಗಧಿತ ಸಮಯಕ್ಕೆ ಸಭೆ ಆರಂಭಿಸದಿರುವ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ನಗರಸಭಾ ಅಧ್ಯಕ್ಷರು ಸಾಮಾನ್ಯ ಸಭೆಯನ್ನು ಮುಂದೂಡಲು ಸೂಚನೆ ನೀಡಿದ್ದಾರೆ. ಹೀಗಾಗಿ ಸಾಮಾನ್ಯ ಸಭೆ ನಡೆಸಲು ಆಗುವುದಿಲ್ಲವೆಂದು ಸಭೆಗೆ ತಿಳಿಸಿದರು.
ಹೈಕೋರ್ಟ್ ಕೋರ್ಟ್ ಆದೇಶವನ್ನು ಪಾಲಿಸಿ ಶಾಸಕರು ಸಹಿತ ನಾವೆಲ್ಲರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಬಂದಿದ್ದೇವೆ. ನಮ್ಮ ಹಾಜರಾತಿಯನ್ನು ದಾಖಲಿಸಿ ಎಂದು ನಗರಸಭೆ ಉಪಾಧ್ಯಕ್ಷ ಬಿ.ಅಫ್ಸರ್ ಪಾಷ ಮತ್ತು ಬಹುತೇಕ ಸದಸ್ಯರು ಪಟ್ಟುಹಿಡಿದರು. ನಗರಸಭಾಧ್ಯಕ್ಷರು ಒಮ್ಮೆ ಸಭೆಯನ್ನು ಮುಂದೂಡಿದರೆ ಪುನಃ ಸಭೆ ನಡೆಸಲು ಆಗುವುದಿಲ್ಲ. ನನ್ನ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಬೇಡಿ ಎಂದು ಪೌರಾಯುಕ್ತರು ಉತ್ತರಿಸಿದರು.
ನಗರಸಭಾ ಸದಸ್ಯ ಕೃಷ್ಣಮೂರ್ತಿ ಪೌರಕಾಯ್ದೆಯಡಿ ನಗರಸಭೆ ಉಪಾಧ್ಯಕ್ಷರಿಗೆ ಸಭೆ ನಡೆಸಲು ಅವಕಾಶವಿದೆ. ಅದನ್ನು ಜಾರಿಗೊಳಿಸಿ ಕೋರ್ಟ್ ಆದೇಶವನ್ನು ಉಲಂಘನೆ ಮಾಡುವುದು ಸೂಕ್ತವಲ್ಲ ಎಂದು ಕಿಡಿಕಾರಿದರು. ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಬೇಕು ಅದನ್ನು ಬಿಟ್ಟು ಅಧ್ಯಕ್ಷರ ಕಚೇರಿಯಲ್ಲಿ ಠರಾವು ಪುಸ್ತಕ ಮತ್ತು ಹಾಜರಾತಿ ಪುಸ್ತಕ ನೀಡಲು ಹಿರಿಯ ಅಧಿಕಾರಿಗಳ ಅನುಮತಿ ಪಡೆದಿದ್ದಾರೆ ಎಂದು ನಗರಸಭೆಯ ಸದಸ್ಯ ಮಂಜುನಾಥ್ (ಬಸ್) ಆಕ್ಷೇಪ ವ್ಯಕ್ತಪಡಿಸಿ ಇದೆಲ್ಲಾ ನಿಮ್ಮದೇ ಕಿತಾಪತಿ ನೀವು ಮಾಡುವ ಕೆಲಸಗಳಿಂದ ಜನ ನಮಗೆ ಬೈಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೊಂದಲದ ವಾತಾವರಣ ಸೃಷ್ಟಿ : ನಗರಸಭೆ ಉಪಾಧ್ಯಕ್ಷ ಮತ್ತು ಸದಸ್ಯರ ಒತ್ತಡಕ್ಕೆ ಮಣಿದ ಪೌರಾಯುಕ್ತರು ಹಿರಿಯ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ವಿವರಿಸಿದರು. ಅದಕ್ಕೆ ಪ್ರತಿಯಾಗಿ ಕೂಡಲೇ ನಗರಸಭೆ ಅಧ್ಯಕ್ಷರಿಗೆ ಪತ್ರಬರೆದು ಸಭೆ ನಡೆಸುವಂತೆ ಮಾಹಿತಿ ನೀಡಲು ಸೂಚನೆಯನ್ನು ನೀಡಿದರು.
ಈ ಪ್ರಕ್ರಿಯೆಗೆ ಸಮಯ ಮೀರಿತ್ತು. ಇದೇ ವೇಳೆ ನಗರಸಭಾ ಸದಸ್ಯ ಮಂಜುನಾಥ್ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿ ಪೋಲಿಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಈ ವೇಳೆಯಲ್ಲಿ ನಗರಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ನಗರಸಭಾ ಸದಸ್ಯರ ಮಧ್ಯೆ ಪ್ರವೇಶ ಮಾಡಿ ಗಲಾಟೆಯನ್ನು ಶಮನಗೊಳಿಸಿದರಲ್ಲದೆ ಸಾಮಾನ್ಯ ಸಭೆಯೂ ನಡೆಯದೆ ಸದಸ್ಯರು ವಾಪಸ್ ಮರಳಿದರು.
ಪೋಲಿಸರ ಸರ್ಪಗಾವಲು: ಸಾಮಾನ್ಯ ಸಭೆ ನಡೆವ ವೇಳೆಯಲ್ಲಿ ಸದಸ್ಯರ ನಡುವೆ ಗಲಾಟೆ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆರಕ್ಷಕ ವೃತ್ತ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಯುವ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಭಾವುಕರಾದ ನಗರಸಭಾಧ್ಯಕ್ಷೆ : ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕೆಲ ಸದಸ್ಯರು ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುವ ಕಾಯಕ ಮಾಡಿಕೊಂಡಿದ್ದಾರೆ. ನಾನು ಒಬ್ಬ ದಲಿತ ಮಹಿಳೆ ಆಗಿದ್ದರಿಂದ ನನ್ನ ಅವಧಿಯಲ್ಲಿ ಯಾವುದೇ ರೀತಿಯ ಪ್ರಗತಿ ಆಗಬಾರದೆಂದು ಷಡ್ಯಂತರ ಮಾಡುತ್ತಿದ್ದಾರೆ ಎಂದು ಭಾವುಕರಾಗಿ ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಸದಸ್ಯರ ಕೊರತೆ ನಡುವೆ 53 ಲಕ್ಷ ರೂ,ಗಳ ಉಳಿತಾಯ ಬಜೆಟ್ ಮಂಡಿಸಿದ್ದಾರೆ. 16 ಜನರಿಗೆ 11 ತಿಂಗಳ ವೇತನ ನೀಡಿಲ್ಲ, ಕನಿಷ್ಠ ವೇತನ ಪಾವತಿಯಾಗಿಲ್ಲ, ಡೀಸೆಲ್ ಬಾಕಿ, ಎಲೆಕ್ಟ್ರಿಷಿಯನ್ ಗುತ್ತಿಗೆದಾರರ 30 ಲಕ್ಷಕ್ಕೂ ಅಧಿಕವಾಗಿ ಬಾಕಿ ಪಾವತಿಸಬೇಕು, ನಗರಸಭಾ ಸದಸ್ಯರಿಗೆ ಗೌರವಧನ ಇಲ್ಲ ಆದರೂ ಉಳಿತಾಯ ಬಜೆಟ್ ಮಂಡಿಸಿರುವುದು ಹಾಸ್ಯಸ್ಪದ. – ಬಿ.ಅಫ್ಸರ್ ಪಾಷ. ನಗರಸಭೆ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.