ಕೋಡಿ ಹರಿದ ಅಮಾನಿಬೈರಸಾಗರ ಕೆರೆ
ಕೋಡಿ ನೀರಲ್ಲಿ ಮಿಂದೆದ್ದ ಜನ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆ
Team Udayavani, Oct 9, 2021, 3:31 PM IST
Representative Image used
ಗುಡಿಬಂಡೆ: ತಾಲೂಕಿನ ಜೀವನಾಡಿ ಅಮಾನಿಬೈರಸಾಗರ ಕೆರೆ ರಾತ್ರಿ ಬಿದ್ದ ಮಳೆಯಿಂದಾಗಿ ತುಂಬಿ ಕೋಡಿ ಹರಿದಿದ್ದು, ಜನರ ಮನದಲ್ಲಿ ಸಂತಸ ಮನೆ ಮಾಡಿದೆ. ನೀರು ನೋಡಲು ಜಾತ್ರೆಯಂತೆ ಜನ ಸೇರುತ್ತಿದ್ದಾರೆ.
2017ರಲ್ಲಿ ಕೋಡಿ ಹರಿದಿದ್ದ ಅಮಾನಿಬೈರಸಾಗರ ಕೆರೆ ಅಂದಿನಿಂದಲೂ 3 ಅಡಿ ಬಾಕಿ ಇರುವಷ್ಟರ ಮಟ್ಟಕ್ಕೆ ಬಂದು, ಮಳೆಕೊರತೆಯಿಂದಾಗಿ ಕೋಡಿ ಹರಿಯದೆ ನಿಲ್ಲುತ್ತಿತ್ತು, ಇದರ ಜೊತೆಗೆ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಹರಾಜು ಟೆಂಡರ್‌ದಾರರು ಪ್ರತಿ ಕೆರೆ ತುಂಬುವ ಮಟ್ಟಕ್ಕೆ ನೀರು ಬರುತ್ತಿದ್ದಂತೆ, ಸುತ್ತಲೂ ಮೀನುಗಳು ಹೊರಗಡೆ ಬಾರದಂತೆ ಫೆನ್ಸಿಂಗ್ ಹಾಕುತ್ತಿದ್ದರು. ಈ ಬಾರಿ ಕೆರೆ ತುಂಬುವ ಮಟ್ಟಕ್ಕೆ ನೀರು ಬರುತ್ತಿದ್ದಂತೆ ಜನರ ಒತ್ತಾಯದಿಂದ ಅಧಿಕಾರಿಗಳು ಫೆನ್ಸಿಂಗ್ ಹಾಕಲು ತಡೆನೀಡಿದ್ದರು. ಗುರುವಾರ ರಾತ್ರಿ ಬಿದ್ದ ಭಾರೀ ಮಳೆಯಿಂದ ಕೆರೆ ಕೋಡಿ ಹರಿದು ತಾಲೂಕಿನ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಜಾತ್ರೆ ವಾತಾವರಣ: ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಬಿದ್ದ ತಕ್ಷಣ ತಾಲೂಕಿನ ಜನರೆಲ್ಲೂ ಕೆರೆಯ ಬಳಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸೇರಿ ಅಲ್ಲಿ ಆಡವಾಡುತ್ತಾ, ನೀರಿನಲ್ಲಿ ಕುಣಿದು ಕುಪ್ಪಳಸಿ ಸಂಭ್ರಮಿಸುತ್ತಿದ್ದಾರೆ.
ಅಂತರ್ಜಲ ವೃದ್ಧಿ: ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹರಿಯುವ ನೀರಿನಿಂದ 40ಕ್ಕೂ ಹೆಚ್ಚು ಸಣ್ಣ ಪುಟ್ಟ ಕೆರೆ ತುಂಬಿ, ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ವೃದ್ಧಿಯಾಗುತ್ತದೆ.
ಪ್ರವಾಸಿ ತಾಣವಾದ ಕೆರೆ: ಗುಡಿಬಂಡೆ ಬೆಂಗಳೂರಿನಿಂದ 95 ಕಿ. ಮೀ ದೂರದಲ್ಲಿದ್ದು, ಬೆಂಗಳೂರಿಗೆ 100 ಕಿ.ಮೀ ಅಂತರ ಒಳಗಿನ ಒಂದು ದಿನದ ಪ್ರವಾಸಕ್ಕೆ ನಂದಿ ನಂತರದ ಪ್ರವಾಸಿ ತಾಣವಾಗಿ ಗುಡಿಬಂಡೆ ತಾಲೂಕಿನ ಸುರಸದ್ಮಗಿರಿ ಬೆಟ್ಟ, ಆವುಲಬೆಟ್ಟ, ಹತ್ತಿರದ ವಾಟದಹೊಸಹಳ್ಳಿ ಕೆರೆ ಹಾಗೂ ಅಮಾನಿಬೈರಸಾಗರ ಕೆರೆಯೂ ಸೇರ್ಪಡೆಗೊಂಡು, ವಾರಾಂತ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಭೇಟಿ ನೀಡುತ್ತಿದ್ದಾರೆ.
ರೈತರಿಗಿಲ್ಲ ಉಪಯೋಗ: 20 ವರ್ಷಗಳ ಹಿಂದೆ ಅಮಾನಿಬೈರ ಸಾಗರ ಕೆರೆ ತುಂಬಿದರೆ, ಕೆರೆಯ ನೀರನ್ನು ಅಚ್ಚುಕಟ್ಟಿನ ರೈತರ ಜಮೀನಿಗೆ ಹರಿಸಲಾಗುತ್ತಿತ್ತು. ಇದರಿಂದ ತಾಲೂಕಿನ ಯಾವುದೇ ಕೆಲಸವಿಲ್ಲದ ಜನರಿಗೆ ಕೃಷಿಯಿಂದಾದರೂ ಒಂದಷ್ಟು ಆದಾಯ ಪಡೆಯಬಹುದು. ಆದರೆ, ಇತ್ತೀಚಿಗೆ ಇಲ್ಲಿನ ಅಧಿಕಾರಿವರ್ಗದವರ ಬೇಜವಾಬ್ದಾರಿತನದಿಂದ ಕೆರೆಯ ನೀರನ್ನು ಬೆಳೆಗಳಿಗೆ ಬಿಡದೆ ರೈತರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ.
ಬಾಗಿನ ಅರ್ಪಿಸಿದ ಸುಬ್ಬಾ ರೆಡ್ಡಿ
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದ ಕನ್ಯಕಾಪರಮೇಶ್ವರಿಗೆ ದಸರಾ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಬಾಗೇಪಲ್ಲಿ ತಾಲೂಕಿನ ಕಟ್ಟಕಿಂದ ವೀರಭದ್ರಸ್ವಾಮಿಗೆ ದಸರಾ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ನವರಾತ್ರಿ ಪ್ರಯುಕ್ತ ಗೌರಿಬಿದನೂರು ನಗರ ಮಧುಗಿರಿ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಜಗತøಸೂತಿಕ ಅಲಂಕಾರವನ್ನು ಮಾಡಲಾಗಿತ್ತು.ಬಾಗೇಪಲ್ಲಿ ತಾಲೂಕಿನ ಕುಂಟ್ಲಪಲ್ಲಿಯಲ್ಲಿ ನಡೆದ ಲಸಿಕಾ ಆಂದೋಲನದಲ್ಲಿ ಆರೋಗ್ಯ ಸಹಾಯಕಿ ಲಕ್ಷ್ಮೀದೇವಿ ಲಸಿಕೆ ಹಾಕಿದರು. ಪಿ.ಎಸ್.ಅರುಣಾ, ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು. ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲಸಿಕಾ ಆಂದೋಲನಲ್ಲಿ ಆರೋಗ್ಯ ಸಹಾಯಕಿ ಲಸಿಕೆ ಹಾಕಿದರು. ಡಾ.ಐಶ್ವರ್ಯ, ಕರ ವಸೂಲಿಗಾರ ಶ್ರೀನಿವಾಸರೆಡ್ಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಳೆಗೆ ಏಳು ಮನೆಗಳು ಧರೆಗೆ
ಮುಳಬಾಗಿಲು: ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧ ಕಡೆಗಳಲ್ಲಿ 7 ಮನೆಗಳು ಬಿದ್ದಿದ್ದು, ರಸ್ತೆಗಳು ಕೆಸರುಗದ್ದೆಗಳಾಗಿ ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳಬಾಗಿಲು ನಗರದಲ್ಲಿ 89 ಮಿ.ಮೀ., ದುಗ್ಗಸಂದ್ರ 70.4 ಮಿ.ಮೀ., ಗೋಕುಂಟೆ 26.2 ಮಿ.ಮೀ., ನಂಗಲಿ 12.ಮಿ.ಮೀ., ಆವಣಿ 69 ಮಿ.ಮೀ., ಬೈರಕೂರು 31 ಮಿ.ಮೀ., ತಾಯಲೂರು 108 ಮಿ.ಮೀ. ಮಳೆಯಾಗಿದೆ. ಆದ್ದರಿಂದ ಆವಣಿ ಹೋಬಳಿ ವರದಗಾನಹಳ್ಳಿ ಗ್ರಾಮದಲ್ಲಿ ವೆಂಕಟನಾರಾಯಣಗೌಡ ಮತ್ತು ಬಾಬು ಸೇರಿ 5 ಮನೆ ಮತ್ತು ಬೊಮ್ಮಸಂದ್ರ
ಗ್ರಾಮದಲ್ಲಿ ಒಂದು ಮನೆ ಬಿದ್ದು ಹೋಗಿದೆ. ಎಸ್.ಚದುಮನಹಳ್ಳಿ ಗ್ರಾಮದ ರೈತ ಶ್ರೀನಿವಾಸ್‌ಗೆ ಸೇರಿದ ಒಂದು ಎಕರೆರಾಗಿ ಬೆಳೆ ಜಲಾವೃತವಾಗಿದೆ. ಅತಿಯಾದ ಮಳೆ ನೀರಿನಿಂದ ಆವಣಿ, ಗಂಜಿಗುಂಟೆ ನಡುವಿನ ರಸ್ತೆಯು ನೀರಿನಲ್ಲಿ ಮುಳುಗಿದ್ದು, ಜನರ ಓಡಾಟಕ್ಕೆ
ಇದನ್ನೂ ಓದಿ;- ಕೋವಿಡ್ ಗೆ ಬಲಿಯಾದ ತಂದೆಯ ಪಿಎಚ್ ಡಿ ಪದವಿ ಸ್ವೀಕರಿಸಿದ 14ರ ಪುತ್ರ!!
ಅಡ್ಡಿಯುಂಟಾಗಿದೆ. ಅದೇ ರೀತಿ ಎಸ್.ಚದುಮನಹಳ್ಳಿ ಮತ್ತು ಪದಕಾಸ್ಟಿ ರಸ್ತೆಯೂ ಇದೇ ರೀತಿ ನೀರಿನಲ್ಲಿ ಮುಳುಗಿದ್ದು, ಜನರ ಸಂಚಾರಕ್ಕೆ ತೊಂದರೆಯುಂಟಾಗಿದೆ. ಮುಳಬಾಗಿಲು ತಾಲೂಕಿನಲ್ಲಿ ಬಿದ್ದ ಧಾರಾಕಾರ ಮಳೆಯಿಂದ ಆವಣಿ, ಗಂಜಿಗುಂಟೆ ನಡುವಿನ ರಸ್ತೆಯು ನೀರಿನಲ್ಲಿ ಮುಳುಗಿದ್ದು, ಜನರ ಓಡಾಟಕ್ಕೆ ಅಡ್ಡಿ ಆಗಿದೆ.
ರೈತ ಪರ ಕಾರ್ಯಕ್ರಮ ಯಶಸ್ವಿ: ಕೆಂಪರಾಜು
ಗೌರಿಬಿದನೂರು: ತಾಲೂಕಿನಲ್ಲಿ ಬಡರೈತರಿಗೆ ಉಳುಮೆ ಮಾಡಿಕೊಟ್ಟ ಸಂದರ್ಭಕ್ಕೆ ತಕ್ಕಂತೆ ಸಕಾಲಕ್ಕೆ ಉತ್ತಮ ಮಳೆಯಾಗಿ, ಬೆಳೆಯೂ ಕೈಗೆ ಬಂದಿರುವುದು ಸಂತೋಷ ತಂದಿದೆ ಎಂದು ಕೆ.ಆರ್.ಸ್ವಾಮಿ ವಿವೇಕಾನಂದ ಫೌಂಡೇಷನ್‌ನ ಅಧ್ಯಕ್ಷ ಡಾ.ಕೆ.ಕೆಂಪರಾಜು ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಹಾಲಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗಾಂಧಿನಗರ ಗ್ರಾಮದ ರುದ್ರಯ್ಯ ಎಂಬ ಬಡರೈತ ಬೆಳೆದಿರುವ ಬೆಳೆಯನ್ನು ವೀಕ್ಷಿಸಿದ ನಂತರ ಮಾತನಾಡಿ, ರೈತರಿಗೆ ಸೇವೆ ಮಾಡುತ್ತಿರುವುದು ಅವರಿಗೆ ಸಂಪೂರ್ಣವಾಗಿ ತಲುಪುತ್ತಿದೆ. ಕುಡಿಯುವ ನೀರು, ಉಚಿತ ಮಣ್ಣು ಪರೀಕ್ಷೆ ಮಾಡಿಸುವುದು, ಆ ಮೂಲಕ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಅವರೇ ನಿರ್ಧರಿಸಿದಂತಾದಾಗ ಅವರು ಲಾಭದಾಯಕ ಕೃಷಿ ಮಾಡಿ ಸ್ವಾವಲಂಬಿಗಳಾಗುತ್ತಾರೆ ಎಂಬುದು ನನ್ನ ದೂರದೃಷ್ಟಿ ಚಿಂತನೆಯಾಗಿದೆ ಎಂದು ಹೇಳಿದರು.
ಅದರ ಜೊತೆಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಟೈಲರಿಂಗ್ ಸೇರಿ ಹಲವು ಕುಲಕಸುಬುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ನಮ್ಮ ಫೌಂಡೇಷನ್‌ನಿಂದ ನೇಮಿಸಿರುವ ಪ್ರತಿನಿಧಿಗೆ ತಿಳಿಸಿ ಎಂದು ಹೇಳಿದರು. ಪ್ರತಿನಿತ್ಯ ಬಡ ರೋಗಿಗಳ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸೇವೆ ನಿರಂತರವಾಗಿ ನಡೆಯುತ್ತಿದೆ.
ಬಡರೋಗಿಗಳಿಗೆ ಯಾವುದೇ ರೀತಿಯ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ವಿಫÇವಾಗಿದೆ ಎಂದರು. ಪಂಚಾಯ್ತಿ ವ್ಯಾಪ್ತಿಯ ಮುಖಂಡರು ಉಪಸ್ಥಿತರಿದ್ದರು. ಗೌರಿಬಿದನೂರು ತಾಲೂಕು ಗಾಂಧಿನಗರ ಗ್ರಾಮದ ರುದ್ರಯ್ಯ ಬೆಳೆದಿರುವ ಮಿಶ್ರಬೆಳೆಯನ್ನು ಕೆ.ಆರ್.ಸ್ವಾಮಿ ವಿವೇಕಾನಂದ ಫೌಂಡೇಷನ್ ಅಧ್ಯಕ್ಷ ಡಾ.ಕೆ.ಕೆಂಪರಾಜು ವೀಕ್ಷಿಸಿದರು.
ಚಿಕ್ಕಬಳ್ಳಾಪುರದ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ 1988ರ ಮೋಟಾರು ವಾಹನಗಳ ಕಾಯ್ದೆ ಮತ್ತು ಗ್ರಾಹಕರ ಕಾನೂನು ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾ.ಲಕ್ಷಿ$¾àಕಾಂತ್ ಜಾನಕಿ ಮಿಸ್ಕಿನ್ ಉದ್ಘಾಟಿಸಿದರು. ಗುಡಿಬಂಡೆ ಅಮಾನಿಬೈರ ಸಾಗರ ಕೆರೆ ಕೋಡಿ ಹರಿಯುತ್ತಿರುವ ನೀರಲ್ಲಿ ಮಿಂದು ಜನರು ಸಂಭ್ರಮಪಟ್ಟರು.
ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹೋಗಿದ್ದರಿಂದ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತಿದೊಡ್ಡ ಕೆರೆಯಾದ ಅಮಾನಿಬೈರಸಾಗರವು ತುಂಬಿರುವುದು ಸಂತಸ ತಂದಿದೆ ಎಂದು ಹೇಳಿದರು. ಪೂರ್ವಜರು ಕೆರೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರು, ಒಂದು ಕೆರೆಯು ತುಂಬಿದರೆ, ಅದರ ನೀರು ಪೋಲು ಆಗದಂತೆ, ಮತ್ತೂಂದು ಕೆರೆಗೆ ಹೋಗುವಂತೆ ಮಾಡಿ ರಾಜ ಕಾಲುವೆಗಳನ್ನು ನಿರ್ಮಾಣ ಮಾಡಿದ್ದಾರೆ.
ಈಗ ಹಲವು ಕೆರೆಗಳು ಒತ್ತುವರಿಯಾಗಿ, ಮುಚ್ಚಿರುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಹೇಳಿದರು. ತಹಶೀಲ್ದಾರ್ ಸಿಗ್ಬತುಲ್ಲಾ, ಇಒ ರವೀಂದ್ರ, ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ, ಬಾಲಕೃಷ್ಣಾರೆಡ್ಡಿ, ಪ್ರಕಾಶ್, ಪಪಂ ನೂತನ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.