ಕೋವಿಡ್-19 ಮುಕ್ತಕ್ಕೆ ಸಹಕರಿಸಿ
Team Udayavani, Apr 12, 2020, 2:05 PM IST
ಗೌರಿಬಿದನೂರು: ಕೋವಿಡ್-19ಶೀಘ್ರದಲ್ಲೇ ಗೌರಿಬಿದನೂರು, ಚಿಕ್ಕಬಳ್ಳಾಪುರದಿಂದ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು. ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 12 ಕೋವಿಡ್-19 ಸೋಂಕಿತ ಪ್ರಕರಣಗಳು ಕೇವಲ 2 ಕುಟುಂಬದಲ್ಲಿ ಪತ್ತೆಯಾಗಿವೆ. ಸರ್ಕಾರವು ತೆಗೆದುಕೊಂಡು ಮಾರ್ಗ ಸೂಚಿಗಳು ಮತ್ತು ಕಾರ್ಯ ಬದ್ಧತೆಯಿಂದ 3ನೇ ಸ್ಥಾನದಲ್ಲಿದ್ದ ರಾಜ್ಯವು 13ನೇ ಸ್ಥಾನಕ್ಕೆ ತಲುಪಿದೆ. ರಾಜ್ಯದಲ್ಲಿ 207 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 30 ಮಂದಿ ಗುಣಮುಖರಾಗಿದ್ದಾರೆ. ಇದರಲ್ಲಿ ಪ್ರಸ್ತುತ ತಾಲೂಕಿನಲ್ಲಿ 8 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಮಿಥುನ್ ಕುಮಾರ್, ಸಿಇಒ ಬಿ.ಫೌಜಿಯಾ ತರನಮ…, ಉಪವಿಭಾಗಾಧಿಕಾರಿ ರಘುನಂದನ್, ಡಿವೈಎಸ್‌ಪಿ ರವಿಶಂಕರ್, ಕೋವಿಡ್-19 ವಿಶೇಷ ಅಧಿಕಾರಿ ಬಿ.ಎನ್.ವರಪ್ರಸಾದ ರೆಡ್ಡಿ, ತಹಶೀಲ್ದಾರ್ ಎಂ.ರಾಜಣ್ಣ, ಇಒ ಎನ್.ಮುನಿರಾಜು, ಆಯುಕ್ತ ಜಿ.ಎನ್. ಚಲಪತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಮುಕಲ ಹಳ್ಳಿ ಪ್ರಕಾಶ್ ರೆಡ್ಡಿ, ಮಾಜಿ ಶಾಸಕಿ ಎನ್. ಜ್ಯೋತಿ ರೆಡ್ಡಿ, ಮುಖಂಡ ಎನ್.ಎಂ.ರವಿ ನಾರಾಯಣ ರೆಡ್ಡಿ, ಬಿ.ಜಿ.ವೇಣುಗೋಪಾಲ ರೆಡ್ಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.