ಪ.ಪಂಗಡ ಜನಾಂಗ ಅಭಿವೃದ್ಧಿಗೆ ಬದ್ದ
Team Udayavani, Apr 19, 2021, 3:28 PM IST
ಗೌರಿಬಿದನೂರು: ತಾಲೂಕಿನಲ್ಲಿ ಪ.ಪಂಗಡಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಸಮಗ್ರ ಅಭಿವೃದ್ಧಿಗೆ ತಾಲೂಕು ಆಡಳಿತ ಬದ್ಧವಾಗಿದೆಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.ನಗರದ ತಾಪಂ ಆವರಣದಲ್ಲಿ ವಾಲ್ಮೀಕಿ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮದಿಂದ ಫಲಾನುಭಗಳಿಗೆಗಂಗಕಲ್ಯಾಣ ಯೋಜನೆಯಡಿ ಪಂಪ್ ಮೋಟರ್‌ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ.ಜಾತಿಮತ್ತು ಪ.ಪಂಗಡಗಳ ಅನುದಾನ ಯಾವುದೇಕಾರಣಕ್ಕೂ ಬೇರೆ ಕೆಲಸಗಳಿಗೆ ಬಳಸಬಾರದು. ಸದರಿಹಣ ಸಮರ್ಪಕವಾಗಿ ಬಳಕೆಯಾಗಬೇಕು. ಹಣಸರ್ಕಾರಕ್ಕೆ ವಾಪಸ್ಸಾಗಬಾರದು ಎಂದು ಅಧಿಕಾರಿಗಳಿಗೆಸೂಚನೆ ನೀಡಿದರು.
ತಾಲೂಕಿಗೆ ಹರಿಯಲಿದೆ ಎಚ್.ಎನ್.ವ್ಯಾಲಿ ನೀರು:ಎಚ್.ಎನ್. ವ್ಯಾಲಿ ನೀರು ಇನ್ನೊಂದು ವಾರದಲ್ಲಿತಾಲೂಕಿಗೆ ಹರಿಯಲಿದೆ. ಈಗಾಗಲೇ ಪೈಪ್‌ಲೈನ್‌ಅಳವಡಿಕೆ ಕಾರ್ಯ ಪೂರ್ಣವಾಗಿದೆ. ಪ್ರಾಯೋಗಿಕವಾಗಿ ನೀರನ್ನು 2 ದಿನಗಳಲ್ಲಿ ಹರಿಸಲಿದ್ದಾರೆ. ನಂತರಮುಂದಿನ ವಾರದಲ್ಲಿ ತಾಲೂಕಿನ ಕೆಲವು ಕೆರೆಗಳಿಗೆನೀರು ಬರಲಿದೆ. ಇದರಿಂದ ಹಲವು ದಶಕಗಳಿಂದತಾಲೂಕಿಗೆ ಕಾಡಿದ್ದ ನೀರಿನ ಸಮಸ್ಯೆ ನೀಗಲಿದೆ.
ಈಗಾಗಲೇ ಪೈಪ್‌ಲೈನ್ ಅಳವಡಿಕೆ ಮತ್ತು ಭೂ ಸ್ವಾಧೀನಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು, ಕೊರಟಗೆರೆಸಮೀಪದವರೆಗೂ ಕಾಮಗಾರಿ ನಡೆದಿದೆ ಎಂದರು.ತಾಪಂ ಅಧ್ಯಕ್ಷ ಅರ್.ಲೋಕೇಶ್, ಡಿಸಿಸಿ ಬ್ಯಾಂಕ್‌ನಿರ್ದೇಶಕ ಮರಳೂರು ಹನುಮಂತ ರೆಡ್ಡಿ, ಎಚ್.ಎನ್.ಪ್ರಕಾಶ್ ರೆಡ್ಡಿ, ವಾಲ್ಮೀಕಿ ನಿಗಮದ ಅಧಿಕಾರಿ ವೆಂಕಟರಮಣ, ಕಾರ್ಯದರ್ಶಿ ವೆಂಕಟ್ ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.