ಶಾಸಕರ ಸಮ್ಮುಖದಲ್ಲಿ 2 ಗುಂಪುಗಳ ನಡುವೆ ಘರ್ಷಣೆ
Team Udayavani, Dec 29, 2019, 3:00 AM IST
ಗುಡಿಬಂಡೆ: ತಾಲೂಕಿನ ಗೆಗ್ಗಿಲರಾಳ್ಳಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಮ್ಮುಖದಲ್ಲಿ ಎರಡು ಗುಂಪುಗಳ ನಡುವೆ ಅವಾಚ್ಯ ಶಬ್ದಗಳ ನಿಂದನೆ, ಘರ್ಷಣೆ ನಡೆದಿರುವ ಘಟನೆ ಗೆಗ್ಗಿಲರಾಳ್ಳಹಳ್ಳಿಯಲ್ಲಿ ಶನಿವಾರ ನಡೆದಿದೆ.
ತಾಲೂಕಿನ ಸೋಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗೆಗ್ಗಿಲರಾಳ್ಳಹಳ್ಳಿಯಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಡಿ.28 ರಂದು ದಿನಾಂಕ ನಿಗದಿಯಾಗಿತ್ತು. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಘಟಕದ ಉದ್ಘಾಟನೆ ನೆರವೇರಿಸಿ ವಾಪಸ್ಸಾಗುವ ವೇಳೆ ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಪತಿ ಮಂಜುನಾಥ್ ಹಾಗೂ ತಾಪಂ ಅಧ್ಯಕ್ಷೆ ಪತಿ ಕೃಷ್ಣೇಗೌಡರ ನಡುವೆ ಹಳೆಯ ಕಾಮಗಾರಿಯೊಂದರ ವಿಚಾರಕ್ಕೆ ವಾಕ್ಸಮರ ಉಂಟಾಗಿದೆ.
ಇದೇ ವೇಳೆ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದ್ದರೂ ಕೂಡ ತಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕ ಸುಬ್ಬಾರೆಡ್ಡಿ ವಿರುದ್ಧ ಮಂಜುನಾಥ ದೂರಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಮಂಜುನಾಥ ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
ಹೊಡೆದಾಟ: ಶಾಸಕರಿಗೆ ಏಕವಚನದಲ್ಲಿ ಮಾತನಾಡಿದ್ದೀರಿ ಎಂದು ಮಂಜುನಾಥ ಮೇಲೆ ಶಾಸಕರ ಬೆಂಬಲಿಗರು ಹಾಗೂ ಮಂಜುನಾಥ ಪರವಾಗಿ ಕೆಲವರ ಮಧ್ಯೆ ಮಾತಿನ ಚಕಮಕಿ ನಡೆದು ಗಂಡಸರು, ಹೆಂಗಸರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸ್ವಲ್ಪ ಸಮಯದ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಗುಡಿಬಂಡೆ ಪೊಲೀಸರು ಗಲಾಟೆಯನ್ನು ಶಮನಗೊಳಿಸಿದರು.
ಗಲಾಟೆಗೆ ಕಾರಣ: ಗಲಾಟೆಗೆ ಮುಖ್ಯ ಕಾರಣ ಗೆಗ್ಗಿಲರಾಳ್ಳಹಳ್ಳಿ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ಕೇಬಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಪತಿ ಮಂಜುನಾಥ್ ಅಳವಡಿಸಿದ್ದು, ಈ ಕೇಬಲ್ ಹಣವನ್ನು ತಾಪಂ ಅಧ್ಯಕ್ಷೆ ಪತಿ ಕೃಷ್ಣೇಗೌಡ ಬ್ಯಾಂಕ್ ಖಾತೆಗೆ 1.18 ಲಕ್ಷ ರೂ . ಜಮಾ ಆಗಿದೆ ಎನ್ನಲಾಗಿದೆ. ಇದರಲ್ಲಿ 68000 ರೂ. ಕೊಟ್ಟಿದ್ದು, ಉಳಿದ 50000 ರೂ. ನಮಗೆ ಕೊಡಿಸಬೇಕೆಂದು ಮಂಜುನಾಥ ಶಾಸಕರಿಗೆ ಕೇಳಿದರು.
ಆಗ ಶಾಸಕರು ಕೃಷ್ಣೇಗೌಡರಿಂದ 50 ಸಾವಿರ ರೂ. ಮಂಜುನಾಥ್‌ಗೆ ಕೊಡಿಸಿ ಎಂದು ಎಡಬ್ಲೂಇಗೆ ತಿಳಿಸಿರುತ್ತಾರೆ. ಬಳಿಕ ಕೃಷ್ಣೇಗೌಡ ಮತ್ತು ಮಂಜುನಾಥ್ ಬೆಂಬಲಿಗರು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಜುನಾಥ್ ಹಾಗೂ ಕೃಷ್ಣೇಗೌಡರ ಮಧ್ಯೆ ಈ ಹಿಂದೆ ಉತ್ತಮ ಸಂಬಂಧ ಇದ್ದಾಗ ಕೊಳವೆಬಾವಿಗೆ ಕೇಬಲ್ ಅಳವಡಿಸಲಾಗಿತ್ತು. ಇದರ ಹಣವನ್ನು ಮಂಜುನಾಥ್ ಭರಿಸಿದ್ದರು ಎನ್ನಲಾಗಿದೆ.
ಜಾತಿ ನಿಂದನೆ ದೂರು: ನಿವೇಶನಗಳ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗ್ರಾಪಂ ಅಧ್ಯಕ್ಷೆ ಪತಿ ಮತ್ತು ಸಂಬಂಧಿರು ಜಾತಿ ನಿಂದನೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ. ನಮಗೆ ನ್ಯಾಯ ನೀಡಿ ರಕ್ಷಣೆ ನೀಡಬೇಕೆಂದು ಮಂಜುನಾಥ್ ವಿರುದ್ಧ ಗೆಗ್ಗಿಲರಾಳ್ಳಿ ಲಕ್ಷ್ಮಮ್ಮ ಎಂಬುವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರತಿ ದೂರು: ಈ ಬಗ್ಗೆ ಗ್ರಾಪಂ ಅಧ್ಯಕ್ಷೆ ರಜನಿ ಸಹ ನಮ್ಮ ಮೇಲೆ ಕೃಷ್ಣೇಗೌಡ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಪ್ರತಿ ದೂರನ್ನು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ.
ರೌಡಿಸಂಗೆ ಹೆದರುವ ವ್ಯಕ್ತಿಯಲ್ಲ – ಸುಬ್ಬಾರೆಡ್ಡಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೋಮೇಶ್ವರ ಗ್ರಾಮದ ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವೇಳೆ ನಾನು ಕ್ಷೇತ್ರದ ಉದ್ಧಾರಕ್ಕೆ ಬಡವರ ಕಲ್ಯಾಣಕ್ಕಾಗಿ ಶಾಸಕನಾಗಿರುವುದು. ನಿಮ್ಮ ಕೆಲಸಗಳನ್ನು ಮಾಡಿಕೊಡಲು ನಾನಿರುವುದು. ನಿಮ್ಮ ಸಮಸ್ಯೆಗಳನ್ನು ನೇರವಾಗಿ ಬಂದು ನನ್ನ ಬಳಿ ಹೇಳಿ.
ಗುಂಪಾಗಿ ಬರುವುದು, ರೌಡಿಸಂ ಮಾಡುವುದು ಸರಿಯಲ್ಲ. ರೌಡಿಸಂಗೆ ಹೆದರುವ ವ್ಯಕ್ತಿ ನಾನಲ್ಲ ಎಂದರು. ಅಭಿವೃದ್ಧಿ ವಿಚಾರಕ್ಕೆ ಕಾಲು ಬೇಕಾದರೂ ಹಿಡಿಯುತ್ತೇನೆ. ಆದರೆ ರೌಡಿಸಂ, ದೌರ್ಜನ್ಯಗಳನ್ನು ಎಲ್ಲಿ ಮಟ್ಟ ಹಾಕಬೇಕೊ ಅಲ್ಲಿಯೇ ಮಟ್ಟ ಹಾಕುತ್ತೇನೆ ಎಂದು ಗೆಗ್ಗಿಲರಾಳ್ಳಹಳ್ಳಿ ಬಳಿ ನಡೆದ ಘಟನೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.