ಸೋಂಕು ನಿಯಂತ್ರಣಕ್ಕೆ ಸಹಕರಿಸಿ
Team Udayavani, Apr 16, 2021, 3:17 PM IST
ಶಿಡ್ಲಘಟ್ಟ: ಸರ್ಕಾರ-ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ದೇಶವನ್ನು ಕೊರೊನಾ ಮುಕ್ತ ಮಾಡಲು ಸಹಕರಿಸಬೇಕೆಂದುಶಾಸಕ ವಿ.ಮುನಿಯಪ್ಪ ಮನವಿ ಮಾಡಿದರು.ನಗರದ ಪ್ರವಾಸಿ ಮಂದಿರದಲ್ಲಿ ವಿವಿಧಮಸೀದಿಗಳ ಮುಖ್ಯಸ್ಥರೊಂದಿಗೆ ಸಭೆನಡೆಸಿ ಮಾತನಾಡಿದ ಅವರು, ಕೊರೊನಾಸೋಂಕು ಕೇವಲ ನಮ್ಮ ದೇಶ ಮಾತ್ರವಲ್ಲಇಡೀ ಜಗತ್ತನ್ನು ತಲ್ಲಣಗೊಳಿಸಿದೆ.
ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರು ಇದನ್ನುಗಂಭೀರವಾಗಿ ಪರಿಗಣಿಸಿ ಆರೋಗ್ಯಕಾಪಾಡಿಕೊಳ್ಳಬೇಕು. ಸರ್ಕಾರ 45 ವರ್ಷಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆನೀಡುವ ವ್ಯವಸ್ಥೆ ಮಾಡಿದ್ದು ಅದನ್ನುಸದುಪಯೋಗ ಮಾಡಿಕೊಂಡು ಆರೋಗ್ಯಕಾಪಾಡಿಕೊಳ್ಳಬೇಕೆಂದರು.ಇಡೀ ಜಗತ್ತಿನಲ್ಲಿ ಪವಿತ್ರ ರಂಜಾನ್‌ಮಾಸ ಆರಂಭವಾಗಿದೆ.
ಕೊರೊನಾಸೋಂಕು ನಿಯಂತ್ರಿಸಲು ವಿಶೇಷಪ್ರಾರ್ಥನೆ ಸಲ್ಲಿಸಬೇಕೆಂದು ಮನವಿಮಾಡಿದ ಶಾಸಕರು, ಮುಸ್ಲಿಮರಲ್ಲಿ 45ವರ್ಷ ಮೇಲ್ಪಟ್ಟ ನಾಗರಿಕರು ಲಸಿಕೆಪಡೆದುಕೊಳ್ಳಲು ಮಸೀದಿ ಮುಖ್ಯಸ್ಥರುಅರಿವು ಮೂಡಿಸಬೇಕು ಎಂದರು.ತಹಶೀಲ್ದಾರ್ ಬಿ.ಎಸ್.ರಾಜೀವ್‌ಮಾತನಾಡಿ, ಮಂದಿರ, ಮಸೀದಿ, ಚರ್ಚೆಸಹಿತ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರುಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲುತಾಲೂಕು ಆಡಳಿತ ಮತ್ತು ಆರೋಗ್ಯಇಲಾಖೆಯೊಂದಿಗೆ ಕೈಜೋಡಿಸಬೇಕೆಂದುಮನವಿ ಮಾಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇ ಶ್ ಮೂರ್ತಿ ಮಾತನಾಡಿ, ಶಿಡ್ಲಘಟ್ಟನಗರದಲ್ಲಿ ಪ್ರತಿ ನಿತ್ಯ ಸುಮಾರು 500 ಮಂದಿಗೆಲಸಿಕೆ ಹಾಕುವ ಗುರಿ ಹೊಂದಿದ್ದೇವೆ.
ಪ್ರತಿಯೊಂದು ಮಸೀದಿಗಳಲ್ಲಿ ವ್ಯಾಪಕಅರಿವು, ಜಾಗೃತಿ ಮೂಡಿಸಬೇಕು ಎಂದರು.ಜಾಮೀಯಾ ಮಸೀದಿ ಅಧ್ಯಕ್ಷ ಎಚ್.ಎಸ್.ರμàಕ್ ಅಹಮದ್ ರಾಜ್ಯಅಲ್ಪಸಂಖ್ಯಾತರ ಇಲಾಖೆ ಪ್ರಧಾನಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಅವರಆದೇಶದ ಪ್ರತಿಯನ್ನು ಉರ್ದುಭಾಷೆಯನ್ನು ಅನುವಾದ ಮಾಡಿ ಎಲ್ಲಾಮಸೀದಿಗಳಿಗೆ ಹಂಚಿಕೆ ಮಾಡುವ ಕೆಲಸಮಾಡಿದ್ದೇವೆ.
ಇನ್ನು ಲಸಿಕಾ ಅಭಿಯಾನಯಶಸ್ವಿಗೆ ಸಹಕಾರ ಮತ್ತು ನೆರವುನೀಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತಶ್ರೀನಿವಾಸ್, ಆರೋಗ್ಯ ನಿರೀಕ್ಷಕ,ಜಾಮೀಯಾ ಮಸೀದಿ ಕಾರ್ಯದರ್ಶಿಬಿ.ಅಬ್ದುಲ್ ಸಲಾಂ, ಆಮೀರಿಯಾಮಸೀದಿಯ ಬಾಬಾ, ಸಾದಿಕ್‌ಪಾಷಾ,μದಾಹುಸೇನ್, ಮುನೀರ್, ಡಿಸಿಸಿಪ್ರಧಾನ ಕಾರ್ಯದರ್ಶಿ ಮಧುಸೂದನ್,ತಾಲೂಕು ಮಾದಿಗ ದಂಡೋರ ಹೋರಾಟಸಮಿತಿ ಅಧ್ಯಕ್ಷ ಮುನಿರಾಜು(ದಾಮೋದರ್) ನರಸಿಂಹಮೂರ್ತಿ,ವಿವಿಧ ಮಸೀದಿಗಳ ಮುಖ್ಯಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.