ರಾಜ್ಯದಲ್ಲಿ ಕೊವಿಡ್-19 ಸೋಂಕು ನಿಯಂತ್ರಣದಲ್ಲಿದೆ: ಸಚಿವ ಡಾ.ಕೆ.ಸುಧಾಕರ್
Team Udayavani, Apr 28, 2020, 6:02 PM IST
ಚಿಕ್ಕಬಳ್ಳಾಪುರ: ಇಡೀ ದೇಶಕ್ಕೆ ಹೋಲಿಸಿದರೆ ಮಹಾಮಾರಿ ಕೋವಿಡ್-19 ಸೋಂಕು ರಾಜ್ಯದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದೆಯೆಂದು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲಾ ಕೇಂದ್ರದ ಮರಳು ಸಿದ್ದೇಶ್ವರ ದೇವಾಲಯದ ಬಳಿ ಸಂಬಾರಿ ಸ್ವಾಬ್ ಟೆಸ್ಟಿಂಗ್ ಘಟಕಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ ಇದುವರೆಗೂ 520 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 198 ಮಂದಿ ಮಂದಿ ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 20 ಮಂದಿ ನಿಧನರಾಗಿದ್ದಾರೆ. ರಾಜ್ಯದಲ್ಲಿ 300 ಪ್ರಕರಣಗಳು ಆಕ್ಟೀವ್ ಕೇಸ್‌ಗಳು ಇವೆ ಎಂದರು.
ಜಿಲ್ಲೆಯಲ್ಲಿ 18 ಸೋಂಕಿತರ ಪೈಕಿ ಇಬ್ಬರು ನಿಧನರಾಗಿದ್ದಾರೆ. 11 ಮಂದಿ ಗುಣಮುಖರಾಗಿದ್ದಾರೆ. 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. 15 ಪ್ರಕರಣಗಳಿಂದ ಹೆಚ್ಚಾಗಿದ್ದೆ ಆ ಜಿಲ್ಲೆಗಳನ್ನು ರೆಡ್‌ಜೋನ್ ವಲಯವಾಗಿ ಗುರುತಿಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಸದ್ಯ 5 ಪ್ರಕರಣಗಳು ಮಾತ್ರ ಇವೆ ಎಂದರು. ನೆರೆಯ ಆಂಧ್ರಪ್ರದೇಶದ ಹಿಂದೂಪುರವನ್ನು ಸಂಪೂರ್ಣ ರೆಡ್‌ಜೋನ್ ಆಗಿರುವುದರಿಂದ ಆಂದ್ರದ ಗಡಿಯಲ್ಲಿ ಜಿಲ್ಲೆ ಇರುವುದರಿಂದ ಮೇ.3 ರ ವರೆಗೂ ಲಾಕ್‌ಡೌನ್ ಮುಂದುವರೆಸಲಾಗುವುದೇ ಅದೇ ರೀತಿ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಗರದಲ್ಲಿ ಜಾರಿಯಲ್ಲಿರುವ ಸೀಲ್ ಡೌನ್‌ನ್ನು ಮೇ.3 ರ ತನಕ ಮುಂದುವರೆಸಲಾಗುವುದೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.