ಕೊರೊನಾ ಕರಿನೆರಳಲ್ಲೇ ಸಂಕ್ರಾಂತಿ ಆಚರಣೆ
Team Udayavani, Jan 15, 2022, 1:27 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ, ಒಮಿಕ್ರಾನ್ ಸೋಂಕಿನ ಭೀತಿ ನಡುವೆಯೂ ಜನಸಾಮಾನ್ಯರು ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸುತ್ತಿದ್ದು, ಶುಕ್ರವಾರ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು.
ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ದರ ಏರಿಕೆ ನಡುವೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಜನ ಮುಂದಾಗಿದ್ದರು. ಕೆಲವರು ಕೊರೊನಾಭೀತಿಯಿಂದ ಅಗತ್ಯ ವಸ್ತುಗಳ ಖರೀದಿಸಲು ಹಿಂಜರಿದರು. ಆದರೂ, ವ್ಯಾಪಾರ ನಡೆಯಿತು.
ಒಮಿಕ್ರಾನ್ ಸಂಕಷ್ಟ: ಎರಡು ವರ್ಷದಿಂದ ಕೋವಿಡ್ ಮೊದಲ, 2ನೇ ಅಲೆಯು ಬಹುತೇಕ ಹಬ್ಬಗಳಸಂಭ್ರಮಕ್ಕೆ ಕುತ್ತು ತಂದಿತ್ತು. ಇನ್ನು ಕೊರೊನಾ ಆತಂಕ ದೂರಾಯಿತು ಎಂದು ನಿಟ್ಟುಸಿರು ಬಿಟ್ಟ ಜನರಿಗೆ ಕೋವಿಡ್ 3ನೇ ಅಲೆಯ ಜತೆಗೆ, ಒಮಿಕ್ರಾನ್ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಪ್ರದೇಶಗಳಲ್ಲಿ ವಿಶೇಷವಾಗಿ ಆನೇಕ ವೃತ್ತಗಳಲ್ಲಿ ಕಬ್ಬು,ಕಡಲೆಕಾಯಿ, ಅವರೆಕಾಯಿ ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.
ನಿರೀಕ್ಷಿತ ವ್ಯಾಪಾರ ನಡೆದಿಲ್ಲ: ಕಬ್ಬು ಒಂದು ಜೋಡಿ 100 ರಿಂದ 150 ರೂ., ಕಡಲೆಕಾಯಿ ಒಂದು ಕೇಜಿ 80 ರಿಂದ 100 ರೂ., ಅವರೆಕಾಯಿ ಒಂದು ಕೇಜಿ 80 ರೂ. ಗೆ ಮಾರಾಟ ಮಾಡುತ್ತಿದ್ದರು. ಇನ್ನು ಒಂದು ಕೆಜಿ ಏಲಕ್ಕಿ ಬಾಳೆ 35 ರೂ., ಪಚ್ಚಬಾಳೆ 20 ರೂ., ದಾಳಿಂಬೆ 180ರೂ., ಸೇಬು 170 ರಿಂದ 180 ರೂ., ಅನಾನಸ್ ಒಂದು 50 ರೂ.ಗೆ ಮಾರಾಟ ಮಾಡುತ್ತಿದ್ದರು. ಇನ್ನೂ ಹಲವುವ್ಯಾಪಾರಸ್ಥರು ಹಬ್ಬದ ಅಂಗವಾಗಿ ವಿಶೇಷ ಖರೀದಿಗೆಮುಂದಾಗಲಿಲ್ಲ, ಕೊರೊನಾ ಸೋಂಕಿನ ಪ್ರಭಾವ ಈ ಬಾರಿಗೆ ಸಂಕ್ರಾಂತಿ ಹಬ್ಬದ ಖರೀದಿ ಮೇಲೆ ಬಿದ್ದಿದೆ.
ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆದಿಲ್ಲ ಎಂದು ತಮ್ಮಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲುಹಬ್ಬದಿನದಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ ಎಂದು ನಾಗರಿಕರು ಕಳೆದ ಎರಡು ಮೂರು ದಿನಗಳಿಂದ ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ನಾಗರಿಕರು ಖರೀದಿಗೆಬಂದಿಲ್ಲ ಎಂಬುದು ವ್ಯಾಪಾರಸ್ಥರ ಅಳಲು. ಒಟ್ಟಾರೆವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕೊರೊನಾಸೋಂಕಿನ ಕರಿನೆರಳು ಆವರಿಸಿದ್ದು, ನಾಗರಿಕರು ಸಂಪ್ರದಾಯದಂತೆ ಹಬ್ಬ ಆಚರಿಸಲು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.